ಭಾಗ್ಯನಗರ : ಇನ್ ಸ್ಯಾನಿಟರಿ ಶೌಚಾಲಯಗಳನ್ನು ಕಟ್ಟುವಂತಿಲ್ಲ

ಕೊಪ್ಪಳ,  : ಮಾನ್ಯುಯಲ್ ಸ್ಕಾö್ಯವೆಂರ‍್ಸ್ ನೇಮಕಾತಿ ನಿಷೇದ ಮತ್ತು ಪುನರ್‌ವಸತಿ ಕಾಯ್ದೆ 2013ರ ರೀತ್ಯಾ ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಇನ್ ಸ್ಯಾನಿಟರಿ ಶೌಚಾಲಯಗಳನ್ನು ಕಟ್ಟುವಂತಿಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮಾನ್ಯುಯಲ್ ಸ್ಕಾö್ಯವೆಂರ‍್ಸ್ ನೇಮಕಾತಿ ನಿಷೇದ ಮತ್ತು ಪುನರ್‌ವಸತಿ ಕಾಯ್ದೆ 2013ರ ರೀತ್ಯಾ ಇನ್ ಸ್ಯಾನಿಟರಿ ಶೌಚಾಲಯಗಳನ್ನು ಕಟ್ಟುವಂತಿಲ್ಲ, ನಿರ್ವಹಿಸುವಂತಿಲ್ಲ ಹಾಗೂ ಬಳಸುವಂತಿಲ್ಲ.  ತಲೆಮೇಲೆ ಮಲ ಹೊರುವುದಾಗಲಿ, ಮಲಹೊರುವ ಪದ್ಧತಿಗೆ ಪ್ರಚೋದನೆ ನೀಡುವುದನ್ನು ನಿಷೇಧಿಸಲಾಗಿರುತ್ತದೆ.  ಆದ್ದರಿಂದ ಈ ಕಾಯ್ದೆಯ ಸೆಕ್ಷನ್ 33 ರೀತ್ಯಾ ಕೆಲಸಗಾರರು ಸ್ವಚ್ಛ ಮಾಡುವುದನ್ನು ನಿರ್ಮೂಲನೆ ಮಾಡುವ ದೃಷ್ಠಿಯಿಂದ ಒಳಚರಂಡಿ, ಸೆಪ್ಟಿಕ್ ಟ್ಯಾಂಕ್‌ಗಳು ಹಾಗೂ ಇತರೆ ಜಾಗಗಳನ್ನು ಬರಿಗೈಯಿಂದ ಸ್ವಚ್ಛಗೊಳಿಸುವ ಕೆಲಸಕ್ಕೆ ಯಾವುದೇ ಕಾರ್ಮಿಕರನ್ನು ಯಾರು ನೇಮಿಸಬಾರದು.  ಒಳಚರಂಡಿ ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಿಸಲು ಇಚ್ಛಿಸುವ ಸಾರ್ವಜನಿಕರು ಖಾಸಗಿ ಸೆಕ್ಕಿಂಗ್ ಮಷಿನ್ ಅಥವಾ ನಗರ ಸಭೆಯಲ್ಲಿ ಲಭ್ಯವಿರುವ ಸೆಕ್ಕಿಂಗ್ ಮಷಿನ್ ಸೌಲಭ್ಯವನ್ನು ಪಡೆದುಕೊಂಡು ಯಾಂತ್ರಿಕೃತವಾಗಿ ಸ್ವಚ್ಛ ಮಾಡಿಸಲು ಈ ಮೂಲಕ ತಿಳಿಸಿದೆ.  ಒಂದು ವೇಳೆ ಈ ಸೂಚನೆಯನ್ನು ಪಾಲಿಸದಿದ್ದಲ್ಲಿ ಮುಂದಿನ ಕಾನೂನು ರೀತಿ ಸೂಕ್ತ ಕ್ರಮಕ್ಕಾಗಿ ಗಂಭೀರವಾಗಿ ಪರಿಗಣಿಸಲಾಗುವುದು. ಈ ನಿಟ್ಟಿನಲ್ಲಿ ಯಾವುದೇ ಅನಾಹುತಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸುವಂತೆ ಪ್ರಕಟಣೆ ತಿಳಿಸಿದೆ.

Please follow and like us:
error