ಮಾವಿನ ಬೆಳೆ ಕಟಾವಿನ ನಂತರದ ನಿರ್ವಹಣೆ ಹೇಗೆ ಮಾಡಬೇಕು ?

ಮಾವಿನಬೆಳೆಯ ಕಟಾವಿನ ನಂತರದ ನಿರ್ವಹಣೆಗೆ #ಜಿಲ್ಲಾತೋಟಗಾರಿಕೆ ಇಲಾಖೆಯಿಂದ  #ರೈತರಿಗೆಸಲಹೆಗಳನ್ನು ನೀಡಲಾಗಿದೆ.

#ಮಾವಿನಕಟಾವು ಮುಗಿಯುತ್ತಾ ಬಂದಿದ್ದು, ಮುಂದಿನ ವರ್ಷದ ಬೆಳೆಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು. ಸದ್ಯ ಹೊಲದಲ್ಲಿರುವ ಕಸ ಕಡ್ಡಿ ತೆಗೆದು ಹಾಕಿ ಚೆನ್ನಾಗಿ ಮಡಿ ಮಾಡಬೇಕು. ನಂತರ ಕಟಾವು ಮಾಡಿ ಉಳಿದ #ಒಣಕಡ್ಡಿಗಳನ್ನು ಕತ್ತರಿಸಿ ತೆಗೆದು ಹಾಕಬೇಕು. ಇದರ ಜೊತೆಗೆ ಒಣಗಿದ ರೋಗಗ್ರಸ್ಥ ರೆಂಬೆ ಕೊಂಬೆಗಳನ್ನು ಕತ್ತರಿಸಿ ತೆಗೆದು ಹಾಕಬೇಕು. ಅತಿ ಒತ್ತಾಗಿ ಬೆಳೆದ ರೆಂಬೆಗಳನ್ನು ಮಧ್ಯದಲ್ಲಿ ಬೆಳೆದ ಕೊಂಬೆಗಳನ್ನು, #ಬೆಳಕು / ಗಾಳಿಗೆ ಅಡ್ಡ ಬರುವ ಕೊಂಬೆಗಳನ್ನು ಗರಗಸದಿಂದ ತೆಗೆದು ಹಾಕಬೇಕು. ನೆಲದಿಂದ #3ಅಡಿ ಎತ್ತರದವರೆಗೂ ಯಾವುದೇ ರೆಂಬೆಗಳಿರದAತೆ ಸವರಬೇಕು.

#ಮರದಮಧ್ಯದಭಾಗ ರೆಂಬೆಯನ್ನು ತೆಗೆದು ಉಳಿದೆಲ್ಲಾ ಕೊಂಬೆಗಳಿಗೆ #ಸೂರ್ಯನ ಕಿರಣಗಳು / ಬೆಳಕು ಮತ್ತು ಗಾಳಿ ಆಡುವಂತೆ ಮಾಡಿದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿ #ಹಣ್ಣಿನ ಉತ್ಪಾದಕತೆ #ಹೆಚ್ಚುತ್ತದೆ.

#ಹೊಸ ಚಿಗುರುಗಳನ್ನು #15ಸೆಂ. ಮೀ. ಹಿಂಭಾಗ ಮತ್ತು ಬಲಿತ ಭಾಗದವರೆಗೂ ಕತ್ತರಿಸುವುದರಿಂದ ಹೂ ಕಚ್ಚಲು ಹಾಗೂ ಮರದ ಎತ್ತರವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಹೀಗೆ ಕತ್ತರಿಸುವಾಗ ರೆಂಬೆಯ ಬುಡದ ಪ್ರದೇಶವನ್ನು ಕನಿಷ್ಟ 1 ಅಂಗುಲ ಬಿಟ್ಟು ಕತ್ತರಿಸಬೇಕು. ಇದರಿಂದಾಗಿ ಗಾಯ ಬೇಗ ಮಾಗಿ ಕ್ರಿಮಿ ಕೀಟಗಳು ಪ್ರವೇಶಿಸಿ ರೋಗ ಉಂಟಾಗುವುದನ್ನು ತಡೆಗಟ್ಟುತ್ತದೆ. ಈ ರೀತಿಯಾಗಿ ವೈಜ್ಞಾನಿಕವಾಗಿ ಚಾಟ್ನಿಯನ್ನು ಪ್ರತಿ ವರ್ಷ ಕಟಾವಿನ ನಂತರ ಜುಲೈನಲ್ಲಿ ತಿಂಗಳ ಅಂತ್ಯದೊಳಗಾಗಿ ಮಾಡಿ ಮುಗಿಸಿ, ಕತ್ತರಿಸಿದ ಭಾಗಕ್ಕೆ ಸಿ.ಓ.ಸಿ. ಎಂಬ ಶಿಲೀಂಧ್ರನಾಶಕವನ್ನು ಲೇಪಿಸಬೇಕು.

ಯಾವಾಗಲೂ ರೆಂಬೆಗಳು #ಮೇಲ್ಮುಖವಾಗಿ ಕಪ್‌ನ ಆಕಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಆದರೆ ಗಿಡಗಳನ್ನು ಶೇ.25 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕತ್ತರಿಸಬಾರದು. ಇದರಿಂದಾಗಿ ಮುಂದೆ ಬರುವ ಹೊಸ ಚಿಗುರಿಗೆ #5-6 ತಿಂಗಳಲ್ಲಿ ಹೂ ಕಚ್ಚಿ ಉತ್ತಮ #ಗುಣಮಟ್ಟದ ಫಸಲು ಪಡೆಯಲು ಸಾಧ್ಯ.

#ಶಿಲೀಂಧ್ರನಾಶಕ ಲೇಪನ ತಯಾರಿಸುವ ವಿಧಾನ: ಪ್ರತಿ ಲೀಟರ್ #ನೀರಿಗೆ 50-100 ಗ್ರಾಂ. ಸಿ.ಓ.ಸಿ. ಪುಡಿ ಬೆರೆಸಿ ಸ್ವಲ್ಪ ಗಟ್ಟೆ ಮುಲಾಮು ತಯಾರಿಸಿ ಬಟ್ಟೆ ಅಥವಾ ಬ್ರಶ್‌ನಿಂದ ಲೇಪಿಸಬೇಕು. ನಂತರ ಶಿಫಾರಸ್ಸು ಮಾಡಿದ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ ನೀಡಿ ನೀರು ಹರಿಸಬೇಕು. ಮಳೆಗಾಲದಲ್ಲಿ ಸಾವಯವ ಗೊಬ್ಬರ ಕೊಡುವುದು ಸೂಕ್ತ. ಮುಂದೆ ಸೆಪ್ಟೆಂಬರ್ ತಿಂಗಳಲ್ಲಿ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಹಾಗೂ ಜಿಂಕ್, ಬೋರಾನ್ ಮಿಶ್ರಣ ನೀಡಿ ನೀರು ಹರಿಸಬೇಕು. ನಂತರ #ಮಾವು ಸ್ಪೆಷಲ್ ಸಿಂಪರಣೆ ಮಾಡಬೇಕು. ನವೆಂಬರ್ ತಿಂಗಳಿನಿAದ ನೀರು ಹರಿಸುವುದನ್ನು ನಿಲ್ಲಿಸಬೇಕು. ಮತ್ತೆ ಕಡಲೆ ಕಾಳಿನ ಗಾತ್ರದ ಕಾಯಿಗಳಾದಾಗ ನಿಯಮಿತವಾಗಿ ನೀರು ಹರಿಸಬೇಕು.
ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದಲ್ಲಿ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ.

 

Please follow and like us:
error