ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಮಗುವನ್ನು ಕುಟುಂಬದೊಂದಿಗೆ ಪುನರ್ಸೇರ್ಪಡೆಗೊಳಿಸುವ ಹೊಣೆ ನಿಮ್ಮ ಮೇಲಿದೆ- ನಿಲೋಫರ್ ಎಸ್. ರಾಂಪುರಿ

ಪ್ರಮಾಣಿತ ಗುಣಮಟ್ಟದ ಸೇವೆಗಳ ಕುರಿತು ಕಾರ್ಯಾಗಾರ
ಕೊಪ್ಪಳ,  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳರವರ ಸಂಯುಕ್ತಾಶ್ರಯದಲ್ಲಿ ಫೆ.04 ರಂದು ಕೃಷಿ ವಿಜ್ಞಾನ ಶಿಕ್ಷಣ ತರಬೇತಿ ಕೇಂದ್ರ, ಕೊಪ್ಪಳದಲ್ಲಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರಡಿಯಲ್ಲಿ ನೋಂದಾಯಿತ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳಿಗೆ “ಪ್ರಮಾಣಿತ ಗುಣಮಟ್ಟದ ಸೇವೆಗಳ ಕುರಿತು” ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ನಿಲೋಫರ್ ಎಸ್. ರಾಂಪುರಿರವರು, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಮುಖ್ಯ ಉದ್ದೇಶ ಕಾನೂನಿನೂಡನೆ ಸಂಘರ್ಷದಲ್ಲಿರುವ ಮಕ್ಕಳ ಹಾಗೂ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗೆ ಪುನರ್‌ವಸತಿಯನ್ನು ಕಲ್ಪಿಸುವುದರೊಂದಿಗೆ ಅವರ ಹಕ್ಕುಗಳನ್ನು ಎತ್ತಿಹಿಡಿದು, ಘನತೆ ಮತ್ತು ಗೌರವವನ್ನು ಒದಗಿಸುತ್ತಾ ಕುಟುಂಬದಲ್ಲಿ ಪನಃಸ್ಥಾಪಿಸುವುದಾಗಿದೆ. ಪಾಲನಾ ಸಂಸ್ಥೆಗಳಲ್ಲಿ ನಿವಾಸಿ ಮಕ್ಕಳಿಗೆ, ಕಾಯ್ದೆಯಡಿಯಲ್ಲಿ ನಿರೂಪಿತವಾದ ಕನಿಷ್ಠ ಗುಣಮಟ್ಟದ ಪ್ರಮಾಣಿತ ಸೇವೆಗಳನ್ನು ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಖಾತರಿಪಡಿಸುವದು ಕಡ್ಡಾಯವಾಗಿದ್ದು, ಅದನ್ನು ಸರಕಾರಗಳು ಖಾತರಿಪಡಿಸುವುದು ಅತ್ಯವಶ್ಯಕವೆಂದು ಸರ್ವೋಚ್ಛ ನ್ಯಾಯಾಲಯವು ರಿಟ್ ಸಂಖ್ಯೆ 102/2012ರ ವಿಚಾರಣೆಯ ಸಂದರ್ಭದಲ್ಲಿ ನಿರ್ದೇಶಿಸಿದೆ. ಅದರನ್ವಯ ಜಿಲ್ಲೆಯಲ್ಲಿರುವ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಹಾಗೂ ಅಧಿಕಾರಿಗಳಿಗೆ ಸಾಮರ್ಥ್ಯಾಭಿವೃದ್ಧಿ ಕಾರ್ಯಗಾರವನ್ನು ಆಯೋಜಿಸಿ ಸಾಮರ್ಥ್ಯವನ್ನು ವೃದ್ಧಿಸಲಾಗುತ್ತಿದೆ. ಆದ್ದರಿಂದ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳುವದರೊಂದಿಗೆ, ಪಾಲನಾ ಸಂಸ್ಥೆಗಳಲ್ಲಿ ದಾಖಲಾಗಿರುವ ಮಕ್ಕಳ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವದರೊAದಿಗೆ ಮಗುವನ್ನು ಕುಟುಂಬದೊAದಿಗೆ ಪುನರ್‌ಸೇರ್ಪಡೆಗೊಳಿಸುವ ಹೊಣೆ ನಿಮ್ಮ ಮೇಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅಕ್ಕಮಹಾದೇವಿ ಅವರು ಮಾತನಾಡಿ, ಕಲಂ 41 ರನ್ವಯ ಮಕ್ಕಳ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಪೋಷಣೆಗಾಗಿ ದಾಖಲಿಸಿಕೊಂಡಿರುವ ಸರಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳ ಕೇಂದ್ರಗಳು (ಸರಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಯಾಗಲಿ ಅಥವಾ ಅನುದಾನರಹಿತ ಸಂಸ್ಥೆಯಾಗಿರಲಿ) ಕಡ್ಡಾಯವಾಗಿ ನೋಂದಾಯಿಸಬೇಕಾಗಿರುತ್ತದೆ. ನೋಂದಣಿಯಾಗದೇ ಮಕ್ಕಳನ್ನು ಸಂಸ್ಥೆಯಲ್ಲಿ ದಾಖಲಿಸಿಕೊಂಡಲ್ಲಿ, ಕಾಯ್ದೆಯ ಕಲಂ 42ರಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗೆ ಕಡಿಮೆಯಿಲ್ಲದಂತೆ ದಂಡವನ್ನು ವಿಧಿಸಬಹುದಾಗಿದೆ. ಕೇವಲ ನೋಂದಣಿವುದಲ್ಲದೇ, ಕಾಯ್ದೆಯಡಿಯಲ್ಲಿ ನಿರೂಪಿತವಾದ ಗುಣಮಟ್ಟದ ಸೇವೆಯನ್ನು ನೀಡುವುದು ಕಡ್ಡಾಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೊಟಗಾರ್‌ರವರು ಮಕ್ಕಳಿಗೆ ಕೇವ¯ ವಸತಿ ಮತ್ತು ಭೋಜನ ನೀಡುವುದು ಮಾತ್ರ ಪಾಲನಾ ಕೇಂದ್ರದ ಜವಾಬ್ದಾರಿಯಲ್ಲ, ಬದಲಾಗಿ ಆ ಮಗು ಸಂಕಷ್ಟ ಪರಿಸ್ಥಿತಿಗೆ ಸಿಲುಕಲು ಕಾರಣವನ್ನು ಪತ್ತೆ ಹಚ್ಚುವುದು ಹಾಗೂ ಅದರಿಂದಾಗುವ ದುಷ್ಪರಿಣಾಮಗಳಿಂದ ಮಗುವನ್ನು ಹೊರತರುವುದಲ್ಲದೇ, ಕುಟುಂಬದೊAದಿಗೆ ಪುನರ್‌ಮಿಲನಗೊಳಿಸಿ ಪುನಃ ಮಗುವನ್ನು ಮುಖ್ಯವಾಹಿನಿಗೆ ತರುವುದಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸೋಣ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಿಸ್ಟರ್ ಡುಲ್ಸಿನ್ ಕ್ರಾಸ್ಟಾರವರು ಪ್ರಕರಣ ನಿರ್ವಹಣೆಯ ಬಗ್ಗೆ, ಯುನಿಸೆಫ್ ನ ಜಿಲ್ಲಾ ಸಂಯೋಜಕರಾದ ಹರೀಶ ಜೋಗಿರವರು ದಾಖಲಾತಿಗಳ ನಿರ್ವಹಣೆಯ ಬಗ್ಗೆ, ರಾಘವೇಂದ್ರ ಭಟ್‌ರವರು ಪಾಲನಾ ಸಂಸ್ಥೆಗಳಲ್ಲಿ ಇರಬೇಕಾದ ಭೌತಿಕ ಮತ್ತು ಸಿಬ್ಬಂದಿ ವ್ಯವಸ್ಥೆಗಳ ಬಗ್ಗೆ, ರವಿಕುಮಾರ ಪವಾರವರು ವಿವಿಧ ಸಮಿತಿಗಳ ರಚನೆ ಮತ್ತು ಕಾರ್ಯನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನೀಡಿದರು. ಈ ಸಂದರ್ಭ ಜಿಲ್ಲೆಯಲ್ಲಿನ ನೋಂದಾಯಿತ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು

Please follow and like us:
error