ಮಾ.24ರಂದು ಗಂಗಾವತಿಯಿAದ ಅಂಜನಾದ್ರಿ ಬೆಟ್ಟದವರೆಗೆ ಸೈಕಲ್ ಜಾಥಾ

ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ:
ಜಿಲ್ಲೆಯಲ್ಲಿ ಕ್ಷಯರೋಗದ ಬಗ್ಗೆ ಜಾಗೃತಿ ಅಗತ್ಯ: ವಿಕಾಸ್ ಕಿಶೋರ್ ಸುರಳ್ಕರ್
ಕೊಪ್ಪಳ,  : ಕೊಪ್ಪಳ ಜಿಲ್ಲೆಯಲ್ಲಿ ಕ್ಷಯರೋಗ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡುವ ಸಲುವಾಗಿ ಜಿಲ್ಲೆಯ ಜನತೆ ಕ್ಷಯರೋಗದ ಬಗ್ಗೆ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಅವರು ಶುಕ್ರವಾರ (ಮಾ.19) ದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಮಾ.24 ರಂದು ಆಯೋಜಿಸಿರುವ ಸೈಕಲ್ ಜಾಥಾದ ಅಂಗವಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯ ಜನರಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಇದೇ ಮಾರ್ಚ್ 24 ರಂದು ಗಂಗಾವತಿ ನಗರದಿಂದ ಅಂಜನಾದ್ರಿ ಬೆಟ್ಟದವರೆಗೆ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಥಾದ ಉದ್ದೇಶ ಜನರಲ್ಲಿ ಕ್ಷಯರೋಗದ ಅರಿವು ಮತ್ತು ಜಾಗೃತಿ ಮೂಡಿಸುವುದು, ಕ್ಷಯರೋಗಿಗಳಲ್ಲಿ ಆತ್ಮಸ್ಥೆöÊರ್ಯ ತುಂಬುವ ಮೂಲಕ ಕಳಂಕ, ತಾರತಮ್ಯ ಹೋಗಲಾಡಿಸುವುದಾಗಿದೆ. ಅದೇ ರೀತಿಯಾಗಿ ಪ್ರತಿ ವರ್ಷ ಕ್ಷಯರೋಗದ ವಿಳಂಬ ಪತ್ತೆಯಿಂದ ಮರಣದ ಪ್ರಮಾಣ ಗಣನೀಯವಾಗಿದೆ. ಸಾರ್ವಜನಿಕರು ಸಂಶಯಾಸ್ಪದ ಲಕ್ಷಣಗಳನ್ನು ಹೊಂದಿದ್ದಲ್ಲಿ ಉಚಿತ ತಪಾಸಣೆಗೆ ಒಳಪಟ್ಟು ಕ್ಷಯರೋಗ ಪತ್ತೆಗೆ ಸಹಕರಿಸಬೇಕು. ಕ್ಷಯ ಧೃಢಪಟ್ಟ ರೋಗಿಯು ಸಂಪೂರ್ಣ ಚಿಕಿತ್ಸೆ ಪಡೆಯುವುದು ಅತೀ ಮುಖ್ಯವಾಗಿರುತ್ತದೆ. ಕ್ಷಯರೋಗ ನಿರ್ಮೂಲನೆಯು ಒಂದು ಸಾಮಾಜಿಕ ಜವಾಬ್ದಾರಿಯಾಗಿದ್ದು, ಎಲ್ಲಾ ಗಣ್ಯವ್ಯಕ್ತಿಗಳು, ಚುನಾಯಿತ ಪ್ರತಿನಿಧಿಗಳು, ಖಾಸಗಿ ವೈದ್ಯರು, ಖಾಸಗಿ ಔಷಧ ವಿತರಕರು, ಸ್ವಯಂ ಸೇವಾ ಸಂಸ್ಥೆಗಳು, ಶಾಲಾ ಕಾಲೇಜು ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಸ್ತಿçÃ-ಶಕ್ತಿ ಗುಂಪುಗಳು ಹಾಗೂ ಇತರೆ ಸಂಘ ಸಂಸ್ಥೆಗಳು, ಕ್ಷಯ ನಿರ್ಮೂಲನೆಯಲ್ಲಿ ಭಾಗವಹಿಸಿ ಜನಾಂದೋಲನವನ್ನಾಗಿಸಬೇಕಾಗಿದೆ ಎಂದರು.
ಮಾ.24 ರಂದು ಗಂಗಾವತಿಯ ಎ.ಪಿ.ಎಂ.ಸಿ. ಆವರಣದಿಂದ ಬೆಳಗ್ಗೆ 6 ಗಂಟೆಗೆ ಎರಡು ತಂಡಗಳಲ್ಲಿ ಜಾಥಾ ಪ್ರಾರಂಭವಾಗಿ ಒಂದು ತಂಡ ನಗರ ವ್ಯಾಪ್ತಿಯಲ್ಲಿ ಹಾಗೂ ಇನ್ನೊಂದು ತಂಡ ಆನೆಗುಂದಿ ಮಾರ್ಗವಾಗಿ ಸಂಚರಿಸಿ ಅಂಜನಾದ್ರಿ ತಲುಪುವಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಂತೆ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಕ್ಷಯರೋಗ ನಿರ್ಮೂಲನೆಗಾಗಿ ಜನಾಂದೋಲನವನ್ನಾಗಿಸಲು ಈ ಸೈಕಲ್ ಜಾಥಾದಲ್ಲಿ ಎಲ್ಲರೂ ಪಾಲ್ಗೊಳ್ಳಲು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ರಾಜ್ಯದಲ್ಲಿಯೇ ಮೊದಲ ಬಾರಿಗೆ ವೇಗವಾಗಿ ಕ್ಷಯರೊಗದ ಸ್ಯಾಂಪಲ್ ಅನ್ನು ಪಡೆದು ರೋಗ ಪತ್ತೆಹಚ್ಚುವ ಸಲುವಾಗಿ ಜಿಲ್ಲೆಯಲ್ಲಿ ಮೊಬೈಲ್ ಕ್ಲಿನಿಕ್ ವ್ಯವಸ್ಥೆಗೆ ಮುಂದಾಗಿದ್ದು, ಈ ಸಂಬAಧ ಟೆಂಡರ್ ಕರೆಯಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಕ್ಷಯರೋಗದ ಪ್ರಕರಣಗಳ ತೀವ್ರತೆಯನ್ನು ತಡೆಯಲು ಸಹಾಯಕವಾಗಲಿದೆ. ಕೊರೋನಾ ಎರಡನೇ ಅಲೆ ಶುರುವಾಗಿದ್ದು, ಕೊರೋನಾ ಪ್ರಕರಣಗಳು ಹೆಚ್ಚಳವಾದಲ್ಲಿ ಅದರ ನಿಯಂತ್ರಣ ಹಾಗೂ ಕ್ಷಯರೋಗದ ನಿರ್ಮೂಲನೆ ಜಿಲ್ಲಾಡಳಿತಕ್ಕೆ ಸವಾಲಾಗಲಿದೆ. ಆದ್ದರಿಂದ ಜನತೆ ಕೊರೋನಾ ಹಾಗೂ ಕ್ಷಯರೋಗದ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕ್ಷಯಮುಕ್ತ ಕೊಪ್ಪಳವನ್ನಾಗಿಸಲು ಆಯೋಜಿಸಿರುವ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳುವವರಿಗೆ ನೀಡಲಾಗುವ ಟೀ-ಶರ್ಟ್ನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಲಕನಂದಾ ಡಿ.ಮಳಗಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ ಎಂ.ಜಿ., ಡಾ.ಜಂಬಯ್ಯ, ಡಾ.ಅಮರ್, ಡಾ.ಎ.ಎಸ್.ಎನ್.ರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error