ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ-ಡಾ. ಚನ್ನಬಸವ

ಕೊಪ್ಪಳ ಜ ೦೫: ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ. ಈ ಕಾರಣದಿಂದ ಅನೇಕ ನವಜಾತ ಶಿಶುಗಳು ಮತ್ತು ತಾಯಂದಿರು ಸಾವಿನಂಚಿನಲ್ಲಿ ಇದ್ದಾರೆ. ಅಂಕಿ ಅಂಶಗಳ ಪ್ರಕಾರ ವಿಶ್ವದ ಶೇಕಡ ೩೩% ರಷ್ಟು ೫ ವರ್ಷದ ವಯಸ್ಸಿನ ಒಳಗಿನ ಮಕ್ಕಳು ಅಪೌಷ್ಟಿಕತೆ ಕಾರಣದಿಂದ ಅನೇಕ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚನ್ನಬಸವ ಹೇಳಿದರು.

 

ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಏನ್.ಎಸ್.ಎಸ್ ಘಟಕಗಳು, ಯೂತ್ ರೆಡ್ ಕ್ರಾಸ್, ದೈಹಿಕ ಶಿಕ್ಷಣವಿಭಾಗ ಮತ್ತು ಸಸ್ಯಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡ ‘ಅಪೌಷ್ಟಿಕತೆ ಮತ್ತು ಬಡತನ’ ವಿಷಯದ ಕುರಿತು ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದ ಅವರು ನಾವು ಸೇವಿಸುವ ಅಹಾರ ಸಮತೋಲಿತ ಹಾಗೂ ಸಂತುಲಿತವಾಗಿರಬೇಕು. ಆದ್ದರಿಂದ ಆಹಾರ ಪೌಷ್ಟಿಕಾಂಶಗಳ ಅರಿವು ನಮ್ಮಲ್ಲರಿಗಿರಬೆಕು. ಆಹಾರ ಸೇವನೇಯ ಶಿಕ್ಷಣದ ಅಗತ್ಯ ತುಂಬಾನೆ ಇದೆ. ಇಂತಹ ಉಪನ್ಯಾಸಗಳ ಮೂಲಕ ಮತ್ತು ಒದುವುದರ ಮೂಲಕ ತಾವು ಆಹಾರ ಸೇವನೆಯ ವಿಧಾನ ತಿಳಿದುಕೊಳ್ಳಬೇಕು ಮತ್ತು ತಮ್ಮ ಕುಟುಂಬದವರೆಲ್ಲರಿಗೂ ತಿಳಿಸಬೇಕು. ಇದರಿಂದ ಅಪೌಷ್ಟಿಕತೆಯಂದಾಗುವ ಬಡತನವನ್ನು ತಡೆಯಬಹುದು. ಪೌಷ್ಟಿಕತೆಯನು ಸೃಷ್ಟಿಸುವ ಮಹತ್ವದ ಸೇವಾ ಕಾರ್ಯದಲ್ಲಿ ತಾವೆಲ್ಲರು ಭಾಗಿಯಾಗಿಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಜೆ. ಎಸ್. ಪಾಟೀಲ್ ಅವರು ಮಾತನಾಡುತ್ತ ನಾವು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೆಕು ಮತ್ತು ಸೇವಿಸುವ ಆಹಾರ ಸಂತುಲಿತ ಸಮತೋಲನ ಆಹಾರವಾಗಿರಬೇಕು. ಅಂದಾಗ ಮಾತ್ರ ಅಪೌಷ್ಟಿಕತೆಯನ್ನು ತಡೆಗಟ್ಟಬಹುದು. ಆದ್ದರಿಂದ ಆಹಾರ ಸೇವಿಸುವ ಮತ್ತು ಸಮತೋಲಿತ ಆಹಾರಗಳ ಶಿಕ್ಷಣ ಅರಿವು ನಮ್ಮಲ್ಲರಿಗೂ ಅಗತ್ಯವಿದೆ ತಾವೆಲ್ಲರು ಅದನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ತಾವೆಲ್ಲರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯ ಸಧೃಡಗೂಳಿಸಿಕೊಳ್ಳಬೇಕು ಮತ್ತು ಅಪೌಷ್ಟಿಕತೆ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಎನ್.ಎಸ್. ಎಸ್ ಬಿ ಘಟಕದ ಅಧಿಕಾರಿಯಾದ ಡಾ. ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಡಿದರು. ವಾಯ್. ಆರ್. ಎಸ್ ಸಂಯೋಜಕರಾದ ಪ್ರೋ. ವೆಂಕಟೇಶ ನಾಯ್ಕ, ಸ್ವಾಗತಿಸಿದರು. ಎಸ್ ಎ ಘಟಕದ ಅಧಿಕಾರಿಯಾದ ಡಾ. ರಾಜು ಹೊಸಮನಿ ವಂದಿಸಿದರು. ಶರಣು ನಿರೂಪಿಸಿದರು. ದೈಹಿಕ ನಿರ್ದೇಶಕರದ ಪ್ರೋ. ವಿನೋದ ಮುದಿಬಸನಗೌಡರ್ ಸಹ ಪ್ರಾಧ್ಯಾಪಕ ಡಾ. ಬಸವರಾಜ ಪೂಜಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
error