ಮಕ್ಕಳ ಆರೋಗ್ಯಕ್ಕೆ ಶುದ್ದ ಕುಡಿಯುವ ನೀರು ಅವಶ್ಯಕ- ಹನುಮಂತಪ್ಪ ಬೀಡನಾಳ


ಕೊಪ್ಪಳ : ನೀರು ಮತ್ತು ಗಾಳಿ ಆರೋಗ್ಯದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ. ಕಲುಷಿತ ನೀರು ಸೇವನೆಯಿಂದ ರೋಗ ರುಜಿನಗಳು ಹರಡುತ್ತವೆ. ಅದನ್ನು ತಡೆಗಟ್ಟಲು ಮಕ್ಕಳಿಗೆ ಶುದ್ದ ಕುಡಿಯುವ ನೀರು ಅವಶ್ಯಕವಾಗಿದೆ. ಆರೋಗ್ಯವಂತ ಮಗುವಿನಲ್ಲಿ ಕಲಿಯುವ ಹುಮ್ಮಸ್ಸು ಹೆಚ್ಚಾಗಿರುತ್ತೆ ಎಂದು ಉದ್ಯಮಿ ಹನುಮಂತಪ್ಪ ಬೀಡನಾಳ ಹೇಳಿದರು. ಅವರಿಂದ ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಶುದ್ದ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಾವಿರಾರು ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ಇಂತಹ ಶುದ್ದ ಕುಡಿಯುವ ನೀರಿನ ಘಟಕಗಳು ಅವಶ್ಯಕವಾಗಿವೆ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಭರಮಪ್ಪ ನಗರ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳ ಆರೋಗ್ಯದ ಕಡೆಗೂ ಶಿಕ್ಷಣ ಸಂಸ್ಥೇಗಳು ಗಮನ ನೀಡಬೇಕು. ಇದರಿಂದ ಉತ್ತಮ ಫಲಿತಾಂಶ ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ. ಸದಸ್ಯ ರಾಮಣ್ಣ ಚೌಡ್ಕಿ, ಚಾಂದ್ ಪಾಷಾ ಕಿಲ್ಲೇದಾರ್, ದ್ಯಾಮಣ್ಣ ಮ್ಯಾಗೇರಿ, ಮಾರುತೆಪ್ಪ, ಪ್ರಕಾಶ ಹೊಳೆಯಪ್ಪನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ದಾನಿಗಳಾದ ಹನುಮಂತಪ್ಪ ಬೀಡನಾಳ ದಂಪತಿಗಳಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಶಿವಣ್ಣ ಶಾಪೂರ್, ಭರಮಪ್ಪ ಹಾಲವರ್ತಿ, ವೆಂಕಟೇರ್ಶ ಬಂಡಿ ಹರ್ಲಾಪೂರ, ಹೊನ್ನಪ್ಪಗೌಡ ಪಾಟೀಲ್, ಅಡಿವೆಪ್ಪ ರಾಟಿ. ರಾಜೇಶ್, ಸಂಸ್ಥೇಯ ಕಾರ್ಯದರ್ಶಿ ಆರ್.ಎಚ್.ಅತ್ತನೂರು, ಶ್ರೀಮತಿ ರೇಣುಕಾ ಅತ್ತನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಮಲ್ಲಪ್ಪ ಕವಲೂರು ವಹಿಸಿದ್ದರು. ಸ್ವಾಗತವನ್ನು ಶ್ರೀಮತಿ ಗೀತಾ, ನಿರೂಪಣೆಯನ್ನು ಜಯಶ್ರೀ ಕುಲಕರ್ಣಿ ಹಾಗೂ ವಂದನಾರ್ಪಣೆಯನ್ನು ಶಿಲ್ಪಶ್ರಿ ನೆರವೇರಿಸಿದರು.

Please follow and like us:
error

Related posts