ಮನೆಗಾಗಿ ಬದುಕನ್ನು ಸೀಮತಗೊಳಿಸಬೇಡಿ : ಸ್ವಾಮೀಜಿ ಸಲಹೆ

ಗ್ರಂಥ ಬಿಡುಗಡೆ ಗುರುವಿಗೆ ಮರೆಯಲಾರದ ಕೊಡುಗೆ : ಶ್ಲಾಘನೆ 
 ಕನಕಗಿರಿ: ಅಮೂಲ್ಯವಾದ ಜೀವನವನ್ನು  ಬರೀ ಮನೆ, ಸಂಸಾರಕ್ಕಾಗಿ ಸೀಮಿತಗೊಳಿಸದೇ ಸಮಾಜ ಪ್ರಗತಿಗಾಗಿ ಯೋಜಿಸಿ ಕ್ರಿಯಾಶೀಲರಾದರೆ  ಬದುಕು ಬಂಗಾರವಾಗುತ್ತದೆ ಎಂದು ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಡಾ.  ಚನ್ನಮಲ್ಲಸ್ವಾಮಿ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ  ಸಂಶೋಧಕ ಡಾ. ಡಿ. ಕೆ. ಮಾಳಿ ಅವರು ಕುರಿತು  ಪತ್ರಕರ್ತ ಮೆಹಬೂಬಹುಸೇನ ಸಂಪಾದಿಸಿರುವ ಅರಿವಿನ ಹಣತೆ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಆದರ್ಶ, ಮೌಲ್ಯಗಳಿಗೆ ಬದ್ದರಾಗಿ  ಬದುಕಿದಾಗ ಮಾತ್ರ ಜೀವನಕ್ಕೆ ಅರ್ಥ ಬರುತ್ತದೆ, ಸಮಾಜ ಮುಖಿಯಾಗಿ ಚಿಂತಿಸಿ ಹಲವಾರು   ಕಾರ್ಯಕ್ರಮಗಳನ್ನು ನಡೆಸಿದಾಗ  ಜೀವನ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಯಾವುದೇ ವ್ಯಕ್ತಿ ಸಮಾಜ ವಿವಿಧ ರಂಗಗಳಲ್ಲಿ  ಉನ್ನತ ಮಟ್ಟದಲ್ಲಿ  ಬೆಳೆಯಬೇಕಾದರೆ ಆತ ಅಳವಡಿಸಿಕೊಂಡ ಆದರ್ಶಗಳು ಕಾರಣವಾಗುತ್ತವೆ ಈ ನಿಟ್ಟಿನಲ್ಲಿ ಡಾ. ಮಾಳಿ ಅವರು ಉನ್ನತ ಮಟ್ಟದಲ್ಲಿ ಬೆಳೆದು ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದು ಶ್ಲಾಘಿಸಿದರು.  .
ಸಂಶೋಧಕ  ಡಾ.  ಶರಣಬಸಪ್ಪ ಕೋಲ್ಕಾರ ಮಾತನಾಡಿ ವಿದ್ಯಾರ್ಥಿಗಳು ಟಿ.ವಿ, ಮೊಬೈಲ್‍ಗಳಲ್ಲಿ ಹೆಚ್ಚು ಸಮಯ ಹಾಳು ಮಾಡುತ್ತಿದ್ದು  ಕ್ರಿಯಾಶೀಲತೆ ಕಳೆದುಕೊಂಡು ಅಧ್ಯಯನ, ಬರಹದಿಂದ ವಿಮುಖರಾಗುತ್ತಿದ್ದಾರೆ,  ವಿದ್ಯಾರ್ಥಿ ಸಮೂಹ ಅಧ್ಯಯನದ  ಜತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ತಿಳಿಸಿದರು. ಇಂದಿನ ಕಂಪ್ಯೂಟರ್ ಯುಗದಲ್ಲಿ ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳಲ್ಲಿ ಸಂಸ್ಕಾರದ ದೀಪ ಬೆಳಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಂಶೋಧಕ ಡಾ. ಡಿ. ಕೆ, ಮಾಳಿ ಮಾತನಾಡಿ ತಾವು 22 ವರ್ಷಗಳ ಕಲಾ ಉಪನ್ಯಾಸಕ ಹುದ್ದೆಯಲ್ಲಿ  ಸಲ್ಲಿಸಿದ ನಿಸಾರ್ವಥ
 ಸೇವೆಗೆ ವಿದ್ಯಾರ್ಥಿ ಸಮೂಹ ಅಭಿನಂದನಾ  ಗ್ರಂಥ ಬಿಡುಗಡೆಗೊಳಿಸುವ ಗೌರವ  ಸಲ್ಲಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ, ಶಾಸಕ ಬಸವರಾಜ ಧಡೇಸೂಗುರು, ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಾ ರಮೇಶ ನಾಯಕ, ಪ್ರಾಂಶುಪಾಲ ಜಿ. ಅನಿಲಕುಮಾರ,  ಪ್ರಾಧ್ಯಾಪಕ ಡಿಬಿ ಕರಡೋಣ,  ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಅರವಟಗಿಮಠ,  ತಾಲ್ಲೂಕು ಕಸಾಪ ಅಧ್ಯಕ್ಷ ಮೆಹಬೂಬುಹುಸೇನ, ಉಪನ್ಯಾಸಕರಾದ ಡಾ. ಫಕೀರಪ್ಪ ವಜ್ರಬಂಡಿ  ಈಶ್ವರಪ್ಪ ಹಲಗಿ, ಪ್ರಭುಲಿಂಗ ವಸ್ತ್ರದ ಮಾತನಾಡಿದರು.
ಅಂತರರಾಷ್ಟ್ರೀಯ ಕಲಾವಿದ ಜೀವನಸಾಬ ಬಿನ್ನಾಳ ಅವರು ಜನಪದ ಕಾರ್ಯಕ್ರಮ ನಡೆಸಿಕೊಟ್ಟರು.
  ತಹಶೀಲ್ದಾರ ಸಂತೋಷರಾಣಿ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ,  ಪಟ್ಟಣ ಪಂಚಾಯಿತಿ ಸದಸ್ಯರಾದ ಶರಣಬಸಪ್ಪ ಭತ್ತದ, ಹುಲಗಪ್ಪ ವಾಲೇಕಾರ, ಸರಸ್ವತಿ ಕನಕಪ್ಪ,  ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಪ್ರಾಂಶುಪಾಲ ಬಸವರಾಜ ಬಡಿಗೇರ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ,  ಗಂಗಾವತಿ ಕಸಾಪ ಅಧ್ಯಕ್ಷ ಎಸ್.ಬಿ ಗೊಂಡಬಾಳ,  ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ,  ವೀರೇಶ ಸಮಗಂಡಿ, ಗಂಗಾಧರಸ್ವಾಮಿ ಕಲುಬಾಗಿಲಮಠ, ಪ್ರಕಾಶ ಹಾದಿಮನಿ,  ಶರಣಪ್ಪ ಸೋಮಸಾಗರ, ಮೆಹಬೂಬಹುಸೇನ ಬೇವಿನಾಳ,  ಬ್ರಹ್ಮನಂದಾ ಕಟ್ಟಿ, ಮಧುಸೂದನ್ ಅರ್ಚಕ, ಈಶಪ್ಪ ಇಟಗಿ, ಸಂಪಾದಕ ಮಂಡಳಿ ಸದಸ್ಯರು  ಸೇರಿದಂತೆ ಇತರರು ಇದ್ದರು.
 ವಿವಿಧ ಪಕ್ಷದ ಮುಖಂಡರು, ಗಣ್ಯರು, ಅಭಿಮಾನಿಗಳು, ಡಾ. ಡಿ. ಕೆ. ಮಾಳಿ ಅವರನ್ನು ಸನ್ಮಾನಿಸಿದರು.
ಮುಕ್ತಾಯ
Please follow and like us:
error