ಭಾರತಕ್ಕೆ ಸದೃಢವಾದ ಮನಸ್ಸು ಹಾಗೂ ಸದೃಢವಾದ ಆರೋಗ್ಯ ಭರಿತ ನಾಗರಿಕರ ಅಗತ್ಯವಿದೆ – ಪ್ರೋ.ಬೆಣ್ಣಿ ಬಸವರಾಜ

koppal ಒಬ್ಬ ವ್ಯಕ್ತಿಯ ಬೆಳವಣಿಗೆಯ ಮೂಲವೆಂದರೆ ಜ್ಞಾನ. ಜ್ಞಾನದ ಬೆಳಕು ಇಂದಿನ ಮಕ್ಕಳಿಗೆ ಅವಶ್ಯವಾಗಿದೆ. ಅದನ್ನು ಬಳಸಿ ಉತ್ತಮ ಆರೊಗ್ಯ ಕಾಪಾಡಿಕೊಂಡು ಸುಂದರವಾದ ಬದುಕು ನಿರ್ಮಿಸಿಕೊಳ್ಳುವುದರ ಜೊತೆಗೆ ಸಧೃಡವಾದ ದೇಶ ಕಟ್ಟಬೇಕಾಗಿದೆ. ಈಗ ಭಾರತಕ್ಕೆ ಸದೃಢವಾದ ಮನಸ್ಸು ಹಾಗೂ ಸದೃಢವಾದ ಆರೋಗ್ಯ ಭರಿತ ನಾಗರಿಕರ ಅಗತ್ಯವಿದೆ ಎಂದು ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಹಾಗೂ ಸಮಾಜ ವಿಜ್ಞಾನ ನೀಕಾಯದ ಡೀನರಾದ ಪ್ರೋ. ಬೆಣ್ಣಿ ಬಸವರಾಜ ಅಭಿಪ್ರಾಯಪಟ್ಟರು. ಸಂಸ್ಥಾನ ಶ್ರೀ ಗವಿಮಠದ ಕೆರೆಯ ಆವರಣದಲ್ಲಿ ಆಯೋಜಿಸಿದ ಶ್ರೀ.ಮ.ನಿ.ಪ್ರ.ಸ್ವ. ಲಿಂ.ಜ. ಶಿವಶಾಂತವೀರ ಮಹಾಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮಾವಾಸೆ ದಿನದಂದು ಜರುಗುವ ಬೆಳಕಿನೆಡೆಗೆ ೧೨೨ನೇ ಮಾಸಿಕ ಉಪನ್ಯಾಸ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ದೇಶವೆಂದರೆ ನಾನು, ನಾವು, ನಮ್ಮ ದೇಶದ ಜನರು. ಜನರ ಮನಸ್ಥಿತಿಯಿಂದ ದೇಶದ ಸ್ಥಿತಿ ನಿರ್ಧಾರವಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಭಾರತ ದೇಶಕ್ಕೆ ಒಳ್ಳೆಯ ಗೌರವವಿದೆ. ಈಡಿ ಜಗತ್ತು ಭಾರತದ ಕಡೆ ಮುಖಮಾಡಿ ನೋಡುತ್ತಿದೆ. ಭಾರತದ ಮನಸ್ಥಿತಿ ಬದಲಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಗತಿಯಾಗಬೇಕಾದರೆ ದೇಶದಲ್ಲಿ ಬೌದ್ಧಿಕ, ದೈಹಿಕ, ಆಧ್ಯಾತ್ಮಿಕ ಮತ್ತು ಮೌಲಿಕವಾದ ಗಟ್ಟಿಯಾಗಿರುವ ಉತ್ತಮ ಮನಸ್ಸಿನ ನಾಗರಿಕರನ್ನು ಸೃಷ್ಠಿಸುವದು ಅಗತ್ಯವಾಗಿದೆ. ನಮ್ಮ ಮನೆಯ ಮಕ್ಕಳು ಸದೃಡವಾಗಿದ್ದಾಗ ಮಾತ್ರ ದೇಶ ತಾನೆ ಸದೃಡವಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಾಗಬೇಕಾದರೆ ಜ್ಞಾನದ ಜೊತೆಗೆ ಉತ್ತಮ ಕೌಶಲ್ಯ ಇರಬೇಕು. ದೇಶದ ಸಮರ್ಥತೆ, ಅಭಿವೃದ್ದಿ ಇರುವದು ದೇಶದ ನಾಗರಿಕರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾಗ ಮಾತ್ರ. ದೇಶದ ಸಂಪನ್ಮೂಲತೆಗೆ ನಾಗರಿಕರ ದೈಹಿಕ ಮತ್ತು ಮನಸಿಕ ಆರೋಗ್ಯ ಅತ್ಯಂತ ಮಹತ್ವದ ಪಾತ್ರಹಿಸುತ್ತದೆ ಎನ್ನುವ ಅರಿವು ಎಲ್ಲರಲ್ಲೂ ಸದಾ ಜಾಗೃತವಾಗಿರಬೇಕು. ಹೀಗಾಗಿ ಆರೋಗ್ಯ, ಜ್ಞಾನ, ಕೌಶಲ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು. ಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಮಿಗಳವರು ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದರು. ಆರಂಭದಲ್ಲಿ ಹುಬ್ಬಳ್ಳಿಯ ಖ್ಯಾತ ಸಂಗೀತ ಕಲಾವಿದರಾದ ಕು.ಪ್ರಭುದೇವ.ಸಿ ಹುಗ್ಗಿಶೆಟ್ಟರ ಕೃಷ್ಣ ಬಡಿಗೇರ ಅವರು ಭಕ್ತಿ ಸಂಗೀತ ಕಾರ್ಯಕ್ರಮವನ್ನು ನಡೆಯಿಸಿಕೊಟ್ಟರು ವಿದ್ವಾನರಾದ ರಾಮಕುಮಾರ ಎಸ್. ಮಹಾಂತ (ತಬಲಾ) ವಿಜಯಕುಮಾರ ಅರ್ಕಶಾಲಿ (ಹಾರ್ಮೋನಿಯಮ್), ಮಹೇಶ ಜೋಶಿ (ತಾಳ) ಸಂಗೀತ ಕಛೇರಿಗೆ ಸಾಥ್ ನೀಡಿದರು. ಉಪನ್ಯಾಸಕಿ ಕಮಲಾ ಅಳವಂಡಿ ಭಕ್ತಿ ಸೇವೆ ಸಲ್ಲಿಸಿದರು. ಶ್ರೀಮಠದ ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error