ಮಂದಿರ ನಿರ್ಮಾಣದ ನಿಧಿ ಸಮರ್ಪಣ ಅಭಿಯಾನದ ಉದ್ಘಾಟನೆ

Koppal : ಶ್ರೀ ರಾಮಜನ್ಮಭೂಮಿ ತೀರ್ಥ ಟ್ರಸ್ಟ್‌ವತಿಯಿಂದ ಕೊಪ್ಪಳ ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಶುಕರವಾರ ಅಯೋಧ್ಯ ಶ್ರೀ ರಾಮಚಂದ್ರ ಭೂಮಿ ಮಂದಿರ ನಿರ್ಮಾಣದ ನಿಧಿ ಸಮರ್ಪಣ ಅಭಿಯಾಣವನ್ನು ಉದ್ಘಾಟಿಸಿ ಮಾತನಾಡಿದ ಹಲವಾರು ವರ್ಷಗಳ ಹೋರಾಟದ ಫಲವಾಗಿ ಹಿಂದುಗಳ ಕನಸು ನನಸಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರ ಭಕ್ತಿಯ ರಾಷ್ಟ್ರಮಂದಿರವಾಗಿ ನಿರ್ಮಾಣವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ತಾವು ಮತ ನೀಡಿ ದೇಶದ ಪ್ರಧಾನಿಯನ್ನಾಗಿ ಮಾಡಿದ ನರೇಂದ್ರ ಮೋದಿಯವರು ನಿಮ್ಮ ಶ್ರಮಕ್ಕೆ ಮಂದಿರ ಫಲವನ್ನಾಗಿ ನೀಡಿದ್ದಾರೆ ಎಂದರು.

ಬಿ.ಜೆ.ಪಿ. ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ.ಚಂದ್ರಶೇಖರ ಮಾತನಾಡಿ, ಮಂದಿರದ ಕನಸು ಸುಮಾರು ವರ್ಷಗಳ ಕನಸಾಗಿತ್ತು ಈಗ ಅದು ನನಸಾಗುತ್ತಾ ಸಾಗಿದೆ. ಎಲ್ಲರೂ ತನುಮನದಿಂದ ಸಹಾಯ ಮಾಡಿ ಎಂದು ಮಂದಿರಕ್ಕೆ ಒಂದು ಲಕ್ಷ ನಿಧಿಯನ್ನು ನೀಡಿದರು.

ಮುಖ್ಯ ವಕ್ತಾರ ವಸಂತ ಪೂಜಾರ ಮಾತನಾಡಿ ದೇಶದಲ್ಲಿ ಇಷ್ಟು ವರ್ಷ ಅನೇಕ ರಾಮನ ಹೆಸರಿಟ್ಟುಕೊಂಡು ಆಡಳಿತ ಮಾಡಿದರೇ ಹೊರತು ರಾಮನ ಕೆಲಸಗಳನ್ನು ಮಾಡಲಿಲ್ಲ, ಮಂದಿರದ ನಿರ್ಮಾಣಕ್ಕಾಗಿ ಅನೇಕ ಹೋರಾಟಗಳನ್ನು ನಡೆದವು. ಅನೇಕರು ಪ್ರಾಣಗಳನ್ನು ಕಳೆದುಕೊಂಡಿದಾರೆ. ಆದರೆ ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಅದಕ್ಕಾಗಿಯೇ ಸಾರ್ವಜನಿಕರು ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಚಾಲಕರಾದ ಬಸವರಾಜ ಡಂಬಳ, ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ಪ್ರೇಮಾಚಾರ ಮುಳಗುಂದ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ಶಿವಕುಮಾರ ಹಕ್ಕಪಕ್ಕಿ, ಸುನೀಲ್ ಹೆಸರೂರು ಇನ್ನೂ ಅನೇಕರು ಉಪಸ್ಥಿತರಿದ್ದರು.

ನಿಧಿ ಸಮರ್ಪಣ ಜಿಲ್ಲಾ ಸಂಚಾಲಕರಾದ ಪ್ರಾಣೇಶ ಜೋಶಿಯವರು ಕಾರ್ಯಕ್ರಮವನ್ನು ನಿಯೋಜಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಶಿವಕುಮಾರ ಹಕ್ಕಾಪಕ್ಕಿಯವರು ವಂದನಾರ್ಪಣೆಯನ್ನು ನೆರವೇರಿಸಿದರು.

Please follow and like us:
error