ಬಿ.ಎಸ್.ಎನ್.ಎಲ್. ಸಂಚಾರಿ ದೂರವಾಣಿ ೪ಜಿ ಯಾಗಿ ಪರಿವರ್ತನೆ : ಕರಡಿ ಸಂಗಣ್ಣ ಅಭಿನಂದನೆ

nna
ಕೊಪ್ಪಳ ಫೆ. ೦೧): ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರತ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್.) ಸಂಚಾರಿ ದೂರವಾಣಿಯ ೨ಜಿ+೩ಜಿ ಯಿಂದ ೪ಜಿ ಯಾಗಿ ಪರಿವರ್ತಿಸಿದ್ದು, ಸಂಸದ ಕರಡಿ ಸಂಗಣ್ಣ ಅವರು ಕೇಂದ್ರ ಸಚಿವರಿಗೆ ಹಾಗೂ ಅಧಿಕಾರಿಗಳಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರತ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್.) ಸಂಚಾರಿ ದೂರವಾಣಿಯ ೨ಜಿ+೩ಜಿ ಇದ್ದು, ಗಂಗಾವತಿ ನಗರ ಮತ್ತು ತಾಲೂಕಿನಲ್ಲಿ ೧೧, ಕೊಪ್ಪಳ ನಗರ ಮತ್ತು ತಾಲೂಕಿನಲ್ಲಿ ೦೭, ಕುಷ್ಟಗಿ ನಗರದಲ್ಲಿ ೦೨, ಯಲಬುರ್ಗಾದಲ್ಲಿ ೦೨, ಮಸ್ಕಿಯಲ್ಲಿ ೦೨, ಸಿಂಧನೂರು ನಗರ ಮತ್ತು ತಾಲೂಕಿನಲ್ಲಿ ೦೫ ಸೇರಿದಂತೆ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಒಟ್ಟು ೨೯ ಬಿ.ಎಸ್.ಎನ್.ಎಲ್. ಸಂಚಾರಿ ದೂರವಾಣಿಯು ೪ಜಿ ಯಾಗಿ ಪರಿವರ್ತಿಸಿ ಈಗಾಗಲೇ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.

Please follow and like us:
error