ಮಲೇಷಿಯಾದಲ್ಲಿ ಭಾರತ ಧ್ವಜ ಹಾರಿಸಿದ ಕೊಪ್ಪಳದ ಹುಡುಗ

ಕೊಪ್ಪಳ- ೨೧- ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಾಗೂ ಪತ್ರಿಕಾ ಬರವಣಿಗೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಬಸವರಾಜ ಮರದೂರ ಚಿಕ್ಕ ವಯಸ್ಸಿನಲ್ಲೇ ಪತ್ರಿಕಾ ಸಂಪಾದಕನಾಗಿ “ಹಸಿವಿದ್ದ ಕಡೆ ನಮ್ಮ ನಡೆ” ಸುಧಾ ಕಲ್ಚರಲ್ ಅಕಾಡೆಮಿ ಕೊಪ್ಪಳ ತಂಡ ದಿಂದ ಉಳಿದ ಆಹಾರವನ್ನು ಹಸಿದೊಡಲಿಗೆ ತಲುಪಿಸಿ, ಹಲವಾರು ಸಾಮಾಜಿಕ ಅಂಕುಡೊಂಕು ತಿದ್ದುವಲ್ಲಿ ಅವಿರಶ್ರಮ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ೨೦ ಬಾರಿ ರಕ್ತದಾನ ಮಾಡಿದ್ದಾರೆ. ಹಸಿದವರಿಗೆ ಅನ್ನ ನೀಡುವುದು ಸಾಮಾಜಿಕ ಜಾಲತಾಣದ ಮೂಲಕ ಕಾಣೆಯಾದ ಮಕ್ಕಳ ಹುಡುಕಾಟ, ಸಿನೆಮಾ, ಹೀಗೆ ಹತ್ತಾರು ವಿವಿಧ ಮುಖಗಳಿಂದ ಗುರುತಿಸಿ ಮಲೇಶಿಯಾದ ಕೌಲಾಲಂಪುರ್ ದಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಜು ೧೮ ರಂದು ಇಂಟರ್ ನ್ಯಾಷನಲ್ ಮ್ಯಾನ ಆಫ ದಿ ಇಯರ್ ಅವಾರ್ಡ್ ಬಸವರಾಜ ಮರದೂರ ಅವರು ಪ್ರಶಸ್ತಿ ಸ್ವಿಕರಿಸಿದ್ದಾರೆ. ಸುದ್ದಿ ತಿಳಿದ ಸ್ನೇಹ ಬಳಗ ಹಾಗೂ ಪತ್ರಿಕಾಮಿತ್ರರು ಹಾರೈಸಿದರು.

Please follow and like us:
error