ಮೇ ೪ ರಿಂದ ಮದ್ಯ ಮಾರಾಟಕ್ಕೆ ಅನುಮತಿ ಹಿಂಪಡೆಯಲು ಹಾಗೂ ಸಂಪೂರ್ಣ ಪಾನ ನಿಷೇಧ ಮಾಡಲು ಎಐಡಿವೈಓ ಆಗ್ರಹ

Koppal ಕೊರೋನಾ ಸೋಂಕು ಪ್ರಸರಣ ತಡೆಗಾಗಿ ದೇಶವೇ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ದೇಶದಾದ್ಯಾಂತ ಮದ್ಯಪಾನ ಮಾರಾಟವನ್ನು ಲಾಕ್‌ಡೌನ್ ಅವಧಿ ಮುಗಿಯುವವರೆಗೂ ನಿಷೇಧಿಸಲಾಗಿತ್ತು. ಅದೇ ರೀತಿಯಲ್ಲಿ ರಾಜ್ಯದಲ್ಲಿಯು ಕೂಡಾ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಆದರೆ ಕರ್ನಾಟಕ ರಾಜ್ಯದಲ್ಲಿ ಸರಕಾರವು ತನ್ನ ರಾಜಸ್ವವನ್ನು ಗಮನದಲ್ಲಿಟ್ಟುಕೊಂಡು ಲಾಕ್‌ಡೌನ್ ೩.೦ ಜಾರಿಯಾಗುವ ಮೇ ೪ ರಿಂದಲೇ ಪುನಃ ಮದ್ಯ ಮಾರಟಕ್ಕೆ ಕೆಲ ಷರತ್ತಿಗೊಳಪಟ್ಟು ಅನುಮತಿ ನೀಡಿದೆ. ಈ ಕ್ರಮದಿಂದಾಗಿ ಈಗಾಗಲೇ ಸಂಕಷ್ಟದಲಿರುವ ಕುಟುಂಬಗಳನ್ನು ಮತ್ತಷ್ಟು ತೊಂದರೆಗೆ ದೂಡಿದಂತಾಗುತ್ತದೆ. ರಾಜ್ಯದಲ್ಲಿ ಜನತೆ ಬಿಡಿಗಾಸಿನ ದುಡುಮೆ ಇಲ್ಲದೆ ನರಳುತ್ತಿರು ಈ ಸಂದರ್ಭದಲ್ಲಿ ಅವರಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಕುಡಿತಕ್ಕೆ ಖರ್ಚುಮಾಡುವಂತೆ ಮಾಡಿ, ತನ್ಮೂಲಕ ಸರ್ಕಾರವು ತನ್ನ ಆದಯವನ್ನು ಉತ್ತಮ ಪಡಿಸಿಕೊಳ್ಳುವ ಆಲೋಚನೆಯೇ ಅಮಾನವೀಯವಾಗಿದೆ!
ಇಷ್ಟಾಗಿಯು ಮಾರ್ಚ ೨೫ ರಿಂದ ಇಲ್ಲೆಯವರೆಗೂ ಮದ್ಯ ಮಾರಟ ನಿಷೇಧದಿಂದ ತಿವ್ರತರವಾಗಿ ಮದ್ಯಪಾನದ ವ್ಯಸನಕ್ಕೆ ಬಲಿಯಾದವರು ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿರುವದುನ್ನು ಬಿಟ್ಟರೆ ಇನ್ನಾವುದೇ ತೊಂದರೆಗಳಾಗಿಲ್ಲ. ವಾಸ್ತವದಲ್ಲಿ ಈ ನಿಷೇಧದಿಂದಾಗಿ ಅನುಕೂಲಗಳೇ ಹೆಚ್ಚು. ವ್ಯಸನಕ್ಕೆ ಬಲಿಯಾದವರಿಗೆ ಗಳಿಕೆಗೆ ಇಲ್ಲದಿದ್ದ ಈ ಸಂದರ್ಭದಲ್ಲಿ ಕೂಡಿಟ್ಟಿದ್ದ ಹಣವನ್ನು ಕುಡಿತಕ್ಕೆ ಖರ್ಚು ಮಾಡುವದನ್ನು ಬಿಟ್ಟು ಕುಟುಂಬಕ್ಕೆ ಖುರ್ಚು ಮಾಡಿದ್ದರಿಂದಾಗಿ ಕುಟುಂಬಗಳಲ್ಲಿ ಸಾಮರಸ್ಯ ಮತ್ತು ನೆಮ್ಮದಿ ನೆಲಸಿದೆ. ವ್ಯಸನವನ್ನು ಕೈಬಿಡಲು ಇದುವೇ ಸುಸಂಧರ್ಭ ಎಂದು ಮನೋರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ ರಾಜ್ಯ ಸರಕಾರವು ಸಹ ಪಾನ ನಿಷೇಧವನ್ನು ಮಾಡಲು ಇದು ಒಳ್ಳೆ ಸಂಧರ್ಭ. ಈ ವ್ಯಸನಕ್ಕೆ ಒಳಗಾದವರಿಂದ ನೋಂದ ರಾಜ್ಯದ ಕೊಟ್ಯಾಂತರ ಮಹಿಳೆಯರು ಬಹುದಿನಗಳ ಬೇಡಿಕೆಯೂ ಇದೇ ಆಗಿದೆ. ಪರಸ್ಥಿತಿ ಹೀಗಿರುವಾಗ ಘನಸರ್ಕಾರವು ಪಾನ ನಿಷೇಧದಂತ ಜನಪರ ಕ್ರಮ ಕೈಗೋಳಲು ಮುಂಧಾಗುವ ಬದಲು ಲಾಕ್‌ಡೌನ್ ಮುಗಿಯುವ ಮುನ್ನವೇ ಮದ್ಯ ಮಾರಟಕ್ಕೆ ಅವಕಾಶ ನೀಡಿರುವದು ತಿವ್ರ ಜನವೀರೋಧಿ ಕ್ರಮವಾಗಿದೆ. ಜನತೆಯನ್ನು ಮತಷ್ಟು ತೊಂದರೆಗಳಿಗೆ ದೂಡುವ ಕ್ರಮವಾಗಿದೆ. ಆದಕಾರಣ ಸರ್ಕಾರವು ಯಾವುದೇ ಕಾರಣಕ್ಕು ಮದ್ಯ ಮಾರಟಕ್ಕೆ ಅವಕಾಶ ನೀಡ ಬಾರದು ಹಾಗೂ ಸಂಪೂರ್ಣ ಪಾನ ನಿಷೇಧಕ್ಕೆ ಕ್ರಮ ಕೈ ಗೋಳ್ಳ ಬೇಕು ಎಂದು ರಾಜ್ಯದ ಜನತೆಯ ಪರವಾಗಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯುತ್ ಆರ್ಗನೈಸೇಷನ್ (ಎಐಡಿವೈಓ) ಕೊಪ್ಪಳ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ

Please follow and like us:
error