ಬಿಜೆಪಿ ಕಾರ್ಯಕರ್ತ ಜುಬೇರ್ ಹತ್ಯೆಯನ್ನು ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ

ಭಾಜಪ ಜಿಲ್ಲೆ ಅಲ್ಪ ಸಂಖ್ಯಾತರ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಕೊಪ್ಪಳ: ಭಾರತೀಯ ಜನತಾ ಪಕ್ಷದ ಸಕ್ರೀಯ ಕಾರ್ಯಕರ್ತನಾದ ಜುಬೇರ ಅಹ್ಮದ್ ಇವರ ಬರ್ಭರ ಹತ್ಯೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ಕೊಪ್ಪಳ ಜಿಲ್ಲೆ ಅಲ್ಪ ಸಂಖ್ಯಾತರ ಮೋರ್ಚಾ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ಆರ್.ಎಸ್.ಎಸ್. ಮತ್ತು ಭಾಜಪ ಕಾರ್ಯಕರ್ತರ ಮೇಲಿನ ಹಲ್ಲೆಗಳನ್ನು ಗಮನಿಸಿದರೆ ರಾಜ್ಯ ಸರಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನುವರೆಗೂ ಸಹ ಅಪರಾಧಿಗಳಿಗೆ ಶಿಕ್ಷೆ ನೀಡುವಲ್ಲಿ ವಿಫಲವಾಗಿದೆ. ಆದ್ದರಿಂದ ಬಾಜಪ ಈ ಕೆಳಕಂಡ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಿದ್ದೇವೆ.
ಬೇಡಿಕೆಗಳು:
ಬಿಜೆಪಿ ಕಾರ್ಯಕರ್ತ ಜುಬೇರ್ ಹತ್ಯೆಯನ್ನು ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು.
ಹತ್ಯೆಗೊಳಗಾದ ಜುಬೇರ್ ಅವರ ಕುಟುಂಬಕ್ಕೆ ೫೦ ಲಕ್ಷ ರೂ ಪರಿಹಾರ ನೀಡಬೇಕು. ಗಾಂಜಾ ಮತ್ತು ಮುಕ್ತ ಕರ್ನಾಟಕ ಮಾಡಬೇಕು.
ಸಚಿವ ಹಾಗೂ ಉಲ್ಲಾಳದ ಶಾಸಕ ಯು.ಟಿ ಖಾದರ್ ಮತ್ತು ಮಂಗಳೂರು ಉಸ್ತುವಾರಿ ಸಚಿವ ರಮಾನಾಥ ರೈ ಇವರನ್ನು ಈ ಘೋರ ಹತ್ಯೆಯ ನೈತಿಕ ಜವಾಬ್ದಾರಿ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಕುಷ್ಟಗಿ ದೊಡ್ಡನಗೌಡ ಪಾಟೀಲ, ಅಮರೇಶ ಕರಡಿ, ಸೈಯದ ಅಲಿಮುಜಾವರ, ರಶೀದಸಾಬಮಿಠಾಯಿ, ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ, ಅಬ್ಬು ಬಾಯಿ, ಮೈನುದ್ದಿನ್, ಎಮ್.ಎಮ್ ಹಳ್ಳಿ, ಶ್ರವಣಕುಮಾರ ಸೇರಿದಂತೆ ಇನ್ನಿತರರು ಇದ್ದರು.

Please follow and like us:
error