ಬ್ಯಾನರ್ ಹರಿಬಹುದು ಮನಸ್ಸು ಹರಿಯುವದಕ್ಕೆ ಸಾಧ್ಯವಿಲ್ಲ- ಶಿವರಾಜ್ ತಂಗಡಗಿ

ಕನಕಗಿರಿ :  ಯಾವುದೇ ಕಾರಣಕ್ಕೂ ಯಾರೇ ಕಾರ್ಯಕ್ರಮ ಮಾಡಿದರೂ ಸಹ ಅಡ್ಡಿ ಪಡಿಸಬಾರದು ಅದು ನಮ್ಮ ಸಂಸ್ಕೃತಿ ಅಲ್ಲ.  ಬಿಜೆಪಿಯವರು ಆ ರೀತಿ ಮಾಡ್ತಾರಂದ್ರೆ ಮಾಡಲಿ ನಮ್ಮವರ್ಯಾರು ಆ ರೀತಿ ಮಾಡಬಾರದು. ಯಾವುದೇ ವಿಷಯದ ಬಗ್ಗೆ ಪ್ರಶ್ನೆಗಳಿದ್ದರೆ ಪರಸ್ಪರ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು. ಅನುಮಾನವಿದ್ದರೆ ನೇರವಾಗಿ ನನಗೆ ಭೇಟಿಯಾಗಿ ಕೇಳಿ ಯಾವುದೇ ಕಾರಣಕ್ಕೂ ಗ್ರಾಮಗಳಲ್ಲಿ ಸಂಘರ್ಷದ ವಾತಾವರಣ ಇರಬಾರದು. ತಪ್ಪುಗಳು ಸಹಜ  ನಾವೇನಾದರೂ ತಪ್ಪು ಮಾಡಿದರೆ ಶಿಕ್ಷೆ ಮಾಡ್ತಾರೆ ಈ ಕ್ಷೇತ್ರದ ಜನತೆ. ಅದರಂತೆ ಶಿಕ್ಷ ಕೊಟ್ಟಿದ್ದಿರಿ ಈಗ ಅದರ ಎರಡು ಪಟ್ಟು ಶಿಕ್ಷೆ ಅನುಭವಿಸುತ್ತಿದ್ದೀರಿ. ಗ್ರಾಮಗಳಲ್ಲಿ ಜಗಳ ಮಾಡಬಾರದು ಊರ ಸಾಮರಸ್ಯ ಹಾಳಾಗುವುದು ಬೇಡು  ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಅವರಿಂದ ಈಳಿಗನೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದು  ನೂರಾರು ಬಿ.ಜೆ.ಪಿ. ಕಾರ್ಯಕರ್ತರು ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.  ಕಾರ್ಯಕ್ರಮದ ಬ್ಯಾನರ್ ಹರಿದಿದ್ದಾರೆ ಎನ್ನುವ ಕಾರ್ಯಕರ್ತರ ಮಾತಿಗೆ ಪ್ರತಿಕ್ರಿಯಿಸಿದ ತಂಗಡಗಿ ಅವರು ಬ್ಯಾನರ್ ಹರಿಯಬಹುದು ಆದರೆ ಮನಸ್ಸು ಹರಿಯುವುದಕ್ಕೆ ಸಾಧ್ಯವಿಲ್ಲ.  ಈಳಿಗನೂರು ಗ್ರಾಮದಲ್ಲಿ ಹತ್ತಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಅದರ ಬಗ್ಗೆ ಮಾತನಾಡಿ ವಿನಾಕಾರಣ ಬೇರೆ ವಿಷಯದ ಬಗ್ಗೆ ಮಾತನಾಡುವುದು ಬೇಡ. ಸಿದ್ದರಾಮಯ್ಯನವರು ಸರಕಾರ ಬಂದರೆ ಒಬ್ಬೊಬ್ಬರಿಗೆ 10 ಕೆಜಿ ಅಕ್ಕಿ ಕೊಡುವ ಭರವಸೆ ನೀಡಿದ್ದಾರೆ.  ಹಿಂದುಳಿದ ದಲಿತರಿಗಾಗಿ ಸಾವಿರಾರು ಕೋಟಿ ಕೊಟ್ಟಂತವರು ಅವರು.  ಆದರೆ ಈಗಿನ ಸರಕಾರ ಎಷ್ಟು ಕೋಟಿ ಕೊಟ್ಟಿದೆ ಎಂದು ಪ್ರಶ್ನೆ ಮಾಡಿದರು.  ಸಾವಿರಾರು ಜನ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಈಳಿಗನೂರಿನ ಗ್ರಾಮದ ಯುವಕರು, ಕಾರ್ಯಕರ್ತರು ಪಕ್ಷ ಸೇರ್ಪಡೆಗೊಳ್ಳುತ್ತೇವೆ ಎಂದಿದ್ದರು ಆದರೆ ಸಮಯವಕಾಶವಾಗಿರಲಿಲ್ಲ. ಈವತ್ತು ಸೇರುವಂತಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

Please follow and like us:
error