ಮಾನವನ ಅಂತರಂಗದ ಶುದ್ಧಿಯನ್ನು ತಿಳಿಸಿಕೊಡುವುದೇ ಸಾಹಿತ್ಯ : ಡಾ.ಜಯಲಕ್ಷಿö್ಮ ಮಂಗಳಮೂರ್ತಿ

ಕೊಪ್ಪಳ ಜು. : ಸಾಹಿತ್ಯ ಜೀವನವನ್ನು ಕಲಿಸುತ್ತದೆ, ಮಾನವನ ಅಂತರಂಗದ ಶುದ್ಧಿಯನ್ನು ತಿಳಿಸಿಕೊಡುವುದೇ ನಿಜವಾದ ಸಾಹಿತ್ಯವಾಗಿದೆ ಎಂದು ರಾಯಚೂರಿನ ಹಿರಿಯ ಸಾಹಿತಿ ಡಾ. ಜಯಲಕ್ಷಿö್ಮ ಮಂಗಳಮೂರ್ತಿರವರು ಹೇಳಿದರು.
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕ ಕಸಾಪ ವತಿಯಿಂದ ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರದಂದು ಆಯೋಜಿಸಲಾದ “ಕೊಪ್ಪಳ ತಾಲೂಕ 8ನೇ ಕನ್ನಡ ಸಾಹಿತ್ಯ ಸಮ್ಮೆÃಳನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯವೆಂದರೆ ನಮಗೆ ಗೊತ್ತಿಲ್ಲದಿರುವ ವಿಷಯವನ್ನು ತಿಳಿದುಕೊಳ್ಳಲು ನಾವು ಬಹಳ ಕಾತುರದಿಂದ ಕಾಯುತ್ತಿರುತ್ತೆÃವೆ.  ನಾವು ಕೂಡ ಅಷ್ಟೆ ಸಾಹಿತ್ಯವನ್ನು ತಿಳಿದುಕೊಳ್ಳಲು ಅಷ್ಟೆ ಕಾತುರದಿಂದ ಕಾಯುತ್ತಿರಬೇಕು.  ಸಾಹಿತ್ಯ ಭಾರತದ ಆತ್ಮಜ್ಞಾನಕ್ಕೆ ಕೊಟ್ಟತಹ ಶ್ರೆÃಷ್ಠ ಸಾಹಿತ್ಯವಾಗಿದೆ.  ಕನ್ನಡ ಸಾಹಿತ್ಯವನ್ನು ಅವಲಂಬಿಸಿದಾಗ ಅದರ ದಿವ್ಯ ನಮಗೆ ಲಭ್ಯವಾಗುತ್ತದೆ.  ವ್ಯಕ್ತಿತ್ವ ವಿಕಸನ ಬದುಕಿನ ಆಯಾಮಗಳನ್ನು  ಹೊಂದಿರುತ್ತದೆ.  ಮನುಷ್ಯನ ಬದುಕಿಗೆ ಸಾಹಿತ್ಯ ಬ್ರಹ್ಮಾಂಡವೇ ತುತ್ತು.  ಸಮಸ್ತ ವಿಶ್ವ, ಸಮಸ್ತ ಪರಿಸರಕ್ಕೆ  ಮಾನವ ಪ್ರೆÃಮ ಸಮುದಾಯಿಕವಾದದ್ದು, ಅದನ್ನು ಜಾಗತಿಕ ಪ್ರಜ್ಞೆಯಿಂದ ನಿರಂತರವಾಗಿ ಜ್ಞಾನದ ಪರಿದಿಯನ್ನು ಹರಡುತ್ತಿರಬೇಕು.  ನಮ್ಮ ಧರ್ಮಪ್ರೆÃಮ, ನೀತಿ ಸಂಹಿತೆಯೇ ನಮ್ಮ ಸಾಹಿತ್ಯವನ್ನು ಅರಿದುಕೊಂಡು ಬರುವಂತೆ ಮಾಡುತ್ತದೆ.  6 ಕೋಟಿ ಜನರಲ್ಲಿ ಸಾಹಿತ್ಯದ ಚೌಪದಿ, ಷಟ್ ಪದಿಯನ್ನು ಅಳವಡಿಸಿಕೊಂಡಿದ್ದಾರೆ.  ಕನ್ನಡ ಪ್ರಜ್ಞೆ, ವಿಶ್ವ ಪ್ರಜ್ಞೆಯಾಗಬೇಕಿದೆ.  ಇವೇಲ್ಲವನ್ನು ನಾವು ಅನುಭವಿಸದಿದ್ದರೆ ಸಾಹಿತ್ಯ ಬರುವುದಿಲ್ಲ.  ನಾವು ಜೀವನದ ಎಲ್ಲಾ ಸಿಮೀತವನ್ನು ಮೀರಿ ಮುಂದೆ ಹೋಗಬೇಕು ಅಂದಾಗ ಮುಂದಿನ ಪೀಳಿಗೆಯವರು ಸಾಹಿತ್ಯವನ್ನು ತಿಳಿದುಕೊಳ್ಳಲು ಸಾಧ್ಯವೆಂದು ತಿಳಿಸಿದರು.
ಜಾನಪದ ಲೋಕ, ವಚನ ಸಾಹಿತ್ಯ, ನೃತ್ಯ, ರಸಪ್ರಶ್ನೆ, ಇವೇಲ್ಲಾ ಜಾನಪದ ಅಡುಗೆ ಮನೆಯ ಸಾಹಿತ್ಯ ಮಟ್ಟದಲ್ಲಿ ಹೋಗುತ್ತಿದೆ. ಇವೆಲ್ಲವನ್ನು ಗ್ರಾಮೀಣ ಪ್ರದೇಶದ ಮಹಿಳೆಯರು ತಮಗೆ ಗೊತ್ತಿರದೇ ಸಾಹಿತ್ಯವನ್ನು ಬೆಳೆಸುತ್ತಿದ್ದಾರೆ.  ಅಲ್ಲದೇ ತಮಗೆಲ್ಲಾ ಸಾಹಿತ್ಯದ ಸತ್ಯ ದರ್ಶನವಾಗುತ್ತಿದೆ.  ಉತ್ತಮ ವಿಚಾರವಿರದಿದ್ದರೆ ಮನುಷ್ಯ ಕೂಡ ಪಶು ಸಮಾನವಾಗುತ್ತಾನೆ.  ಕಲೆ ಹೇಗೆ ಒಂದು ಉಪಾಸನೆ ಅದರಂತೆ ಸಾಹಿತ್ಯವೂ ಕೂಡ ಒಂದು ಉಪಾಸನೆ ಇದ್ದಂತೆ.  ಮಾನವನ ಅಂತರಂಗದ ಶುದ್ಧಿಯನ್ನು ತಿಳಿಸಿಕೊಡುವುದೇ ಸಾಹಿತ್ಯ.  ಅಲ್ಲದೇ ಮನುಕೂಲದ ಒಳಿತನ್ನು ತಿಳಿಸಿಕೊಳ್ಳುವುದು ಕೂಡ ಸಾಹಿತ್ಯವೇ.  ಸಾಹಿತ್ಯವನ್ನು ತಿಳಿದುಕೊಂಡರೆ ಜಗತ್ತನ್ನು ನೋಡುವ ಶಕ್ತಿ ನಮ್ಮದಾಗುತ್ತದೆ.  ಸಾಹಿತ್ಯ ಸಾಮ್ರಾಟ ಅವರ ಸೂಕ್ಷö್ಮವಾದ ಅವಲೋಕನ ಇಡೀ ಜಗತ್ತೆ ತಿರುಗಿ ನೋಡುವಂತೆ ಸೂಕ್ಷö್ಮದಲ್ಲಿ ಅತಿ ಸೂಕ್ಷö್ಮ ಸಾಹಿತ್ಯ ಬಹರಗಳಿರುತ್ತವೆ ಎಂದು ಡಾ. ಜಯಲಕ್ಷಿö್ಮ ಮಂಗಳಮೂರ್ತಿರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಸಂಘ ಸಂಸ್ಥೆಗಳ ಪ್ರತಿನಿಧಿ ಡಾ. ಶೇಖರಗೌಡ ಮಾಲಿಪಾಟೀಲ್ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಜಿಲ್ಲಾ, ತಾಲೂಕ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೆÃಳನ ಮಾಡುವುದರ ಮೂಲಕ ಕನ್ನಡ ಖಹಳೆಯನ್ನು ಉದೂವುದರ ಮೂಲಕ ಕನ್ನಡದ ಕಂಪನ್ನು ಮೆರೆಯಲಾಗುತ್ತಿದೆ.  ಈ ನಿಟ್ಟಿನಲ್ಲಿ ಕಸಾಪ ಕಾರ್ಯನಿರ್ವಹಿಸುತ್ತಿದೆ.  ಗ್ರಾಮ ಮಟ್ಟದಲ್ಲಿಯೂ ಕೂಡ ಕನ್ನಡ ಸಾಹಿತ್ಯ ಸಮ್ಮೆÃಳವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
8ನೇ ಕನ್ನಡ ಸಾಹಿತ್ಯ ಸಮ್ಮೆÃಳನಾಧ್ಯಕ್ಷರಾದ ಈಶ್ವರ ಹತ್ತಿ ಅವರ ಮಾತನಾಡಿ, ಹಿಂದೆ ಕನ್ನಡ ನೆಲ, ಜಲದ ಸಮಸ್ಯೆಯ ಬಗ್ಗೆ ಚೆರ್ಚೆ ಮಾಡುತ್ತಿದ್ದರು, ಇಂದು ಕನ್ನಡ ಸಮ್ಮೆÃಳನ ವಿಸ್ತಾರಗೊಂಡಿವೆ.  ಸಮ್ಮೆÃಳನ ಮೊದಲು ಪಟ್ಟಣದಲ್ಲಿ ಮಾತ್ರ ಸಿಮೀತ ವಾಗುತ್ತಿದ್ದವು, ಆದರೆ ಈಗ ಗ್ರಾಮಗಳಲ್ಲಿ  ಕನ್ನಡ ಸಾಹಿತ್ಯ ಸಮ್ಮೆÃಳನಗಳ ನಡೆಯುವುದು ಬಹಳ ಮಹತ್ವದ ವಿಚಾರ ಇದರಿಂದ ನಮ್ಮ ಕನ್ನಡ ನಾಡನ್ನು ಬೆಳೆಯುತ್ತದೆ.  13 ರಿಂದ 14ನೇ ಶತಮಾನದಲ್ಲಿ ಗುಡಿಗುಂಡಾರಗಳ ಸಾಹಿತ್ಯವಿದೆ.  ಕೊಪ್ಪಳ ಜಿಲ್ಲೆಯಲ್ಲಿರುವ ಪ್ರತಿಯೊಂದು ಸ್ಥಳವೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.  ತುಂಗ ಭದ್ರ ನದಿ ಯಿಂದ ಸುತ್ತಮುತ್ತಲಿರುವ ಎಲ್ಲಾ ಹಳ್ಳಿಗಳಿಲ್ಲಿಯೂ ರೈತರು ಕಬ್ಬು, ಭತ್ತ, ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ.  ಇಂದಿನ ಸಾಹಿತ್ಯ ಸಮ್ಮೆÃಳನದ ಸಮಸ್ಯೆಗಳನ್ನು ನಾವು ಹಳ್ಳಿ ಗ್ರಾಮಗಳಿಗೆ ತಲುಪಿಸಬೇಕು ಅಂದಾಗ ಮಾತ್ರ ನಾವು ನಮ್ಮ ಕನ್ನಡ ಸಾಹಿತ್ಯವನ್ನು ಬೆಳೆಸಲು ಸಾಧ್ಯವೆಂದು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದ ಸಾನಿದ್ಯವನ್ನು ಶಾಂತಲಿಂಗೇಶ್ವರ ಮಹಾಸ್ವಾಮಿಗಳು ನಗರಗಡ್ಡಿಮಠರವರು ವಹಿಸಿದ್ದರು.  ಭುವನೇಶ್ವರಿ ಭಾವಚಿತ್ರಕ್ಕೆ ಕಸಾಪ ಕೇಂದ್ರ ಸಂಘ-ಸಂಸ್ಥೆ ಪ್ರತಿನಿಧಿ ಡಾ. ಶೇಖರಗೌಡ ಮಾಲಿಪಾಟೀಲರವರು ಪುಷ್ಪಾರ್ಚನೆ ಮಾಡಿದರು.  8ನೇ ಕನ್ನಡ ಸಾಹಿತ್ಯ ಸಮ್ಮೆÃಳನಾಧ್ಯಕ್ಷ ಭಾಷಣಾ ಪ್ರತಿಯನ್ನು ವೇದಿಕೆ ಮೇಲೆಯ ಗಣ್ಯರು ಬಿಡುಗಡೆಗೊಳಿಸಿದರು.  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ ಅಂಗಡಿ, ನಿಕಟ ಪೂರ್ವ ಸಮ್ಮೆÃಳನ ಅಧ್ಯಕ್ಷ ಎಸ್.ಎಂ. ಕಂಬಾಳಿಮಠ, ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಜಿ.ಪಂ. ಸದಸ್ಯೆ ಗಾಯಿತ್ರಿ ವೆಂಕಟೇಶ ಸೇರಿದಂತೆ ಕಸಾಪಾ ಜಿಲ್ಲಾ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು, ಸರ್ವ ಸದಸ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನಾ ನಾಡದೇವತೆ ಭುವನೇಶ್ವರಿ ಭಾವಚಿತ್ರದ ಹಾಗೂ ಸಮ್ಮೆÃಳನಾಧ್ಯಕ್ಷರ ಮೆರವಣಿಗೆಯು ಯಶಸ್ವಿಯಾಗಿ ಜರುಗಿತು.  ವಿವಿಧ ಜಾನಪದ ಕಲಾತಂಡಗಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಿದರು

Please follow and like us:
error