ಮಾದರಿ ಗ್ರಾಮಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ :   ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ :  ಕ್ಷೇತ್ರದ ಶಾಸಕನಾಗಿ ಈ ೭ವರ್ಷ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನ ಕೈಗೊಂಡಿದ್ದು ವಿಷೆಶವಾಗಿ ಶಿಕ್ಷಣ ಆರೋಗ್ಯ ಹಾಗೂ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಮಾಡಲಾಗಿದ್ದು ಪ್ರತಿ ಗ್ರಾಮಕ್ಕೂ ಪ್ರಾಮಾಣಿಕವಾಗಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗಿದೆ. ಬೆಲೆ ಏರಿಕೆ ವಿರುದ್ಧ ಜನತೆಗೆ ದೇಶದ ಉದ್ದಗಲಕ್ಕೂ ಭಾಷಣ ಮಾಡಿ ಅಧಿಕಾರ ಪಡೆದ ಪ್ರಧಾನಿ ಮೋದಿಯವರು ಅಚ್ಚೆ ದಿನ್ ಬರುವ ನೆಪದಲ್ಲಿ ಜನತೆಗೆ ಸುಳ್ಳು ಹೇಳಿ ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲೂ ಮಾಡಿ ಸಬ್ಸಿಡಿ ಕಡಿತ ಜಿಎಸ್‌ಟಿ ಹೊರೆಯಿಂದ ರೈತರು, ವ್ಯಾಪಾರಸ್ಥರು ಹಾಗೂ ಸಣ್ಣ ಉದ್ಯಮಿದಾರರು ಕಂಗಾಲಾಗಿದ್ದಾರೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವು ಬಡವರಿಗೆ ಯಾವುದೆ ಜನಪರ ಯೋಜನೆಗಳನ್ನು ತಲುಪಿಸಲು ಸಂಪೂರ್ಣ ವಿಫಲಗೊಂಡಿವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಹಿರೇಸಿಂದೋಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಹಲಗೇರಿ ಕಾತರಕಿ ಗೂಡ್ಲಾನೂರು ಬೇಳೂರು ಬೂದಿಹಾಳ ಬಿಕನಳ್ಳಿ ಮೈನಳ್ಳಿ ಹಂದ್ರಾಳ ಹಾಗೂ ವದಗನಾಳ ಗ್ರಾಮಗಳಲ್ಲಿ ಅಂದಾಜು ಮೊತ್ತ ರೂ. ೫ ಕೋಟಿ ೬೦ ಲಕ್ಷದ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ ಶಾಲಾ ಕೊಠಡಿ ಸಿಸಿ ರಸ್ತೆ ಚರಂಡಿ ಹಾಗೂ ಪರಿಶಷ್ಟ ಜಾತಿಯ ರೈತರ ಜಮೀನುಗಳಿಗೆ ನೀರಾವರಿ ಯೋಜನೆ ಕಲ್ಪಿಸುವ ಕಾಮಾಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು

ರಾಜ್ಯದ ಬಿಜೆಪಿ ಸರ್ಕಾರದ ಈ ೧೮ ತಿಂಗಳ ಆಡಳಿತದಲ್ಲಿ ಎಲ್ಲಾ ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಮಕ್ಕಳದೇ ಕಾರುಬಾರು ಹೆಚ್ಚಾಗಿದ್ದು ಆಡಳಿತ ವ್ಯವಸ್ಥೆ ಕುಂಟಿತಗೊಂಡಿದ್ದು ಬರುವ ದಿನಗಳಲ್ಲಿ ಇಂತಹ ಬ್ರಷ್ಟ ಸರ್ಕಾರವನ್ನು ಕಿತ್ತೊಒಗೆದ್ದು ಅಭಿವೃದ್ಧಿ ಹಾಗೂ ಜನಪರವಾದ ಕಾಂಗ್ರೇಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಜನತೆಗೆ ಕರೆ ನೀಡಿದರು.

advt : jindal tubes

ಈ ಸಂದರ್ಭದಲ್ಲಿ ಜಿಪಂ ಮಾಜಿ ಅದ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್ ಬಿ ನಾಗರಳ್ಳಿ ಜಿಪಂ ಸದಸ್ಯ ಗೂಳಪ್ಪ ಹಲಗೇರಿ ತಾಪಂ ಅದ್ಯಕ್ಷ ಬಾಲಚಂದ್ರನ್ ಟಿಎಪಿಎಮ್‌ಸಿ ಅದ್ಯಕ್ಷ ಜುಲ್ಲೂಖಾದರಿ ಎಪಿಎಮ್‌ಸಿ ಅದ್ಯಕ್ಷ ವಿಶ್ವನಾಥ ರಾಜು ಹಲಗೇರಿ ಗ್ರಾಪಂ ಅದ್ಯಕ್ಷೆ ಶರಣವ್ವ ತಳವಾರ ಕಾತರಕಿ ಗೂಡ್ಲಾನೂರು ಅದ್ಯಕ್ಷ ಯರಿಯಪ್ಪಗೌಡ ಹಿರೇಗೌಡ್ರ ನಗರಸಭಾ ಸದಸ್ಯರುಗಳಾದ ಬಸಯ್ಯ ಹಿರೇಮಠ ಅಕ್ಬರಪಾಷ ಪಲ್ಟನ್ ಮುಖಂಡರುಗಳಾದ ವೆಂಕನಗೌಡ್ರ ಹಿರೇಗೌಡ್ರ ಪ್ರಸನ್ನ ಗಡಾದ್ ಗಾಳೆಪ್ಪ ಪೂಜಾರ ರಾಮಣ್ಣ ಕಲ್ಲನವರ್ ಶಿವಣ್ಣ ಹಂದ್ರಾಳ ರಾಜಪ್ಪ ಗೂಡ್ಲಾನುರು ಶ್ರೀಧರ ಬೂದಿಹಾಳ ಶಂಕ್ರಪ್ಪ ಮೈನ್ನಳ್ಳಿ ತಾಪಂ ನಿರ್ವಾಹಣ ಮಲ್ಲಿಕಾರ್ಜುನ್ ಅಭಿಯಂತರರಾದ ಹೊನ್ನಪ್ಪ ಲಕ್ಷ್ಮಣ್ಣ ಗುತ್ತಿಗೆದಾರಾದ ತಿಪ್ಪಾರೆಡ್ಡಿ ರಾಯಚೂರ ದೌಲತ್ ಪಾಷ ದಫೆದಾರ್ ಇನ್ನೂ ಅನೇಕ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

 

Please follow and like us:
error