ಮಾನವಿಯತೆಗಿಂತ ಮಿಗಿಲಾದ ಧರ್ಮ ಯಾವುದು ಇಲ್ಲ – ಅಲ್ಲಾಗಿರಿರಾಜ್

ಇಂದಿನ ವಿದ್ಯಾರ್ಥಿಗಳಲ್ಲಿ ಮಾನವೀಯತೆಯ ಧರ್ಮದ ಅರಿವು ಮೂಡಿಸುವ ಅಗತ್ಯವಿದೆ. ಮಾನವಿಯತೆಯ ಧರ್ಮಪೀಠಕ್ಕಿಂತ ಮಿಗಿಲಾದ ಧರ್ಮ ಪೀಠ ಯಾವುದು ಇಲ್ಲಾ . ಆದ್ದರಿಂದ  ವಿದ್ಯಾರ್ಥಿಗಳು ದಿನ ನಿತ್ಯ ಮುಂಜಾನೆ ಎದ್ದ ತಕ್ಷಣ ರೈತ, ಸೈನಿಕ, ಶಿಕ್ಷಕ ಮತ್ತು ತಂದೆ ತಾಯಿಯವರನ್ನು ಸ್ಮರಿಸುವ ಪರಿಪಾಠ ಹಾಕಿಕೊಳ್ಳಬೇಕಿದೆ. ಸಾಹಿತ್ಯದ ಧರ್ಮ ರಾಜಕೀಯ ಓಲೈಕೆಯಲ್ಲ ಅದು ನವಾಬ್(ರಾಜ ಪರಂಪರೆಯನ್ನು) ರನ್ನು ಬಿಟ್ಟು ಜನಾಬ್ (ಜನರನ್ನು)ರ ನೋವಿಗೆ , ಭಾವಕ್ಕೆ ಸ್ಪಂದಿಸುವದಾಗಿದೆ. ಗಜಲ್ ಸಾಹಿತ್ಯ ಪ್ರಕಾರವೂ ಕೂಡ ನವಾಬ್(ರಾಜ ಪರಂಪರೆಯನ್ನು)ರನ್ನು ಬಿಟ್ಟು ಜನಾಬ್ (ಜನರನ್ನು)ರ ನೋವಿಗೆ ,ಭಾವಕ್ಕೆ ಸ್ಪಂದಿಸಿದೆ. ಸ್ವರ್ಗವನ್ನು ಯಾವ ಧರ್ಮವೂ ದೊರಕಿಸಿಕೊಡುವದಿಲ್ಲ . ಸರ್ವಧರ್ಮ ಸಮನ್ವಯತೆಯಿಂದ ಕೂಡಿರುವ ನೆಲವೇ ಸ್ವರ್ಗ. ಅದು ಭಾರತ ದೇಶವೇ ಆಗಿದೆ. ಇಂದು ಭಾರತದಲ್ಲಿ ಹಲವಾರು ಜನ ಗಜಲ್ ರಚನೆಯಲ್ಲಿ ತೊಡಗಿದ್ದು ವಿಶೇಷವಾಗಿ ಕರ್ನಾಟಕವೂ ಮುಂಚೂಣಿಯಲ್ಲಿರುವದು ಸಂತಸ ಎಂದರು.

ನಗರದ ಸೇಂಟ್ ಪಾಲ್ಸ್ ಪದವಿ ಮಹಾವಿದ್ಯಾಲಯ ಮತ್ತು ತನ್ಮಯಿ ಪ್ರಕಾಶನ ಓಜಿನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಲ್ಲಾಗಿರಿರಾಜ್ ಕನಕಗಿರಿ ಅವರ ಸಾಕಿ ಗಜಲ್ ಪುಸ್ತಕ ಕುರಿತು ವಾಚನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು ಸಾಕಿ ಗಜಲ್ ರಚನೆ ಕುರಿತು ಮಾಹಿತಿ ನೀಡಿದರು . ಇದೇ ಸಂದರ್ಭದಲ್ಲಿ ಪ್ರಾಚಾರ್ಯರಾದ ಬಸವರಾಜ ಜಿ ಸಂಕನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಪರಿಚಯ ಮಾಡಿಕೊಟ್ಟರು.  ಕಾಲೇಜಿನ ಆಢಳಿತಧಿಕಾರಿಗಳಾದ ಬಸಯ್ಯಸ್ವಾಮಿ ಹಿರೇಮಠ ಅದ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ಉಪನ್ಯಾಸಕರಾದ ಮಂಜು ಪೂಜಾರ , ಸರಸ್ವತಿ ಉಂಕಿ  , ಫರೀದಾ ಹುರಕಡ್ಲಿ , ಮೇಘನಾ ಮತ್ತು ಕಾವ್ಯ  ಉಪಸ್ಥಿತರಿದ್ದರು.

Please follow and like us:
error