ಭಾಗ್ಯನಗರ : ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಡಿ.೧೧ : ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ್ ವತಿಯಿಂದ ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಸ್ವಯಂ ಮನೆ ನಿರ್ಮಾಣಕ್ಕಾಗಿ ಸಹಾಯಧನವನ್ನು ಒದಗಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಂತ ನಿವೇಶನ/ ಕಚ್ಚಾ ಮನೆ ಹೊಂದಿದವರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ರೂ. ೧.೫ ಲಕ್ಷ ಸಹಾಯಧನ ದೂರೆಯುತ್ತದೆ. ರೂ ೩.೦೦ ಲಕ್ಷದೊಳಗೆ ವಾರ್ಷಿಕ ಆದಾಯ ಹೊಂದಿರುವ ಇರುವ ಭಾಗ್ಯನಗರ ಪ.ಪಂ. ವ್ಯಾಪ್ತಿಯಲ್ಲಿರುವ ನಿವಾಸಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಭಾಗ್ಯನಗರ ಪ.ಪಂ. ವ್ಯಾಪ್ತಿಯಲ್ಲಿರುವ ನಿವಾಸಿಗಳಾಗಿರಬೇಕು. ಈ ಯೋಜನೆಯ ಫಲಾನುಭವಿಗಳು ಆಗಲು ಇಚ್ಚಿಸುವವರು ಪಕ್ಕಾ ಮನೆ ಹೊಂದಿರಬಾರದು. ಫಲಾನುಭವಿಯು ಸ್ವಂತ ಮನೆ/ ಕಚ್ಚಾ ಮನೆ ಹೊಂದಿರಬೇಕು. ಫಲಾನುಭವಿಯು ಸ್ವಂತ ಜಾಗೆಯಲ್ಲಿ ಮನೆ ಕಟ್ಟಿಕೋಳ್ಳಬಹುದು/ ಮನೆ ವಿಸ್ತರಣೆ ಮಾಡಿಕೋಳ್ಳಬಹುದು. ಮನೆ ವಿಸ್ತರಣೆಯ ಬಯಸಿದ್ದಲ್ಲಿ ಕನಿಷ್ಟ ೦೯ ಚ.ಮೀ. ನಿಂದ ೨೧ ಸೆಂ.ಮೀ. ವಿಸ್ತರಣೆ ಮಾಡಿಕೊಳ್ಳಬಹುದು. ಒಂದು ವೇಳೆ ಹಾಲಿ ಮನೆ ಇದ್ದಲ್ಲಿ ೩೦ ಚ.ಮೀ. ವರೆಗೆ ಇದ್ದಲ್ಲಿ, ವಿಸ್ತರಣೆಗೆ ಯೋಜನೆಯಲ್ಲಿ ಆವಕಾಶವಿರುವುದಿಲ್ಲಾ. ವಾರ್ಷಿಕ ಅದಾಯ ರೂ ೩.೦೦ ಲಕ್ಷ ಒಳಗೆ ಇರಬೇಕು. ಖಾಲಿಜಾಗೆ ಅಥವಾ ಕಚ್ಚಾ ಮನೆಯು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರಬೇಕು.
ಅರ್ಜಿ ಸಲ್ಲಿಸಲು ಡಿ. ೨೦ ಕೊನೆಯ ದಿನವಾಗಿದ್ದು, ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ.ಪಂ. ಕಾರ್ಯಾಲಯದ ಆಶ್ರಯ ವಿಭಾಗದವನ್ನು ಭೇಟಿಯಾಗಿ ಮಾಹಿತಿಯನ್ನು ಪಡೆಯಬಹುದು ಎಂದು ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error