ಮಾಸ್ಕ್ , ಸ್ಯಾನಿಟೈಜರ್  ಕಾಳದಂದೆಕೋರರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ

ಮಾಸ್ಕ್ ಗಳನ್ನು ನಿಗದಿ ಪಡಿಸಿದ ಬೆಲೆಗೆ ಮಾರಾಟ ಮಾಡುವಂತೆ ಡಿಸಿ ಸೂಚನೆ

ಕೊಪ್ಪಳ ಮಾ.  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಸಾಧನಗಳು ಸೇರ್ಪಡೆಯಾಗಿರುವುದರಿಂದ ಕೆಮಿಸ್ಟ್ ಹಾಗೂ ಔಷಧ ಅಂಗಡಿಗಳು ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ತಮ್ಮಲ್ಲಿ ದೊರೆಯುವ ರೋಗ ನಿಯಂತ್ರಕ ವಸ್ತುಗಳನ್ನು ನಿಗದಿ ಪಡಿಸಿದ ಬೆಲೆಗೆ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಅಗತ್ಯ ವಸ್ತುಗಳು ಅಥವಾ ಸಾಧನಗಳಾದ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳ ಕೃತಕ ಅಭಾವ ಸೃಷ್ಟಿಯಾಗದಂತೆ ಜಿಲ್ಲಾಡಳಿತದಿಂದ ತನಿಖೆ ಹಾಗೂ ದಾಳಿ ಮಾಡಿ ಸೂಕ್ತ ಕ್ರಮವಹಿಸಲಾಗುತ್ತದೆ, ಜನರಲ್ ಸ್ಟೋರ್‌ಗಳಲ್ಲಿ ತುರ್ತಾಗಿ ಎಂಆರ್‌ಪಿ ದರಕ್ಕೆ ಮಾರಾಟ ಮಾಡತಕ್ಕದ್ದು ಹಾಗೂ ಯಾವುದೇ ರೀತಿಯ ದಾಸ್ತಾನು ಶೇಖರಣೆ ಮಾಡುವಂತಿಲ್ಲ. ನಕಲಿ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ಸ್ಥಳೀಯವಾಗಿ ತಯಾರಿಸಿ ಮಾರಾಟ ಮಾಡಿದರೆ ಅಂತಹ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಕೆಮಿಸ್ಟ್ಗಳು ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ನಷ್ಟವಿಲ್ಲದ ರೀತಿಯಲ್ಲಿ ಮಾರಾಟ ಮಾಡಬೇಕು. ಇದರ ಲಭ್ಯತೆಯನ್ನು ಖಚಿತಪಡಿಸಲು ಎಲ್ಲಾ ಕೆಮಿಸ್ಟ್ಗಳು ದಾಸ್ತಾನುಗಳನ್ನು ಆಂತರಿಕವಾಗಿ ಸಂಗ್ರಹಿಸಲು ತಿಳಿಸಿದೆ. ದಿನದ 24 ಗಂಟೆಯೂ ಎಲ್ಲಾ ಔಷಧಿ ಅಂಗಡಿಗಳು ಸೇವೆ ಮಾಡತಕ್ಕದ್ದು. ಮಾಸ್ಕ್ಗಳ ಲಭ್ಯತೆ ಕುರಿತು ಎಲ್ಲಾ ಅಂಗಡಿಗಳ ಮುಂದೆ ದಾಸ್ತಾನಿನ ಫಲಕವನ್ನು ನಿರ್ವಹಿಸತಕ್ಕದ್ದು ಹಾಗೂ ಪ್ರತಿ ದಿನ ಮಾರಾಟದ ಕುರಿತಾಗಿ ಸಂಗ್ರಹಣೆ (ದಾಸ್ತಾನು) ಹಾಗೂ ಮಾರಾಟದ ಅಂಕಿ ಅಂಶಗಳ ಕುರಿತು ವರದಿಯನ್ನು ಔಷಧಿ ನಿಯಂತ್ರಕ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು  ತಿಳಿಸಿದ್ದಾರೆ.

ಮಾಸ್ಕ್ಗಳು ಹಾಗೂ ಕರ ನಿರ್ಮಲೀಕಾರಕಗಳ ಬೆಲೆ ನಿಗದಿ : ಪಿ.ಸುನೀಲ್ ಕುಮಾರ್
ಕರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಮಾಸ್ಕ್ಗಳು ಹಾಗೂ ಕರ ನಿರ್ಮಲೀಕಾರಕಗಳ ಬೆಲೆ ನಿಗದಿಪಡಿಸಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಅಗತ್ಯ ವಸ್ತುಗಳ ಕಾಯ್ದೆ-1955 ರ ಉಪ ವಿಭಾಗ 2ಏ ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆೆ, ಕೇಂದ್ರ ಸರ್ಕಾರವು  “ಮಾಸ್ಕಗಳು ಹಾಗೂ ಕರ ನಿರ್ಮಲೀಕಾರಕ ವಸ್ತುಗಳ ಬೆಲೆ ಸ್ಧಿರೀಕರಣ ಆದೇಶ-2020” ರನ್ನು ಇಂದು (ಮಾರ್ಚ್. 21) ಜಾರಿಗೆ ತಂದಿದ್ದು, ಈ ಆದೇಶದನ್ವಯ   ಕರೋನ ವೈರಸ್ ಸೋಂಕು ಹರಡುವಿಕೆಯನ್ನು, ತಡೆಗಟ್ಟಲು ಉಪಯೋಗಿಸುವ ಮಾಸ್ಕ್ಗಳು ಹಾಗೂ ಕರ ನಿರ್ಮಲೀಕಾರಕಗಳ ಬೆಲೆಯನ್ನು ನಿಯಂತ್ರಿಸಲು ನಿಯಮಗಳನ್ನು ನಿಗಧಿಪಡಿಸಿ ಆದೇಶಿಸಲಾಗಿರುತ್ತದೆ.
ನಿಯಮಗಳು;
3-ಪ್ಲೆöÊ(ಸರ್ಜಿಕಲ್ ಮಾಸ್ಕ್) ಮಾಸ್ಕಗಳ ಬೆಲೆಯು  ದಿನಾಂಕ: 12/02/2020 ರಂದು ಜಾರಿಯಲ್ಲಿದ್ದ ಬೆಲೆ (ಅಥವಾ) ಪ್ರತೀ ಘಟಕಕ್ಕೆ  ರೂ:10/- ಮೀರುವಂತಿಲ್ಲ. (ಮೇಲಿನ ಎರಡು ವಿಧಾನಗಳಲ್ಲಿ ಅತ್ಯಂತ ಕಡಿಮೆ ಬೆಲೆ ಇವರು ವಿಧಾನವನ್ನು ಮಾರಾಟಕ್ಕೆ ಪರಿಗಣಿಸತಕ್ಕದ್ದು).  ಹಾಗೂ 2-ಪ್ಲೆöÊ ಮಾಸ್ಕ್ಗಳ ಬೆಲೆಯೂ ರೂ 8/- ಮೀರದಂತೆ ಮಾರಾಟ ಮಾಡಬೇಕು.  ಕರ ನಿರ್ಮಲೀಕಾರಕಗಳ (ಹ್ಯಾಂಡ್ ಸ್ಯಾನಿಟೈಸರ್‌ಗಳ) 200 ಎಮ್.ಎಲ್ ಬಾಟಲ್ ನ ಬೆಲೆಯು ರೂ 100/- ಮೀರುವಂತಿಲ್ಲ.  ಈ ಆದೇಶವು ದಿನಾಂಕ: 30/06/2020 ರ ವರೆಗೆ ಚಾಲ್ತಿಯಲ್ಲಿರುತ್ತದೆ.
ಈ ಆದೇಶದಲ್ಲಿನ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬAದಲ್ಲಿ ಅಂಥಹ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error