ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ


ಕೊಪ್ಪಳ, : ಕೊಪ್ಪಳ ತಾಲ್ಲೂಕಿನ ಮೋರನಹಳ್ಳಿ ಗ್ರಾಮದ ಗೀತಾ @ ಸಂಗೀತಾ ಗಂ. ಜಗದೀಶ ಕರಿಗಾರ (20 ವರ್ಷ) ಎಂಬ ಮಹಿಳೆ ನವೆಂಬರ್.02 ರಿಂದ ಕಾಣೆಯಾಗಿದ್ದು, ಈ ಕುರಿತು ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಚಹರೆ: ಮಹಿಳೆಯು 5.1 ಅಡಿ ಎತ್ತರ, ಸಾದಾಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ಕಪ್ಪು ತಲೆಕೂದಲು, ಮೊಂಡು ಮೂಗು, ವಿಶಾಲವಾದ ಹಣೆ ಹೊಂದಿದ್ದು, ಕಾಣೆಯಾದಾಗ ಬಿಳಿ ಮತ್ತು ನೀಲಿ ಮಿಶ್ರಿತ ನೈಟಿ ಧರಿಸಿದ್ದರು. ಕನ್ನಡ ಮಾತನಾಡುತ್ತಾರೆ.
ಮಹಿಳೆಯ ಕುರಿತು ಮಾಹಿತಿ ದೊರೆತಲ್ಲಿ ಎಸ್.ಪಿ ಕಚೇರಿ ದೂ.ಸಂ. 08539-230111, ಕೊಪ್ಪಳ ಡಿವೈಎಸ್‌ಪಿ- 08539-230342, 9480803720, ರೂರಲ್ ಸಿಪಿಐ- 08539-231-333, 9480803731, ಅಳವಂಡಿ ಪಿ.ಎಸ್.ಐ 08539-285233, 9480803747, ಕಂಟ್ರೋಲ್ ರೂಂ. 08539-230222, 230100, 9480803700 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಅಳವಂಡಿ ಪೊಲೀಸ್ ಠಾಣೆ ಅಮಲ್ದಾರರು   ತಿಳಿಸಿದ್ದಾರೆ.

Please follow and like us:
error