ಬೆಲೆ ಏರಿಕೆಯ ವಿರುದ್ದ ಉಗ್ರ ಹೋರಾಟ – ಡಬ್ಲುಪಿಐ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್

 

ಕೊಪ್ಪಳ ; ಸತತವಾಗಿ ಏರುತ್ತಿರುವ ಬೆಲೆ ಏರಿಕೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಕನಿಷ್ಠ ಜೀವನಾವಶ್ಯಕ ವಸ್ತುಗಳ ಬೆಲೆ ಸಹ ಏರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಶೀಘ್ರವೇ ಸೂಕ್ತ ಕ್ರಮ ಕೈಗೊಂಡು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಡಬ್ಲುಪಿಐ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೌಲಿಕ ರಾಜಕಾರಣಕ್ಕೆ ಮಾದರಿಯಾಗಿ ಸೇವೆಯ ಮೂಲಕ ಡಬ್ಲುಪಿಐ ಕೆಲಸ ಮಾಡುತ್ತಿದೆ. ಹಲವಾರು ನಗರಸಭೆ, ಪಟ್ಟಣಪಂಚಾಯತ್, ಗ್ರಾಮ ಪಂಚಾಯತ್  ನಲ್ಲಿ ನಮ್ಮ ಸದಸ್ಯರಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್  ಚುನಾವಣೆಯಲ್ಲೂ ಸಹ ನಮ್ಮ ಪಕ್ಷ ಸ್ಪರ್ಧೆ ಮಾಡುವುದು. ಜಾರಕಿಹೊಳಿ ಪ್ರಕರಣ ನಮ್ಮ ಅನೈತಿಕ ರಾಜಕಾರಣಕ್ಕೆ ನೇರ ಸಾಕ್ಷಿಯಾಗಿದೆ. ಇಂತಹದನ್ನು ತಡೆಗಟ್ಟಲು ನೈತಿಕ, ಮೌಲ್ಯಾಧಾರಿತ ರಾಜಕಾರಣದ ಅವಶ್ಯಕತೆ ಇದೆ. ಜನತೆ ಇದನ್ನು ಬೆಂಬಲಿಸಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಆದಿಲ್ ಪಟೇಲ್ ಮಾತನಾಡಿ ಜಿಲ್ಲೆಯಲ್ಲಿ ಬೆಲೆ ಏರಿಕೆಯ ವಿರುದ್ದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೈತ ವಿರೋಧ ಕಾನೂನುಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೌಲಾ ಹಣಗಿ, ಮೊಹಮ್ಮದ್ ಆಲಿಮುದ್ದಿನ್ ಸೇರಿದಂತೆ  ಇತರರು ಉಪಸ್ಥಿತರಿದ್ದರು

Please follow and like us:
error