ಮಾಸ್ಕ್ ಇಲ್ಲದೆ ಓಡಾಡುವ ಜನರಿಗೆ ಫೈನ್ ಬಿಸಿ :  ದಂಡ ಹಾಕಿದ ಅಧಿಕಾರಿಗಳು

ಕೊಪ್ಪಳ :  ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಬೆಳ್ಳಂ ಬೆಳಿಗ್ಗೆ ಅಧಿಕಾರಿಗಳು ಫೀಲ್ಡ್ ಗೆ ಇಳಿದರು. ಕೊಪ್ಪಳ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿದೇ ಓಡಾಡುವವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು.

ಸಹಾಯಕ ಆಯುಕ್ತ ನಾರಾಯಣ ರೆಡ್ಡಿ ಕನಕರೆಡ್ಡಿ ಹಾಗೂ ನಗರಸಭೆ ಪೌರಾಯುಕ್ತ ಮಂಜುನಾಥ  ಮತ್ತು ಸಿಬ್ಬಂದಿಗಳು  ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ದಂಡವಿಧಿಸಿದರು. ಜವಾಹರ ರಸ್ತೆ ಸೇರಿದಂತೆ ವಿವಿಧ ಮುಖ್ಯ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಮಾಸ್ಕ್ ಇಲ್ಲದೇ ತಿರುಗಾಡುತ್ತಿದ್ದ ಆಟೋ, ಬೈಕ್ ಚಾಲಕರು ಸೇರಿದಂತೆ ವ್ಯಾಪಾರಸ್ಥರಿಗೂ ದಂಡ ಹಾಕಲಾಯಿತು.

Please follow and like us:
error