ಮೃತ ರೈತನ ಮನೆಗೆ ಬೇಟಿ| ಕುಟುಂಬಕ್ಕೆ ಸಾಂತ್ವನ ಹೇಳಿದ ಸಂಸದ ಕರಡಿ ಸಂಗಣ್ಣ


ಕೊಪ್ಪಳ, ಅ.೧೭: ಯಲಬುರ್ಗಾ ತಾಲೂಕಿನ ಬಳಗೇರಿ ಗ್ರಾಮದಲ್ಲಿ ಕಳೆದ ಸೋಮವಾರದಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಳಕಪ್ಪ ಚಾಕರಿ ಎಂಬ ರೈತ ಸಿಡಿಲು ಬಡಿದು ಅಸುನಿಗಿದ್ದ ಪರಿಣಾಮ ಬುಧವಾರದಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಸಂಸದ ಕರಡಿ ಸಂಗಣ್ಣ ಬಳಗೇರಿ ಗ್ರಾಮದ ಮೃತ ರೈತನ ಮನೆಗೆ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವರಾಜ ಕನಕಗಿರಿ, ಬಸನಗೌಡ ಬಳಗೇರಿ, ಲಕ್ಷ್ಮಣ ಕಮ್ಮಾರ, ಬಸನಗೌಡ ತೊಂಡಿಹಾಳ, ಕೊಟ್ರಪ್ಪ ಮುತ್ತಾಳ, ವೀರಯ್ಯಸ್ವಾಮಿ ಬೊಮ್ಮನಾಳ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರೆಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ  ತಿಳಿಸಿದ್ದಾರೆ.

Please follow and like us:
error