ಮಹಿಳಾ ಕೃತಿಗೆ ಬಹುಮಾನ

ಮಾ.೧೦ ಕೊಪ್ಪಳ ಜಿಲ್ಲೆಯ ಮಹಿಳೆಯರು ಬರೆದ ಯಾವುದೇ ಪ್ರಕಾರದ ಕೃತಿಯನ್ನು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಆಹ್ವಾನಿಸುತ್ತದೆ. ಶ್ರೀಮತಿ ಲಕ್ಷಮ್ಮ ಪಂಪ್ಪಣ ಗೋನಾಳ ಮಾದಿನೂರ ಇವರ ಹೆಸರಿನಲ್ಲಿ   ಜಿ.ಎಸ್.ಗೋನಾಳ ಕೊಡಮಾಡಿದ ಪ್ರಶಸ್ತಿಯನ್ನು ಆಯ್ಕೆಯಾದ ಅತ್ಯುತ್ತಮ ಕೃತಿಗೆ ನೀಡಲಾಗುತ್ತದೆ. ಆಸಕ್ತ ಲೇಖಕಿಯರು ಜನೆವರಿ ೧ ರಿಂದ ಡಿಸೆಂಬರ್ ೨೦೨೦ ರೊಳಗೆ ಪ್ರಕಟವಾದ ಕೃತಿಯ ೩ ಪ್ರತಿಗಳನ್ನು ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷರು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ, ಕಲ್ಯಾಣ ನಗರ ಕೊಪ್ಪಳ ಈ ವಿಳಾಸಕ್ಕೆ ಏಪ್ರಿಲ್ ೧೦ ರೊಳಗೆ ಕಳಿಸಬೇಕಾಗಿ ವಿನಂತಿ.

Please follow and like us:
error