ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಶಮ್ಸುದ್ದೀನ್ ರಿಗೆ ಸನ್ಮಾನ

ಕೊಪ್ಪಳ : ಪೋಲಿಸ್ ಇಲಾಖೆಯಲ್ಲಿಯ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಮುಖ್ಯಮಂತ್ರಿಗಳ ಪದಕ ಪಡೆದ ಡಿಪಿಓದ ಪೋಲಿಸ್  ಶಮ್ಸುದ್ದೀನ್ ರಿಗೆ ಕೊಪ್ಪಳದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. 19ನೇ ವಾರ್ಡಿನ ಹಿರಿಯರು ಹಾಗೂ ಆತ್ಮೀಯರು ಸೇರಿಕೊಂಡು ಆತ್ಮೀಯವಾಗಿ ಸನ್ಮಾನಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಕೊಪ್ಪಳದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ  ಸೈಯದ್ ಮೊಹಮ್ಮದ್ ಹುಸೇನಿ ( ಚೋಟು), ಸೈಯದ್ ಮೆಹಮೂದ್ ಹುಸೇನಿ ( ಬಲ್ಲೆ ) ಶ್ರವಣಕುಮಾರ ಬಂಡಾಣವರ, ಗೋಪಾಲ ಶೆಟ್ಟಿ, ಮುಸ್ತಫಾ ಕುಷ್ಟಗಿ, ಅಬ್ಬಾಸ್ ಅಲಿ ಗಂಗಾವತಿ   ಸೇರಿದಂತೆ  ಇತರರು ಉಪಸ್ಥಿತರಿದ್ದರು.

 

Please follow and like us:
error