ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ

ಕೊಪ್ಪಳ: ೨೬ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಅನುಪಮ ಕೊಡುಗೆಗಳು, ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳರವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿಕೊಂಡು ಚಿಲವಾಡಗಿ ಗ್ರಾಮದ ಅನೇಕ ಯುವಕರು ಬಿಜೆಪಿ ಪಕ್ಷ ತೊರೆದು ಶಾಸಕರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಸೇರ್ಪಡೆಗೊಂಡ ಪ್ರಮುಖರು ಸಣ್ಣ ಮರಿಯಪ್ಪ, ನಿಂಗಜ್ಜ ಶಾನಭೋಗ, ಹನುಮಪ್ಪ ಸಂಗಮೇಶ್ವರ, ಹನುಮನಗೌಡ ಪೋಲಿಸ ಪಾಟೀಲ, ಸುರೇಶಪ್ಪ ಕೆರಳಿ, ಬಸಪ್ಪ ಹಿರೇಮನಿ, ಚಿದಾನಂದಪ್ಪ ಹಕ್ಕಿ, ದೇವಪ್ಪ ಬಂಡಿ, ಯಲ್ಲಪ್ಪ ಉದ್ದಾರ, ವೀರೇಶ, ಭರಮಪ್ಪ ಕಾತರಕಿ, ರವಿಚಂದ್ರ ಶಾನಭೋಗ, ಕನಕಪ್ಪ ಹೊಸಪೇಟ, ಮುಕುಂದಪ್ಪ, ಗೌಸ ನಧಾಫ್, ಸಮೀರ ನಧಾಫ್, ಪರಮೇಶ ಕೊಪ್ಪಳ, ಮಹೇಶ ಕಾತರಕಿ ಇನ್ನು ಅನೇಕರು ಪಕ್ಷ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಬೂಮರೆಡ್ಡಿ, ಪ್ರಸನ್ನ ಗಡಾದ, ಅಮ್ಜದ ಪಟೇಲ್, ಮುತ್ತುರಾಜ ಕುಷ್ಟಗಿ, ಯಮನೂರಪ್ಪ ನಾಯಕ, ರಾಮಣ್ಣ ಹದ್ದಿನ, ಶಿವಾನಂದ ಹೊದ್ಲುರ, ಕೌಶಲ ಚೋಪ್ರಾ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.