ಮಸ್ಜಿದ್ ನಿರ್ಮಾಣ ಪುಣ್ಯದ ಕೆಲಸ- ಅಸೀಪ್ ಅಲಿ

ಕೊಪ್ಪಳ : ಬದುಕಿನಲ್ಲಿ ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವೂ ಅಗತ್ಯ. ಧಾರ್ಮಿಕ ಶಿಕ್ಷಣ ಪಡೆದವರು ಮತ್ತು ಧಾರ್ಮಿಕತೆಯನ್ನು ಮೈಗೂಡಿಸಿಕೊಂಡವರು ನೈತಿಕತೆಯಿಂದ ಬಾಳುತ್ತಾರೆ. ಇದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ. ಈ ನಿಟ್ಟಿನಲ್ಲಿ ಮಸೀದಿ ನಿರ್ಮಾಣ ಪುಣ್ಯದ ಕೆಲಸ ಇದರಲ್ಲಿ ಎಲ್ಲರೂ ಭಾಗೀಯಾಗಿರುವುದು ಶ್ಲಾಘನೀಯ ಎಂದು ರಾಜ್ಯ ವಕ್ಪ್ ಮಂಡಳಿ ಸದಸ್ಯ, ಹಾಗೂ ರಾಜ್ಯ ವಕೀಲರ್ ಪರಿಷತ್ ಸದಸ್ಯಹಿರಿಯ ವಕೀಲ ಅಸೀಪ್ ಅಲಿ ಎಸ್. ಹೇಳಿದರು.

ಅವರು ಇಂದು ಭಾಗ್ಯನಗರದ ಜಾಮೀಯಾ ಮಸ್ಜಿದ್ ನ ನವೀಕರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಾಮೂಹಿಕ ಪ್ರಾರ್ಥನೆಗೆ ಎಲ್ಲರಿಗೂ ಮಸ್ಜಿದ್ ಗಳು ಅವಶ್ಯ. ಭಾಗ್ಯನಗರದಲ್ಲಿ 1976ರಲ್ಲಿ ನಿರ್ಮಾಣವಾಗಿದ್ದ ಮಸ್ಜೀದ್ ನವೀಕರಣಕ್ಕೆ ವಕ್ಫ್ ಮಂಡಳಿ 2 ಲಕ್ಷ ನೀಡಿದೆ. ಸಮಾಜದ ವಿವಿಧ ದಾನಿಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಇದರಿಂದಾಗಿ ಸುಸಜ್ಜಿತವಾದ ಮಸ್ಜಿದ್ ನಿರ್ಮಾಣ ಸಾಧ್ಯವಾಗಿದೆ. ಭಾಗ್ಯನಗರದ ಪಂಚಕಮಿಟಿಯವರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.


ಮುಖಂಡರಾದ ಕೆ.ಎಂ.ಸಯ್ಯದ್, ಕಾಟನ್ ಪಾಷಾ, ಸಾಧಿಕ್ ಅತ್ತಾರ್, ಅಮ್ಜದ್ ಪಟೇಲ್, ಮಾನ್ವಿ ಪಾಷಾ,ಇಬ್ರಾಹಿಂ ಸಾಬ ಬಿಸರಳ್ಳಿ, ಕೆಎಂಡಿಸಿ, ವಕ್ಫ್ ಅಧಿಕಾರಿಗಳನ್ನು ಸೇರಿದಂತೆ ಇತತರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಉದ್ಯಮಿ ಸಾಧಿಕ್ ಅಲಿ ಅತ್ತಾರ ಮಸ್ಜೀದ್ ಗೆ ಮೀನಾರುಗಳ ನಿರ್ಮಾಣಕ್ಕಾಗಿ 51 ಸಾವಿರ ರೂಪಾಯಿ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಹಾಜಿ ಕುತ್ಬುದ್ದಿನಸಾಬ್, ಹೊನ್ನೂರಸಾಬ, ಮೆಹಬೂಬಸಾಬ ಬಳಿಗಾರ, ಮೌಲಾಹುಸೇನ ಹಣಗಿ , ಮರ್ಧಾನಸಾಬ ಹಿರೇಮಸೂತಿ, ಶರೀಪ್ ಸಾಬ ಟಾಂಗಾ, ಬಾಬು ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error