ಭರದಿಂದ ಸಾಗಿದ ಹಿರೇಹಳ್ಳ ಪುನಶ್ಚೇತನ ಕಾರ್ಯ

ಕೊಪ್ಪಳ: ಮಾರ್ಚ ೧ ರಂದು ಆರಭವಾದ ಹಿರೇಹಳ್ಳದ ಪುನಶ್ಚೇತನ ಕಾರ್ಯವು ಈಗಾಗಲೇ ಭರದಿಂದ ಸಾಗಿದೆ. ಅಂದರೇ ಕಿನ್ನಾಳ್ ಡ್ಯಾಂನಿಂದ ತುಂಗಭದ್ರಾ ನದಿಯವರೆಗಿನ ೨೧ ಕಿಲೋಮೀಟರ್ ವಿಶಾಲವಾದ ಹಿರೇಹಳ್ಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಹಿರೇಹಳ್ಳ ಅಭಿವೃದ್ಧಿ ಹಾಗೂ ಜಲ ಸಂರಕ್ಷಣಾ ಟ್ರಸ್ಟ ವತಿಯಿಂದ ಹಮ್ಮಿಕೊಂಡ ಕಾರ್ಯವು ಜರುಗುತ್ತಲಿದೆ.
ದದೇಗಲ್ ಬ್ರಿಡ್ಜ ಬಳಿ ಹಿರೇಹಳ್ಳದ ಎಡ ಮತ್ತು ಬಲ ಭಾಗದಲ್ಲಿ ಸಂಪೂರ್ಣ ಸ್ವಚ್ಚಗೊಳಿಸಿದ್ದು ಸುಮಾರು ಒಂದು ಕಿಲೋಮಿಟರ ಪ್ರದೇಶ ಆಕರ್ಷಕವಾಗಿ ಕಾಣಿಸುತ್ತಿದೆ ಇಂದು ಕೋಳೂರು ಬಳಿ ೪ ಇಟ್ಯಾಚಿ , ಭಾಗ್ಯನಗರ ಬಳಿ ೪ ಇಟ್ಯಾಚಿ ಮತ್ತು ೧ ಡೋಜರ್ ಅಲ್ಲದೇ ಹಿರೇಹಳ್ಳ ಬಳಿ ೩ ಇಟ್ಯಾಚಿ ಯಂತ್ರಗಳು , ೧ ಜೆಸಿಬಿ, ೨ ಟ್ರಾಕ್ಟರ್‍ಗಳು ಹಿರೇಹಳ್ಳವನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದವು. ಈ ಕಾರ್ಯದಲ್ಲಿ ಪೂಜ್ಯರೊಂದಿಗೆ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿ ಸೇವೆ ಸಲ್ಲಿಸಿದರು..