ಮಹಿಳಾ ಅಧ್ಯಯನ ವಿಭಾಗ ನೇಮಕಾತಿಯಲ್ಲಿ ತಾರತಮ್ಯ – ಡಾ ಪಂಪಾಪತಿ

Bellary  News : ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ಹಗರಣಗಳಿಗೆ ಹೆಸರಾಗಿದೆ‌‌. ಈಗ ಮತ್ತೊಂದು ಹಗರಣಕ್ಕೆ ವಿಶ್ವವಿದ್ಯಾಲಯ ಹೆಸರಾಗಿದೆ‌‌‌. ಮಹಿಳಾ ಅಧ್ಯಯನ ವಿಭಾಗದಲ್ಲಿ ನೇಮಕಾತಿಯಲ್ಲಿ ತಾರತಮ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅನ್ಯಾಯಕ್ಕೊಳಗಾದ ಡಾ ಪಂಪಾಪತಿ, ಕೋರ್ಸ್ ವರ್ಕ್ ಮಾಡದೇ ಪಿ ಎಚ್ ಡಿ ಪಡೆದ ಶ್ರೀದೇವಿ ಎಂಬುವವರನ್ನು ಸಹಾಯಕ ಪ್ರಾಧ್ಯಾಪರ ಹುದ್ದೆಗೆ ನೇಮಕ ಮಾಡಲಾಗಿದೆ.‌ ವಿಶ್ವವಿದ್ಯಾಯದ ವೆಬ್ ಸೈಟ್ ನಲ್ಲಿ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.‌ ಆದರೆ ಈ ಪಟ್ಟಿಯಲ್ಲಿ ವಿಶ್ವವಿದ್ಯಾಲಯದ ಹೆಸರೇ ಇಲ್ಲ. ಮತ್ತು ಮೆರಿಟ್ ಆಧಾರಿತವಾಗಿ ಆಯ್ಕೆಯಾದವರನ್ನು ವಿಶ್ವವಿದ್ಯಾಲಯ ಸಂದರ್ಶನಕ್ಕೆ ಕರೆದಿಲ್ಲ. ನೇಮಕಾತಿಗೆ ನಡೆಸಬೇಕಾದ ನ್ಯಾಯಬದ್ಧ ಹಂತಗಳನ್ನು ಪೂರೈಸದೇ ಮೆರಿಟ್ ಇಲ್ಲದ ಅರ್ಜಿದಾರರನ್ನು ಯುಜಿಸಿ ನಿಯಮಾವಳಿಗಳ ವಿರುದ್ಧವಾಗಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆ ಮಾಡಲಾಗಿದೆ‌‌. ಈಗಾಗಲೇ ಅವರು ನೇಮಕವಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗುವವರೆಗೂ ವಿವಿ ವಿರುದ್ಧ ಹೋರಾಟ ನಡೆಸಲಾಗುವುದು ಅಂತಾ ಡಾ. ಪಂಪಾಪತಿ ತಿಳಿಸಿದರು.

Please follow and like us:
error