ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸುವ ಪ್ರಸ್ತಾವನೆಯೇ ಇಲ್ಲ : ಸವದಿ

ಕೊಪ್ಪಳ: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪನ್ನು ಖಂಡಿಸಲಾಗದು, ಆದರೆ ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಬಿಜೆಪಿ ವಿಶ್ವನಾಥ್ ಅವರ ಬೆನ್ನಿಗೆ ನಿಲ್ಲುತ್ತೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಕೊಪ್ಪಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಕಹಿ ಘಟನೆಗಳಿಂದ ಬೇಸರವಾಗುವುದು ಸಹಜ. ಬೇಸರದಲ್ಲಿ ವಿಶ್ವನಾಥ್ ಅವರು ಸಾಹಿತ್ಯೀಕ ಧಾಟಿಯಲ್ಲಿ ಮಾತನಾಡಿರಬಹುದು. ವಿಶ್ವನಾಥ್ ಸೇರಿದಂತೆ ಬೇರೆ ಪಕ್ಷಗಳಿಂದ ಬಿಜೆಪಿ ಸೇರಿದ ಶಾಸಕರ ಬಗ್ಗೆ ಬಿಜೆಪಿ ಸದಾ ಜೊತೆಗಿರುತ್ತದೆ ಎಂದರು.

ಸಿದ್ದರಾಮಯ್ಯನವರು ತಮಗಾದ ಅನುಭವ ಹೇಳಿಕೊಳ್ಳುತ್ತಾರೆ. ಬಿಜೆಪಿಯಲ್ಲಂತು ಭಿನ್ನಮತವಿಲ್ಲ. ಒಗ್ಗಟ್ಟಿನಿಂದ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಮತ್ತು ಪಕ್ಷದ ನಾಯಕರು, ಸಚಿವರು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ಗ್ರಾಮ ಸ್ವರಾಜ್ ಮಾಡ್ತಾ ಇದ್ದೇವೆ. 6 ತಂಡಗಳಿಂದ 62 ಸಭೆ 30 ಜಿಲ್ಲಾದ್ಯಂತ ನಡೆಸಲಿದ್ದೇವೆ. ಪಕ್ಷದ ಬೆಂಬಲಿಗರನ್ನು, ಶ್ರಮಿಸಿದ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು. ಗ್ರಾಮ ಸ್ವರಾಜ್ಯ ಕನಸು, ನನಸಾಗಿಸಲು ಪಕ್ಷ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ಚುಕ್ಕಾಣಿ ನೀಡಲು ಪಕ್ಷ ಯೋಚಿಸಿದೆ. ಬೂತ್‌ವೊಂದರಲ್ಲಿ ಪಂಚರತ್ನ ಕಮಿಟಿ ಇರುತ್ತೆ.ಈ ಕಮಿಟಿ ಎಲ್ಲ ಕುಟುಂಬಗಳನ್ನು ಭೇಟಿ ಮಾಡಿ ಮತ ಕೇಳುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಸಮಗ್ರ ಮಾಹಿತಿ ನೀಡಿದರು.

ಇನ್ನುಳಿದ ಅವಧಿಗೂ ಯಡಿಯೂರಪ್ಪ ಅವರೇ ಸಿಎಂ- ಸಚಿವ ಆನಂದ್ ಸಿಂಗ್

ಅರಣ್ಯ ಜಾಗವನ್ನು ಎಲ್ಲೇ, ಯಾರೇ ಒತ್ತುವರಿ ಮಾಡಿದ್ರೂ ಸಹಿಸಲ್ಲ, ಕಾನೂನು ಮೀರಿ ಸಸ್ಯ ಸಂಪತ್ತನ್ನು ವಿನಾಶ ಮಾಡಿದ್ರೆ ಕ್ರಮ ಖಚಿತ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು. ಕೊಪ್ಪಳದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಚ್.ವಿಶ್ವನಾಥ್ ಅವರಿಗೆ ಅನ್ಯಾಯ ಆಗಲು ಬಿಡಲ್ಲ. ಆ ರೀತಿ ಏನಾದರೂ ಆದರೆ ನಾವು ಅವರ ಹಿಂದೆ ನಿಲ್ಲುತ್ತೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಸರಕಾರದ ಇನ್ನುಳಿದ ಅವಧಿಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಅವರು ತಿಳಿಸಿದರು.

Please follow and like us:
error