ಮಾ.20 ರಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಂದ ಗ್ರಾಮ ವಾಸ್ತವ್ಯ

ಕೊಪ್ಪಳ,   ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಡಿ ಮಾರ್ಚ್ 20 ರಂದು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಹೋಬಳಿಯ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀಳಗಿ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಅದರಂತೆ ಕೊಪ್ಪಳ ತಹಶೀಲ್ದಾರರು ಹಿಟ್ನಾಳ ಹೋಬಳಿಯ ಮಹ್ಮದ್‌ನಗರ ಗ್ರಾಮದಲ್ಲಿ, ಗಂಗಾವತಿ ತಹಶೀಲ್ದಾರರು ವೆಂಕಟಗಿರಿ ಹೋಬಳಿಯ ಯಡಹಳ್ಳಿ ಗ್ರಾಮದಲ್ಲಿ, ಕನಕಗಿರಿ ತಹಶೀಲ್ದಾರರು ನವಲಿ ಹೋಬಳಿಯ ಚಿರ್ಚಿನಗುಡ್ಡ ಗ್ರಾಮದಲ್ಲಿ, ಕುಕನೂರು ತಹಶೀಲ್ದಾರರು ಮಂಗಳೂರು ಹೋಬಳಿಯ ಯಡಿಯಾಪುರ ಗ್ರಾಮದಲ್ಲಿ, ಕಾರಟಗಿ ತಹಶೀಲ್ದಾರರು ಸಿದ್ದಾಪುರ ಹೋಬಳಿಯ ಈಳಿಗನೂರು ಗ್ರಾಮದಲ್ಲಿ, ಯಲಬುರ್ಗಾ ತಹಶೀಲ್ದಾರರು ಯಲಬುರ್ಗಾ ಹೋಬಳಿಯ ಕುದರಿಕೊಟಗಿ ಗ್ರಾಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡಲಿದ್ದು, ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಾಗುವುದು.

Please follow and like us:
error