ಮಹಾತ್ಮರನ್ನು ಕೊಂದ ಗೋಡ್ಸೆಯನ್ನು ,ಆತನನ್ನು ಬೆಂಬಲಿಸಿದ ಸಾವರ್ಕರರನ್ನು ವಿಜೃಂಭಿಸಿತ್ತಿರುವುದು ದುರಾದೃಷ್ಟ-ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಶಾಸಕರಿಂದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಪುತ್ಥಳಿ ಅನಾವರಣ
ಕೊಪ್ಪಳ : ೦೪  ಸ್ವತಂತ್ರ ಸಂಗ್ರಾಮಕ್ಕೆ ಮಹತ್ಮರ ಕೊಡುಗೆ ಅನನ್ಯ, ಬ್ರೀಟಿಷರ ವಿರುದ್ಧ ಅಸಹಕಾರ ಚಳುವಳಿಯಿಂದ ದೇಶದಿಂದ ಬ್ರೀಟಿಷರನ್ನು ಹೋರದೂಡಿ ಭಾರತ ಮಾತೆಯನ್ನು ಅವರ ಕಪಿಮುಷ್ಠಿಯಿಂದ ಸ್ವತಂತ್ರಗೊಳಿಸಿದ್ದು ಮಹಾತ್ಮರ ದೇಶಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ. ಇಂದು ನಮ್ಮ ದೇಶದ ಇತಿಹಾಸದ ದೌರಭಾಗ್ಯವು ಮಹಾತ್ಮರನ್ನು ಕೊಂದ ಗೋಡ್ಸೆಯನ್ನು ಹಾಗೂ ಆತನನ್ನು ಬೆಂಬಲಿಸಿದ ವೀರ ಸರ್ವಾರಕರನ್ನು ವಿಜೃಂಭಿಸಿತ್ತಿರುವುದು ನಮ್ಮ ದುರಾದೃಷ್ಟ್ರ, ಬಾಪೂಜಿರವರ ಶಾಂತಿ ಸಂದೇಶ ತತ್ವ ಆರ್ದಶಗಳು ಅವರ ರಾಷ್ಟ್ರಪ್ರೇಮ ಪ್ರತಿಯೊಬ್ಬ ಭಾರತೀಯನು ವಿಷೇಶವಾಗಿ ಯುವಕರು ಚಾಚು ತಪ್ಪದೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪುತ್ಥಳಿ ಅನಾವರಣ ಮಾಡಿ ಬಳಿಕ ಮಾತನಾಡಿದರು
ಇದೆ ಸಂದರ್ಭದಲ್ಲಿ ಪಂಚಾಯಿತಿಯಿಂದ ನಿರ್ಮಾಣಗೊಂಡ ಆರು ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎ.ಪಿ.ಎಮ್.ಸಿ ಸದಸ್ಯ ವಿಶ್ವನಾಥ ರಾಜು, ನಗರ ಸಭಾ ಸದಸ್ಯ ಅಕ್ಬರ ಪಾಷ ಪಲ್ಟನ್, ಮಾಜಿ ಗ್ರಾ.ಪಂ ಅಧ್ಯಕ್ಷೆ ರೇಣುಕಾ ಕಟಗಿ, ಮಾಜಿ ತಾ.ಪಂ ಅಧ್ಯಕ್ಷ ದೇವಣ್ಣ ಮೆಕಾಳಿ, ತಾ.ಪಂ ಸದಸ್ಯ ಅದಿಗಾಳಪ್ಪ, ಮುಖಂಡರುಗಳಾದ ಚನ್ನಕೃಷ್ಣ, ನಜೀರ್ ಸಾಬ, ಯಮನೂರಪ್ಪ, ವೆಂಕಟೇಶ, ಶಿವುಬಾಬು, ರೂಪ್ಲಾ ನಾಯಕ್ ಇನ್ನೂ ಅನೇಕ ಮುಖಂಡರುಗಳು ಹಾಗೂ ವಕ್ತಾರ ಕುರಗೋಡ ರವಿ ಉಪಸ್ಥಿತರಿದ್ದರು.

Please follow and like us:
error