ಮಹಾರಾಷ್ಟ್ರದಿಂದ ಕೊಪ್ಪಳಕ್ಕೆ ರೈಲಿನಲ್ಲಿ ಆಗಮಿಸಿದ ಕಾರ್ಮಿಕರು: ವಸತಿ ನಿಲಯಗಳಲ್ಲಿ ಕ್ವಾರಂಟೈನ್

ಕೊಪ್ಪಳ :  ಇಂದು ಬೆಳಿಗ್ಗೆ  ವಿಶೇಷ ರೈಲಿನ ಮೂಲಕ ಗುಳೆ ಹೋಗಿದ್ದ ಕಾರ್ಮಿಕರು ಕೊಪ್ಪಳಕ್ಕೆ ವಾಪಸ್ಸಾಗಿದ್ದಾರೆ. ಮಹಾರಾಷ್ಟ್ರದ ಸಿಂದುದುರ್ಗ ಮತ್ತಿತರ ಕಡೆಗೆ ದುಡಿಯಲು ಹೋಗಿದ್ದ ಕಾರ್ಮಿಕರು ಇಂದು ವಿಶೇಷ ರೈಲಿನ ಮೂಲಕ ಕೊಪ್ಪಳಕ್ಕೆ ಬಂದಿದ್ದಾರೆ.  ಅಗಮಿಸಿದ್ದ ಕಾರ್ಮಿಕರಿಗೆ ಜಿಲ್ಲಾಡಳಿತದವತಿಯಿಂದ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಕೊಪ್ಪಳ‌ ರೈಲ್ವೆ ನಿಲ್ದಾಣದಲ್ಲೂ ತಪಾಸಣೆ ಮಾಡಿ ಕಳಿಸಲಾಯಿತು.  ಅವರ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 88 ಕ್ಕೂ ಹೆಚ್ಚು ಕಾರ್ಮಿಕರು ಬಂದಿದ್ದಾರೆ. ಜಿಲ್ಲಾಡಳಿತ ಕುಷ್ಟಗಿ, ಗಂಗಾವತಿ, ಕಾರಟಗಿ, ಯಲಬುರ್ಗಾ ದಿಂದ ದುಡಿಯಲು ಹೋಗಿದ್ದ ಜನರ ಸಂಪೂರ್ಣ ವಿವರಣೆ ಪಡೆದು ಊರುಗಳಿಗೆ ಕಳುಹಿಸುತ್ತಿದೆ.  ೧೪ ಜನರನ್ನು ಕೊಪ್ಪಳದ ವಸತಿ ಶಾಲೆಯಲ್ಲಿ ಕ್ವಾರಂಟೈನ್  ಮಾಡಲಾಗುತ್ತಿದೆ.  ಕುಕನೂರು-೫, ಕೊಪ್ಪಳ,-೧೪, ಕುಷ್ಟಗಿ-೬೯ ಕೂಲಿ ಕಾರ್ಮಿಕರು ೧೪ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ . ಎಲ್ಲಾ ಕಾರ್ಮಿಕರನ್ನು ಆಯಾ ತಾಲೂಕುಗಳಲ್ಲಿರುವ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.

Please follow and like us:
error