ಮಕ್ಕಳು ಗಣರಾಜ್ಯ ದಿನದ ಮಹತ್ವ, ಐತಿಹಾಸಿಕ ಹಿನ್ನಲೆ ತಿಳಿಯಬೇಕು-ದಾನಪ್ಪ ಕವಲೂರ

ಭಾಗ್ಯನಗರ   : ಕರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸುವ ಬದಲಾಗಿ ಸರಳವಾಗಿ ಆಚರಿಸಬೇಕಾದ ಅನಿವಾರ್ಯವಿದ್ದು ಮಕ್ಕಳು ಗಣರಾಜ್ಯ ದಿನದ ಮಹತ್ವವನ್ನ ಐತಿಹಾಸಿಕ ಹಿನ್ನಲೆಯನ್ನು ತಿಳಿಯಬೇಕು. ಪಠ್ಯಪುಸ್ತಗಳಲ್ಲಿನ ಇತಿಹಾಸ, ಮೌಲ್ಯಗಳು, ಮಹಾತ್ಮರ ಜೀವನಗಾಥೆಗಳು ಮನನವಾಗಬೇಕು ಆ ಮೂಲಕ ವಿದ್ಯಾರ್ಥಿಗಳು ಸ್ವಂತ ಆಲೋಚನೆ, ಸ್ವಪರಿಶ್ರಮದ ಮೂಲಕ ಶೈಕ್ಷಣಿಕ ಪ್ರಗತಿಯನ್ನ ಸಾಧಿsಸುವುದರ ಜೊತೆಗೆ ಪ್ರಜ್ಞಾವಂತ ನಾಗರಿಕರಾಗಬೇಕು ಎಂದು ಜ್ಞಾನ ಬಂಧು ಪ್ರೌಢ ಶಾಲೆಯ ಅಧ್ಯಕ್ಷ  ದಾನಪ್ಪ ಕವಲೂರ ಹೇಳಿದರು

ಭಾಗ್ಯಗನರ ಪಟ್ಟಣದ ಜ್ಞಾನ ಬಂಧು ಪ್ರೌಢ ಶಾಲೆಯಲ್ಲಿ ೭೨ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇದೆ ಸಂದರ್ಭದಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕರೋನಾ ಕಾರಣದಿಂದ ಉಂಟಾದ ಶೈಕ್ಷಣಿಕ ಸಮಸ್ಯೆಗಳನ್ನು ಮೆಟ್ಟಿನಿಂತು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಕೆ.ರೋಜ್ ಮೇರಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಜ್ಯೋತಿ ಎಸ್.ಎಸ್. ಹಾಗೂ ಶಿಕ್ಷಕರಾದ ನಾಗರಾಜ ಹಾಗೂ ಶಾಲಾ ವಿದ್ಯಾರ್ಥಿಗಳು ಗಣರಾಜ್ಯದ ದಿನದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ & ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿ, ಮನೋಹರ ವಂದಿಸಿದರು.

 

Please follow and like us:
error