ಮಹಿಳೆ ಮೇಲೆ ದಾಳಿ‌ ಮಾಡಿದ್ದ ಚಿರತೆ ಬಿತ್ತು ಬೋನಿಗೆ

ಕೊಪ್ಪಳ: ಕಳೆದ ಒಂದು ವಾರದ ಹಿಂದೆ ಜಾನುವಾರು ಮೇಯಿಸಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ರಾಂಪುರ ಗ್ರಾಮದ ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಗುರುವಾರ ಬೆಳಗಿನ‌ ವೇಳೆ ಆನೆಗೊಂದಿ ಬಳಿ‌ ಇರಿಸಲಾಗಿದ್ದ ಬೋನಿಗೆ ಬಿದ್ದಿದೆ. ಗ್ರಾಮಸ್ಥರ ಆಕ್ರೋಶದ ನಡುವೆ ನಾಲ್ಕು ಬೋನ್‌ಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು. ಮೂರ್ನಾಲ್ಕು ಚಿರತೆಗಳಿವೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Please follow and like us:
error