ಮಕ್ಕಳ ಹಕ್ಕುಗಳ ರಕ್ಷಣೆ ದೊಡ್ಡ ಜವಾಬ್ದಾರಿ : ರಾಘವೇಂದ್ರ

ಕೊಪ್ಪಳ, ಆ. ೧೭: ದೇಶದ ಹದಿನಾಲ್ಕು ವರ್ಷದ ಮಕ್ಕಳ ರಕ್ಷಣೆಯ ಜವಾಬ್ದಾರಿ ಅತ್ಯಂತ ದೊಡ್ಡದು, ಭವಿಷ್ಯದ ಭಾರತದ ರಚನೆಗೆ ಅದು ನಾಂದಿ ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ನೂತನ ಸದಸ್ಯ ರಾಘವೇಂದ್ರ ಹೆಚ್. ಸಿ. ಹೇಳಿದರು. ಅವರು ನಗರದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಘೂ ಸ್ವಾಭಿಮಾನಿ ಸಂಚಲನ ಮಹಿಳಾ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾನೂನು ರೀತಿಯಲ್ಲಿ ಅಧಿಕಾರ ಹೊಂದಿರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಮಕ್ಕಳ ವಿಷಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಲೇಬೇಕುಬೇಖು ಇಲ್ಲವಾದಲ್ಲಿ ದಂಡಕ್ಕೆ ಮತ್ತು ಶಿಕ್ಷೆಗೆ ಗುರಿಯಾಗುತ್ತಾರೆ. ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿ ಮತ್ತು ಪೋಕ್ಸೋ ಅಡಿಯಲ್ಲಿ ಯುವತಿಯರ ಮತ್ತು ಯುವಕರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ತೀವ್ರವಾಗಿದ್ದು, ಸಮಾಜ ಸುಧಾರಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ತುರ್ತು ಕ್ರಮ ತೆಗೆದುಕೊಳ್ಳಬೇಕು. ಪ್ರತಿ ತಿಂಗಳು ನಾಲ್ಕು ದಿನ ಕೊಪ್ಪಳ ಜಿಲ್ಲೆಯ ಮಕ್ಕಳ ಹಕ್ಕು, ಮೂಲ ಸೌಕರ್ಯ ಮತ್ತು ಧೌರ್ಜನ್ಯ ತಡೆಯುವ ಕೆಲಸವನ್ನು ಇಲ್ಲಿನ ಎಲ್ಲಾ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಾಡಲಾಗುವದು ಎಂದರು.ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಶಿಕ್ಷಣದ ಗುಣಮಟ್ಟ, ಮೌಲ್ಯಾಧಾರಿತ ಶಿಕ್ಷಣ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಕೆಲಸ ಹಾಗೂ ಆರೋಗ್ಯ ಮತ್ತು ಪೌಷ್ಠಿಕಾಂಶದ ಕೊರತೆ ಕುರಿತು ಆಗಬೇಕಿರುವ ಪ್ರಾಮಾಣಿಕ ದಿಟ್ಟ ಕೆಲಸಗಳಿಗೆ ಎಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಮುಖ್ಯಸ್ಥೆ ಜ್ಯೋತಿ ಗೊಂಡಬಾಳ, ವಿಜಯಲಕ್ಷ್ಮೀ ಗುಳೇದ್, ಅಕ್ಕಮಹಾದೇವಿ ಕೋಳೂರು, ಸಲೀಮಾ ಜಾನ್, ಅಶ್ವಿನಿ ಅರಕೇರಿ, ಧರ್ಮಣ್ಣ ಹಟ್ಟಿ, ಸಣ್ಣರಾಜಪ್ಪ ವಡ್ರಹಟ್ಟಿ ಇತರರು ಇದ್ದರು.

Please follow and like us:
error