ಮಹಾದಾಸೋಹಕ್ಕೆ ಎರಡು ಲಕ್ಷ ಎಳ್ಳು ಹೋಳಿಗೆಗಳ ಅರ್ಪಣೆ

ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ನಿಮಿತ್ಯ ಜಾತ್ರಾ ಮಹಾ ದಾಸೋಹಕ್ಕೆ ಭಕ್ತಾದಿಗಳು ಸಹಿ ಪದಾರ್ಥ, ತರಕಾರಿ, ಸೊಪ್ಪು ವಿವಿಧ ಬಗೆಯ ಖಾದ್ಯಗಳನ್ನು ಅರ್ಪಿಸುತ್ತಿದ್ದು, ಇಂದು ಕುಕನೂರಿನ ಗ್ರಾನೈಟ್ ಕಲ್ಲು ಗಣಿಗಾರಿಕೆ ಸಂಘದವತಿಯಿಂದ ಎರಡು ಲಕ್ಷ ಎಳ್ಳು ಹೋಳಿಗೆಗಳನ್ನು ಮಹಾ ದಾಸೋಹಕ್ಕೆ ಅರ್ಪಿಸಿ ತಮ್ಮ ಭಕ್ತಿಯ ಧನ್ಯತೆಯನ್ನು ಮೆರೆದಿದ್ದಾರೆ. ಅರ್ಪಣೆ ಮಾಡಿದ ಭಕ್ತಾದಿಗಳಿಗೆ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.

ರಕ್ತದಾನ ಶಿಬಿರ
ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ನಿಮಿತ್ಯ ಶ್ರೀ ಗವಿಮಠ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಕಾಲ ರಕ್ತದಾನ ಶಿಬಿರಕ್ಕೆ ಅನೇಕ ಯುವಕರು, ಯುವತಿಯರು, ಪ್ರೌಢರು ರಕ್ತದಾನ ಕೇಂದ್ರಕ್ಕೆ ಆಗಮಿಸಿ ರಕ್ತದಾನ ಮಾಡುತ್ತಿದ್ದಾರೆ. ಎರಡನೇ ದಿನವಾದ ಇಂದು ಸುಮಾರು ೧೯೦ ಜನರ ಮೂಲಕ ೧೯೦ ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ, ನಾಳೆ ರಕ್ತದಾನ ಶಿಬಿರಕ್ಕೆ ಅಂತಿಮ ದಿನವಾಗಿದ್ದು ಸಾರ್ವಜನಿಕರು ಮತ್ತು ಭಕ್ತಾಧಿಗಳು ರಕ್ತದಾನ ಶಿಬಿರಕ್ಕೆ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿಯಾದ ಡಾ.ಶ್ರೀನಿವಾಸ ಹ್ಯಾಟಿ ತಿಳಿಸಿದ್ದಾರೆ

 

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಎಫ್‌ಐಎಲ್) ವತಿಯಿಂದ
ಜಾತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ಜನೆವರಿ ೩ ರಿಂದ ಆರಂಭವಾಗಿದೆ. ಈ ವರ್ಷದ ಜಾತ್ರೆ ಉದ್ಘಾಟನೆಯನ್ನು ಅಣ್ಣಾ ಹಜಾರೆ ಎಂದು ಹೆಸರಾದ ಶ್ರೀ ಕಿಶನ್ ಬಾಬುರಾವ್ ಹಜಾರೆಯವರು ನೆರವೇರಿಸಿದರು. ಪ್ರತಿ ವರ್ಷ ಸಾವಿರಾರು ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ. ಉತ್ತರ ಕರ್ನಾಟಕದಲ್ಲಿ ನಡೆಯುವ ಬಹುದೊಡ್ಡ ಜಾತ್ರೆಯಾಗಿದೆ. ಗವಿಮಠವು ಅನ್ನ, ಅರಿವು, ಆಧ್ಯಾತ್ಮ ತ್ರಿವಿಧ ದಾಸೋಹವನ್ನು ಭಕ್ತಾದಿಗಳಿಗೆ ಒದಗಿಸುತ್ತಿದೆ. ಈ ಜಾತ್ರೆಯ ಮಹಾಪ್ರಸಾದದ ವಿಶೇಷತೆ ಎಂದರೆ ರೊಟ್ಟಿ, ಸಿಹಿ ಬುಂದಿ, ಮಾದಲಿ, ಅನ್ನ, ಸಾಂಬಾರು, ಕಾಯಿಪಲ್ಯೆ ಇತ್ಯಾದಿಗಳನ್ನು ಭಕ್ತರಿಗೆ ಉಣಬಡಿಸಲಾಗುತ್ತದೆ. ಈ ಎಲ್ಲ ಭಕ್ತಾದಿಗಳಿಗೆ ಜಾತ್ರೆಯ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನ ಕಳೆದ ವರ್ಷದಂತೆ ಈ ವರ್ಷವೂ ಕೂಡ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಎಫ್‌ಐಎಲ್) ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಎರಡು ಕಡೆ ನೀರಿನ ಅರವಟಿಕೆಗಳನ್ನು ನಿರ್ಮಿಸಲಾಗಿದೆ. ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರು ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಪಡೆಯುತ್ತಾರೆ. ಕೆಎಫ್‌ಐಎಲ್ ಕಂಪನಿಯವರು ಕಳೆದ ವರ್ಷದಂತೆ ಈ ವರ್ಷವೂ ಕೂಡ ಗವಿಮಠದ ಆವರಣದಲ್ಲಿ ಕಸವನ್ನು ಸ್ವಚ್ಛಮಾಡುವದಕ್ಕೆ ಯಂತ್ರಗಳನ್ನು ಶ್ರೀಮಠಕ್ಕೆ ಪೊರೈಸಿದ್ದಾರೆ. ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತಾ ಯಂತ್ರಗಳ ಪೊರೈಕೆಯ ಕಾರ್ಯವು ಎಲ್ಲ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Please follow and like us:
error