ಮುಂದುವರೆದ ಹಿರೇಹಳ್ಳ ಪುನಶ್ಚೇತನ ಕಾಮಗಾರಿ: ಪುನಶ್ಚೇತನಾ ಕಾರ್ಯಕ್ಕೆ ದೇಣಿಗೆಯ ಮಹಾಪೂರ


ಕೊಪ್ಪಳ- ಗವಿಮಠದ ಪೂಜ್ಯರು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನ ಕಾರ್ಯವು ಭರದಿಂದ ಸಾಗಿದೆ. ಇಂದು ಹಿರೇಸಿಂಧೋಗಿ, ನರೇಗಲ್. ಬೂದಿಹಾಳ. ಡೊಂಬ್ರಳ್ಳಿ. ಮಾದಿನೂರ, ಯತ್ನಟ್ಟಿ ಬ್ರಿಡ್ಜ್ ಹತ್ತಿರ. ಓಜನಳ್ಳಿ, ನರೇಗಲ್ ಮತ್ತು ಗೊಂಡಬಾಳ ಇವೆಲ್ಲ ಹಿರೇಹಳ್ಳ ಸ್ಥಳಗಳಲ್ಲಿ ೨೯ ಇಟ್ಯಾಚಿ, ೧೨ ಡೋಜರ್. ೧೨ ಟ್ರ್ಯಾಕ್ಟರ್ ಸೇರಿದಂತೆ ಇಂದು ಒಟ್ಟು ೫೯ ಯಂತ್ರಗಳನ್ನು ಬಳಸಿಕೊಂಡು ಹಿರೇಹಳ್ಳ ಪುನಶ್ಚೇತಗೊಳಿಸುವ ಕಾರ್ಯ ಮುಂದುವರೆಯಿತು. ಪೂಜ್ಯರೊಂದಿಗೆ ರೈತರು, ಸಾರ್ವಜನಿಕರು ಪುನಶ್ಚೇತನ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು.

ಕೊಪ್ಪಳ: ಗವಿಮಠದ ಪೂಜ್ಯರು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನಾ ಕಾರ್ಯಕ್ಕೆ ವಿವಿಧ ಪೂಜ್ಯರು. ಗಣ್ಯರು. ವರ್ತಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ದೇಣಿಗೆ ಅರ್ಪಿಸುತಿದ್ದು ಇಂದು ನಗರದ ಕೋಟೆ ರಸ್ತೆಯ ಮಹೇಶ್ವರ ಮಂದಿರದ ಅಕ್ಕಮಹಾದೇವಿ ಮಹಿಳಾ ಮಂಡಳಿಯ ವತಿಯಿಂದ ೧೫.೦೦೦. ಹಗರಿಬೊಮ್ಮನಹಳ್ಳಿಯ ಬಾಪು ಮೆಡಿಕಲ್ಸನ ಮಾಲಿಕರಾದ ನಾರಾಯಣಪ್ಪ ಮತ್ತು ಮಕ್ಕಳು ಇವರ ವತಿಯಿಂದ ೧೧.೧೧೧ ರೂಪಾಯಿಗಳು. ರಾಯಚೂರಿನ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಮಂಡಳಿಯ ವತಿಯಿಂದ ೨.೦೦೦೦೦ (ಎರಡು ಲಕ್ಷ) ರೂಪಾಯಿಗಳನ್ನು ಹಿರೇಹಳ್ಳದ ಪುನಶ್ಚೇತನಕ್ಕೆ ದೇಣಿಗೆಯನ್ನು ಪೂಜ್ಯ ಶ್ರೀಗಳಿಗೆ ಅರ್ಪಿಸಿದ್ದಾರೆ. ಈ ಸಂದರ್ಬದಲ್ಲಿ ದಾನಿಗಳು ಉಪಸ್ಥಿತರಿದ್ದರು.

ಸೇವಾ ಕೈಂಕರ್ಯ
ಕೊಪ್ಪಳ- ಗವಿಮಠದ ಪೂಜ್ಯರು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನಾ ಕಾರ್ಯದಲ್ಲಿ ವಿವಿಧ ಸಂಘಟನೆಗಳು. ವ್ಯಕ್ತಿಗಳು. ಪರಿಸರ ಪ್ರೇಮಿಗಳು ಪುನಶ್ಚೇತನ ಕಾರ್ಯದಲ್ಲಿ ತೊಡಗಿದ ಕೆಲಸಗಾರರಿಗೆ ತಂಪಾದ ಪಾನೀಯ.ಊಟ. ಉಪಹಾರದ ವ್ಯವಸ್ಥೆಯನ್ನು ಮಾಡುತಿದ್ದಾರೆ. ನಗರದ ಗೌರಿಶಂಕರ ಮಹಿಳಾ ಮಂಡಳದ ವತಿಯಿಂದ ಶುಕ್ರವಾರದಂದು ನರೇಗಲ್ ಪ್ರದೇಶದಲ್ಲಿ ನಡೆಯುತ್ತಿರುವ ಪುನಶ್ಚೇತನ ಕಾರ್ಯದ ಯಂತ್ರದ ಚಾಲಕರಿಗೆ, ಇತರೇ ವಾಹನದ ಚಾಲಕರಿಗೆ ಸುಮಾರು ೫೦ ಜನರಿಗೆ ಮದ್ಯಾಹ್ನದ ಪ್ರಸಾದ ವ್ಯವಸ್ಥೆಯನ್ನು ಮಾಡುವುದರ ಮೂಲಕ ತಮ್ಮ ಅಳಿಲು ಸೇವೆಯನ್ನು ಮಾಡಿದ್ದಾರೆ. ಹಾಗೆಯೇ ಇಂದು ಹಲಗೇರಿ ಸಮಸ್ತ ಗ್ರಾಮಸ್ಥರಿಂದ ಹಿರೇಸಿಂಧೋಗಿ, ನರೇಗಲ್. ಬೂದಿಹಾಳ. ಡೊಂಬ್ರಳ್ಳಿ. ಮಾದಿನೂರ, ಯತ್ನಟ್ಟಿ ಬ್ರಿಡ್ಜ್ ಹತ್ತಿರ ಪುನಶ್ಚೇತನ ನಡೆಯುವ ಸ್ಥಳಗಳಲ್ಲಿ ಮದ್ಯಾಹ್ನದ ಪ್ರಸಾದದ ವ್ಯವಸ್ಥೆಯನ್ನು ಮಾಡುವುದರ ಮೂಲಕ ತಮ್ಮ ಅಳಿಲು ಸೇವೆಯನ್ನು ಮಾಡಿದ್ದಾರೆ. ಈ ಸಂದರ್ಬದಲ್ಲಿ ನಗರದ ಗೌರಿಶಂಕರ ಮಹಿಳಾ ಮಂಡಳದ ಪದಾಧಿಕಾರಿಗಳು ಹಾಗೂ ಹಲಗೇರಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Please follow and like us:
error