ಮಾವು ಮೇಳ 160 ಟನ್‌ಗೂ ಅಧಿಕ ಹಣ್ಣು ಮಾರಾಟ : ಒಂದುವರೆ ಕೋಟಿ ವಹಿವಾಟು 

ಯಶಸ್ವಿಯಾಗಿ ಜರುಗಿದ ಮಾವು ಮೇಳ ಸಮಾರೋಪ

ಕೊಪ್ಪಳ ಮೇ.   ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಆಯೋಜಿಸಲಾದ “ಮಾವು ಪ್ರದರ್ಶನ ಮತ್ತು ಮಾರಾಟ ಮೇಳ”ದ ಸಮಾರೋಪ ಸಮಾರಂಭವು ಭಾನುವಾರದಂದು ಯಶಸ್ವಿಯಾಗಿ ಜರುಗಿತು.  ಸತತ 12 ದಿನಗಳ ಕಾಲ ನಡೆದ ಈ ಮೇಳದಲ್ಲಿ 160 ಟನ್‌ಗೂ ಅಧಿಕ ಮಾವಿನ ಹಣ್ಣು ಮಾರಾಟವಾಗಿ ಬರೊಬ್ಬರಿ ಒಂದುವರೆ ಕೋಟಿಗೂ ಹೆಚ್ಚಿನ ವಹಿವಾಟು ಆಗಿದೆ.
ಸಮಾರೋಪ ಸಮಾರಂಭಕ್ಕೆ ಕೊಪ್ಪಳ ನಗರದ ಶ್ರಿÃ ಗವಿಸಿದ್ಧೆÃಶ್ವರ ಸ್ವಾಮಿಗಳು ಆಗಮಿಸಿ ಮಾವು ಮೇಳದ ವಹಿವಾಟು ಬಗ್ಗೆ ಮಾಹಿತಿ ಪಡೆದರು.  ಮೇಳದಲ್ಲಿ ಸ್ಥಾಪಿಸಲಾದ ಸ್ಟಾಲ್‌ಗಳನ್ನು ಹಾಗೂ ವಿವಿಧ ತಳಿಗಳ ಮಾವುಗಳನ್ನು ವೀಕ್ಷಿಸಿದರು.  ಕೊಪ್ಪಳ ಜಿಲ್ಲೆಯಲ್ಲಿ ಮಾವು ಯಶಸ್ವಿಗೊಂಡಿರುವ ಕುರಿತು ತೋಟಗಾರಿಕೆ ಇಲಾಖೆಯ ಈ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.  ಅಲ್ಲದೇ ಈ ಮೇಳದಲ್ಲಿ ಭಾಗವಹಿಸಿದ ರೈತ ಮತ್ತು ರೈತ ಮಹಿಳೆಯರಿಗೆ ತೋಟಗಾರಿಕೆ ಇಲಾಖೆಯಿಂದ ಪ್ರಮಾಣ ಪತ್ರವನ್ನು ಸ್ವಾಮೀಜಿಗಳ ಮುಖಾಂತರ ವಿತರಿಸಲಾಯಿತು.  ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ವಿಷಯ ತಜ್ಞ ವಾಮನಮೂರ್ತಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷವೂ ಮಾವು ಮೇಳ ಆರಂಭಿಸಿದ್ದು, ಸತತ 12 ದಿನಗಳ ನಂತ ಇಂದು ತೆರೆಕಾಣಲಿದೆ.  ನಿಗದಿಯಾದಂತೆ ಮೇಳವು ಮೇ. 15 ರಂದೇ ತೆರೆಕಾಣಬೇಕಾಗಿತ್ತು.  ಆದರೆ ಗ್ರಾಹಕರ ಹಾಗೂ ರೈತರ ವ್ಯಾಪಕ ಭೇಡಿಕೆ ಮೇರೆಗೆ ಮತ್ತೆ ನಾಲ್ಕು ದಿನಗಳ ಕಾಲ ಅಂದರೆ ಮೇ. 19 ರವರೆಗೂ ಮುಂದುಡಲ್ಪಟ್ಟಿದ್ದು, ಮಾವು ಮೇಳವು ಇಂದು (ಮೇ. 19 ರಂದು) ಮುಕ್ತಾಯಗೊಂಡಿದೆ.
ಮೂರು ಪ್ರಮುಖ ಉದ್ದೆÃಶಗಳಿಂದ ಈ ಬಾರಿಯ ಮಾವು ಮೇಳವನ್ನು ಆಯೋಜಿಸಲಾಗಿತ್ತು, ಅವುಗಳೆಂದರೆ, ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ರಾಸಾಯನಿಕ ಮುಕ್ತ ನೈಸರ್ಗಿಕವಾಗಿ ಮಾಗಿಸಿದ ಹಣ್ಣನ್ನು ಯೋಗ್ಯ ಬೆಲೆಗೆ ಪೂರೈಸುವುದು.  ಈ ಬಾರಿಯ ಮೇಳದಲ್ಲಿ ನೇರವಾಗಿ ಹಣ್ಣು ಮಾರುವುದಲ್ಲದೇ ಹಣ್ಣಿನ ಮೌಲ್ಯವರ್ಧನೆ ಹಾಗೂ ಸಂಸ್ಕರಣೆಗೆ ಒತ್ತು ನೀಡುವುದು.  ರೈತರಿಂದ ಖರೀದಿಸಿ, ರೈತರನ್ನು ಬದುಕಿಸಿ ಎನ್ನುವ ಮೂಲ ಉದ್ದೆÃಶವನ್ನು ಈ ಮೇಳ ಹೊಂದಿತ್ತು.  ಈ ಮೂರು ಉದ್ದೆÃಶಗಳು ನೆರವೇರಿದ್ದು ಮಾವು ಮೇಳವು ಅಭೂತ ಪೂರ್ಣ ಯಶಸ್ವಿಯೊಂದಿಗೆ ಗ್ರಾಹಕರ ಹಾಗೂ ರೈತರ ಮನದಲ್ಲಿ ಅಚ್ಚಳಿಯದೇ ನಿಲ್ಲುವಂತಾಗಿದೆ.
ಮಾವು ಮೇಳದಲ್ಲಿ 60 ಸಂಖ್ಯೆಗೂ ಹೆಚ್ಚಿನ ರೈತರು ಪರೋಕ್ಷ ಮತ್ತು ಅಪರೋಕ್ಷವಾಗಿ ತಾಜಾ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ.  ಕಳೆದ ಎರಡು ವರ್ಷಗಳಿಂದ ಏರ್ಪಡಿಸಿದ ಮಾವು ಮೇಳದಲ್ಲಿ ಭಾಗವಹಿಸಿದ ರೈತರ ದೂರವಾಣಿ ಸಂಖ್ಯೆಯನ್ನು ಗ್ರಾಹಕರು ಪಡೆದುಕೊಂಡು ನೇರವಾಗಿ ರೈತರನ್ನು ಸಂಪರ್ಕಿಸಿ ಅವರ ತೋಟಗಳಿಗೆ ಭೇಟಿ ನೀಡಿ ತಮಗೆ ಬೇಕಾದ ತಳಿಗಳನ್ನು ಖರೀದಿ ಮಾಡಿದ್ದು ಈ ಮೇಳದ ವಿಶೇಷತೆ ಆಗಿದೆ.
ಈ ಬಾರಿಯ ಮಾವು ಮೇಳ ರೈತರಿಗೆ ನಿಜವಾಗಲೂ ವರದಾನವಾಗಿದೆ.  ಮಾವು ಮೇಳವು ಕಳೆದ ಬಾರಿಗಿಂತಲೂ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.  ಗ್ರಾಹಕರೂ ಕೂಡಾ ಉತ್ಕೃಷ್ಟ ಗುಣಮಟ್ಟದ  ಹಣ್ಣನ್ನು ಸೇವಿಸಿ ಆನಂದಿಸಿದ್ದಾರಲ್ಲದೇ ಅನೇಕ ತಳಿಗಳಾದ ಬೆನೆಶಾನ್, ಆಪೂಸ್, ಕೇಸರ್. ದಶಹರಿ, ಸುವರ್ಣರೇಖಾ, ಸಿಂಧೂರ, ಚಿನ್ನರಸಂ, ಪೆದ್ದರಸಂ, ರಸಪೂರಿ, ಮಲ್ಲಿಕಾ ಅಲ್ಲದೇ ಉಪ್ಪಿನಕಾಯಿ ತಳಿಗಳಾದ ಆಮ್ಲೆÃಟ್, ಮಲಗೋವಾ, ಪುನಾಸ ಮತ್ತು ರುಮೇನಿಯಾ ತಳಿಗಳು ಕೂಡಾ ಮಾರಾಟವಾಗಿವೆ.  ಆದರೆ ಹೆಚ್ಚಿನ ಭೇಡಿಕೆ ದಶಹರಿ ತಳಿಗೆ ಕಂಡು ಬಂದಿದ್ದು ಆರಂಭದಿಂದಲೇ ಪ್ರತಿ ಕೆ.ಜಿ. ಗೆ ರೂ.100 ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.  ಇನ್ನಿತರೇ ಬೇಡಿಕೆ ತಳಿಗಳಂದರೇ ಕೇಸರ್, ಆಪೂಸ್ ಹಾಗೂ ರಸಪೂರಿ ಮತ್ತು ಉಪ್ಪಿನಕಾಯಿ ತಳಿಗಳು.
ಒಟ್ಟಾರೆಯಾಗಿ ಗ್ರಾಹಕರು ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಖರೀದಿಸಿದ 160 ಟನ್‌ಗೂ ಹೆಚ್ಚಿನ ತೂಕದ ಹಣ್ಣಿನ ಮಾರಾಟವಾಗಿದ್ದು, ರೂ.1.50 ಕೋಟಿಗೂ ಹೆಚ್ಚಿನ ವಹಿವಾಟು ಆಗಿದೆ.  ಈ ಬರಗಾಲದಲ್ಲಿ ಇಷ್ಟೊಂದು ವಹಿವಾಟು ಆಗಿದ್ದು ಒಂದು ಸಾಧನೆ ಎಂದು ಹೇಳಬಹುದು.  ವರ್ಷವಿಡೀ ಬರಗಾಲದಿಂದ ಮುಂಗಾರು ಹಾಗೂ ಹಿಂಗಾರಿನ ಬಹುತೇಕ ಬೆಳೆಗಳು ರೈತರಿಗೆ ನಷ್ಟವನ್ನೆÃ ತಂದಿದ್ದವು, ಮಾವು ಬೆಳೆಗಾರರಿಗೆ, ಮಾವು ಮಾತ್ರ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದೆ.  ಇನ್ನು ಮುಂದೆ ಕೂಡಾ ರೈತರು ಮಾವು ಬೆಳೆಯಲು ಹೆಚ್ಚಿನ ಆಸಕ್ತಿ ವ್ಯಕ್ತ ಪಡಿಸಿರುತ್ತಾರೆ.
ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಮಾವಿನ ಇಳುವರಿ ತುಂಬಾ ಕುಸಿದಿತ್ತು.  ತೇವಾಂಶ ಕೊರತೆ ಮತ್ತು ಮೋಡಕವಿದ ವಾತಾವರಣದಿಂದಾಗಿ ಹೂ-ಕಾಯಿ ಉದುರಿ ರೈತರು ತುಂಬಾ ಆತಂಕದಲ್ಲಿದ್ದರು.  ಬಂದಷ್ಟೆÃ ಇಳುವರಿ ಗುಣಮಟ್ಟದ್ದಾಗಿರುವಂತೆ ಕಾಪಾಡಿಕೊಳ್ಳಲು ತೋಟಗಾರಿಕೆ ಅಧಿಕಾರಿಗಳು, ತಜ್ಞರು ಹಲವಾರು ಬಾರಿ ರೈತರ ತಾಕುಗಳಿಗೆ ಭೇಟಿ ನೀಡಿ ಹಣ್ಣನ್ನು ಕಟಾವು ಮಾಡುವ, ನೈಸರ್ಗಿಕವಾಗಿ ಮಾಗಿಸುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟಿದ್ದರು.  ಇದರಿಂದಾಗಿ ರೈತರು ಕಡಿಮೆ ಇಳುವರಿ ಇದ್ದರೂ ಗುಣಮಟ್ಟದ ಇಳುವರಿ ಪಡೆಯುವಲ್ಲಿ ಯಶ ಕಂಡಿದ್ದಾರೆ. ಆದರೆ ಅವರಿಗೆ ಮಾರುಕಟ್ಟೆ ಭಯ ಉಂಟಾಗಿ ಆತಂಕದಲ್ಲಿದ್ದರು. ಈ ಬಾರಿ ಗುತ್ತಿಗೆದಾರರು ಖರೀದಿ ಮಾಡಲು ಹಿಂದೇಟು ಹಾಕಿದ್ದರು, ಗುತ್ತಿಗೆದಾರರು ಮಾವು ಖರೀದಿಸದೇ ರೈತರಲ್ಲಿ ಆತಂಕ ಮೂಡಿಸಿದ್ದರು.  “ಇತ್ತ ಇಳುವರಿ ಕಡಿಮೆಯಾಗಿದ್ದು, ಖರೀದಿದಾರರಿಲ್ಲದೇ ನಾವೆಲ್ಲ ಆತಂಕದಲ್ಲಿದ್ದಾಗ ತೋಟಗಾರಿಕೆ ಇಲಾಖೆ ನಮ್ಮ ಸಹಾಯಕ್ಕೆ ಬಂದಿತು”, ಎನ್ನುತ್ತಾರೆ ಜಿಲ್ಲೆಯ ಮಾವು ಬೆಳೆಗಾರರು.
ಮಾವು ಮೇಳದ ಅಂಗವಾಗಿ ಮೇ. 14 ಮಂಗಳವಾರದಂದು ಮಾವಿನ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮತ್ತು ರಫ್ತು ಮಾರುಕಟ್ಟೆ ಕುರಿತು ತಾಂತ್ರಿಕ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಕೃಷಿ  ವಿಸ್ತರಣಾ ಶಿಕ್ಷಣಾ ಕೇಂದ್ರ ಕೊಪ್ಪಳದಿಂದ ವಿಜ್ಞಾನಿಗಳು ಆಗಮಿಸಿದ್ದರು.  ರೈತ ವಿಜ್ಞಾನಿ ಶೇಷಗಿರಾವ್‌ರವರು ರೈತರಿಗೆ ರಫ್ತು ಮಾರುಕಟ್ಟೆ ಬಗ್ಗೆ ತಿಳಿಸಿಕೊಟ್ಟರು. ಈ ತಾಂತ್ರಿಕ ಸಂಕಿರಣದಲ್ಲಿ ರೈತರು ಹಣ್ಣನ್ನು ಯಾವ ಸಮಯದಲ್ಲಿ ಕಟಾವು ಮಾಡಬೇಕು, ಹೇಗೆ ಕಟಾವು ಮಾಡಬೇಕು ಮತ್ತು ವರ್ಗೀಕರಣ, ಬಿಸಿ ನೀರಿನಿಂದ ಉಪಚಾರ, ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುವ ವಿಧಾನ ಎಂಬುದರ ಬಗ್ಗೆ ಒತ್ತು ಕೊಡಲಾಗಿತ್ತು.  ಮಾವು ಸರಿಯಾದ ಸಮಯದಲ್ಲಿ ಕಟಾವು ಮಾಡದಿದ್ದರೆ ರೈತರು ಶೇ.20 ರಿಂದ 30 ರಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ವೈಜ್ಞಾನಿಕವಾಗಿ ಹೇಗೆ ಮಾವನ್ನು ಮಾಗಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಇದರಿಂದಾಗಿ ಕಾರ್ಬೈಡ ನಂತಹ ವಿಷಕಾರಿ ರಾಸಾಯನಿಕಗಳು ಮನುಷ್ಯನ ಆರೋಗ್ಯದ ಮೇಲೆ ಉಂಟು ಮಾಡುವ ದುಷ್ಪರಿಣಾಮ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಹಣ್ಣಿನ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಉತ್ತಮ ಪರಿಣಾಮಗಳ ಬಗ್ಗೆ ತಿಳಿಸಿಕೊಡಲಾಯಿತು. ಸಾವಯವ ಬೇಸಾಯ ಕ್ರಮಗಳ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗಿತ್ತು.
ಮೇಳದಲ್ಲಿ ಅನೇಕ ಅಧಿಕಾರಿಗಳು ಮತ್ತು ಜಿಲ್ಲೆಯ ಉದ್ಯಮಿಗಳು ಮತ್ತು ಎಲ್ಲಾ ವರ್ಗದ ಗ್ರಾಹಕರು ಕುಟುಂಬ ಸಮೇತ ಆಗಮಿಸಿ ವಿವಿಧ ತಳಿಗಳ ಮಾವಿನ ಹಣ್ಣನ್ನು ಖರೀದಿಸಿದ್ದು ವಿಶೇಷವಾಗಿತ್ತು.  ಮೇಳದ ಇನ್ನೊಂದು ಆಕರ್ಷಣೆಯೆಂದರೆ ಮಾವಿನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ. ವಿಶೇಷವಾಗಿ ಉಪ್ಪಿನಕಾಯಿ ತಳಿಗಳು, ಸಿದ್ದ ಉಪ್ಪಿನಕಾಯಿ ಹಾಗೂ ತಾಜಾ ಮಾವಿನ ಹಣ್ಣಿನ ರಸವನ್ನು ರೈತರು ಆಸಕ್ತಿಯಿಂದ ಖರೀದಿಸಿರುತ್ತಾರೆ.
ವಿವಿಧ ತಾಲೂಕಿನ ತೋಟಗಾರಿಕೆ ರೈತರ ಉತ್ಪಾದಕ ಕಂಪನಿಗಳು ಕೂಡಾ ರೈತರಿಂದ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡಿ ರೈತರಿಗೆ ಹೆಚ್ಚಿನ ಸಹಾಯ ದೊರೆಯಲು ಸಹಕರಿಸಿದ್ದಾರೆ.  ಮೇಳದ ನಿಮಿತ್ತ ರಾಜ್ಯದ ವಿವಿಧ ಭಾಗಗಳಿಂದ ಮತ್ತು ಕೊಪ್ಪಳ ರೈತರು ಬೆಳೆದ ನೂರಾರು ತಳಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.  ವಿವಿಧ ತಳಿಯ ಮಾವಿನ ಹಣ್ಣನ್ನು ಅತೀ ಚಿಕ್ಕದಾದ, ಕಲಪ್ಪಾಡ ಮತ್ತು ದೊಡ್ಡಗಾತ್ರದ ಬಾಳೆ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.  ಕೇರಳದ ಕಲಪ್ಪಾಡು, ಅಪ್ಪಿಮಿಡಿ ಕಿರಿ ಮಾವು ಗಳಾದರೆ, ಬಾಳೆ ಮಾವಿನ ತಳಿ ಅತ್ಯಂತ ದೊಡ್ಡಗಾತದ್ರ ಹಣ್ಣಾಗಿದೆ.
ವಿವಿಧ ತಳಿಯ ಮಾವಿನ ಕಸಿ ಮಾಡಿದ ಎರಡು ಮಾದರಿಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.  ಈ ಬಾರಿಯ ಇನ್ನೊಂದು ವಿಶೇಷವೆಂದರೆ, ಮಾವಿನಲ್ಲಿ ವೈವಿದ್ಯತೆ ಎನ್ನುವ ಮಾದರಿ.  ಇದರಲ್ಲಿ ಒಟ್ಟಾರೆ 112 ಮಾವಿನ ತಳಿಗಳನ್ನು ಚೊಕ್ಕಾಗಿ ಜೋಡಿಸಲಾಗಿತ್ತು. ವೀಕ್ಷಕರಿಗೆ ತುಂಬ ಆಕರ್ಷಕವಾಗಿತ್ತಲ್ಲದೇ ಸೆಲ್ಫಿ ತೆಗೆಸಿಕೊಳ್ಳಲು ಮುಖ್ಯ ಆಕರ್ಷಕ ಬಿಂದು ಇದಾಗಿತ್ತು.  ಒಟ್ಟಾರೆಯಾಗಿ ರೈತರಿಗೂ, ಗ್ರಾಹಕರಿಗೂ ಸುಮಾರು 12 ದಿನಗಳ ಕಾಲ ಮುದ ನೀಡಿದ ಈ ಬಾರಿಯ ಮಾವುಮೇಳ ಜಿಲ್ಲೆಯ ಜನರಲ್ಲಿ ಸ್ಮರಣೀಯವಾಗಿ ನಿಲ್ಲಲು ಯಶಸ್ವಿಯಾಗಿದೆ.

Please follow and like us:
error