ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಧಿ ವಿಸ್ತರಣೆ


ಕೊಪ್ಪಳ ಅ.   ಕೊಪ್ಪಳ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೆÃತ್ರಗಳ 2020ರ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಾಗೂ ಮತದಾರರ ಪರಿಶೀಲನಾ ಕಾರ್ಯದ ವೇಳಾ ಪಟ್ಟೆಯನ್ನು ಪರಿಷ್ಕರಿಸುವ ಅವಧಿಯನ್ನು ನವೆಂಬರ್. 18  ರಿಂದ 2020ರ ಜನವರಿ. 01 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಅರ್ಹತಾ ದಿನಾಂಕ 01-01-2020 ರ ಆಧಾರದ ಮೇಲೆ ಮತದಾರರ ಪಟ್ಟಿಗಳ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಸಲುವಾಗಿ ಈ ಹಿಂದೆ ಹೊರಡಿಸಲಾದ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ರದ್ದುಗೊಳಿಸಿ, ಹೊಸದಾಗಿ ಕಾರ್ಯಕ್ರಮವ ವೇಳಾಪಟ್ಟಿಯನ್ನು ನೀಡಿದೆ.  ಆದ್ದರಿಂದ ಕೊಪ್ಪಳ ಜಿಲ್ಲೆಯ, 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಮತ್ತು 64-ಕೊಪ್ಪಳ ವಿಧಾನಸಭಾ ಕ್ಷೆÃತ್ರಗಳಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯ ನಡೆಯುತ್ತದೆ.
ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಕ್ರಮದ ವೇಳಾ ಪಟ್ಟಿ ಇಂತಿದೆ, ನ. 18 ರಿಂದ ಮತದಾರರ ಪರಿಶೀಲನಾ ಕಾರ್ಯ ತಿದ್ದುಪಡಿಯಾಗುವಲ್ಲಿ ತಮ್ಮ ವಿವರುಗಳು ಸರಿಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲು ಹಾಗೂ ಯಾವುದಾದರೂ ತಿದ್ದುಪಡಿ ಮಾಡಿಕೊಳ್ಳಬಹುದು. ನ. 25 ಕರಡು ಮತದಾರರ ಪಟ್ಟಿ ಪ್ರಕಟಿಸಲ್ಲಿದ್ದು, ಅಂದಿನಿಂದ ಡಿಸೆಂಬರ್ 24 ಕರಡು ಮತ್ತು ಆಕ್ಷೆÃಪಣೆಗಳನ್ನು ಸ್ವಿÃಕರಿಸುವ ವಿಶೇಷ ಆಂದೋಲನ ಜಿಲ್ಲೆಯಲ್ಲಿ ಕೈಗೊಳ್ಳಲಾಗುವುದು. 2020 ರ  ಜನವರಿ 01 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Please follow and like us:
error