ಬಿಜೆಪಿಯವರ ನೀಚ ಮನಸ್ಸು ಬಯಲಾಗಿದೆ-ಪತ್ರಕರ್ತ ಬಿ.ಚಂದ್ರೇಗೌಡ

ಕೊಪ್ಪಳ: ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಸಂಭ್ರಮಿಸುವವರ ಪರವಾಗಿ ವಕಾಲತ್ತು ವಹಿಸಿದ ಬಿಜೆಪಿಯವರ ನೀಚ ಮನಸ್ಸು ಬಯಲಾಗಿದೆ ಎಂದು ಪತ್ರಕರ್ತ ಬಿ.ಚಂದ್ರೇಗೌಡ ಹೇಳಿದರು.
ಇಲ್ಲಿನ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಆಯೋಜಿಸಿದ್ದ ನಾನೂ ಗೌರಿ – ಗೌರಿ ಎಂಬ ಚೇತನ ಸ್ಮರಣೆ ಮತ್ತು ಸಂವಾದ ಕಾರ್ಯಕ್ರಮ ಉದ್ದೇಶಿಸಿ ಭಾನುವಾರ ಮಾಂತನಾಡಿದ ಅವರು, ಈ ನಾಡಿನಲ್ಲಿ ಸಾವನ್ನು ಸಂಭ್ರಮಿಸುವವರು ಪರೋಕ್ಷವಾಗಿ ಕೊಲೆಗೆ ಬೆಂಬಲಿಸುವವರೇ ಆಗಿದ್ದಾರೆ. ಗಾಂಧೀಯನ್ನು ಕೊಂದವರೇ ಗೌರಿಯನ್ನನು ಕೊಲೆ ಮಾಡಿದ್ದಾರೆ ಎನ್ನುವುದು ಸ್ಪಷ್ಟ. ಅಲ್ಲದೆ, ಗೌರಿ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿಕೃತವಾಗಿ ಸಂಭ್ರಮಿಸುತ್ತಿದ್ದಾರೆ. ಇಂತಹವರನ್ನು ಈದೇಶದ ಪ್ರಧಾನಿ ಫಾಲೋ ಮಾಡುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಕಳೆದ ೧೮ವರ್ಷಗಳ ಕಾಲ ಗೌರಿ ಲಂಕೇಶ್ ಅವರೊಂದಿಗೆ ಪತ್ರಕರ್ತನಾಗಿ ಕೆಲಸ ಮಾಡಿದ್ದೇನೆ. ಆದರೆ, ಗೌರಿ ಹತ್ಯೆಯ ಬಳಿಕ ಅನಿಸುತ್ತದೆ, ಅವಳೊಬ್ಬ ಮಹಾನ್ ಚೇತನ. ಹಿಂಸೆಯನ್ನು ತಡೆಯುವ ಜತೆಗೆ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಫುಲೆ ದಂಪತಿ ಸೇರಿ ಮಹಾನ್ ನಾಯಕರ ಕನಸಿದ ಭಾರತದ ಮುಂದುವರೆದ ಭಾಗವಾಗಿ ಗೌರಿ ಬದುಕಿದ್ದವರು. ಓರ್ವ ಪತ್ರಕರ್ತೆಯಾಗಿ ಗೌರಿ ಲಂಕೇಶ್ ಅತ್ಯಂತ ನೇರ ಮತ್ತು ನಿಷ್ಠುರವಾಗಿ ಜವಾಬ್ದಾರಿ ನಿರ್ವಹಿಸಿದ್ದಾಳೆ. ಬೈಗುಳ, ಬೇದರಿಕೆಗೆ ಅಂಜದೆ ಮಮತೆಯಿಂದ ಪರಿವರ್ತನೆಗಾಗಿ ಹಪಹಪಿಸಿದವಳು. ಇದು ಕೇವಲ ಗೌರಿಯ ಕೊಲೆಯಲ್ಲ. ಸೈದ್ಧಾಂತಿಕ ಹಾಗೂ ಸಂವಿಧಾನ ವಿರೋಧಿಗಳ ಪೈಶಾಚಿಕ ಕೃತ್ಯ. ಕೇವಲ ಭೌತಿಕವಾಗಿ ಬುದ್ಧ, ಬಸವ, ಅಂಬೇಡ್ಕರ್ ನಮ್ಮೊಂದಿಗೆ ಇಲ್ಲದೇ, ಅವರ ವಿಚಾರಗಳು ಆಳದಲ್ಲಿ ಬೆರೂರಿವೆಯೋ ಹಾಗೆಯೂ ಗೌರಿಯೂ ಸಹ. ಕೇವಲ ವ್ಯಕ್ತಿಗಳನ್ನು ಕೊಲ್ಲ ಬಹುದೇ ವಿನಃ ವಿಚಾರಗಳನ್ನಲ್ಲ. ಈಗ ರಾಜ್ಯ, ದೇಶ, ವಿದೇಶಗಳಲ್ಲಿಯೂ ಅಸಂಖ್ಯಾತ ಗೌರಿಯರು ಹುಟ್ಟಿಕೊಂಡಿದ್ದಾರೆ. ಅವರ ಆಶಯಗಳನ್ನು ಈಡೇರಿಸುವ ಶಪಥ ಮಾಡುತ್ತಲೇ ಇದ್ದಾರೆ. ಚಿವುಟಿದಷ್ಟು ಚಿಗುರೊಡೆಯುತ್ತೇವೆ ಎನ್ನುವುದಕ್ಕೆ ಭೌತಿಕವಾಗಿ ಗೌರಿ ಇಲ್ಲದ ಮೇಲೆನ ಚಳವಳಿಯೇ ಸಾಕ್ಷಿ ಎಂದರು.
ಲೇಖಕಿ ದು.ಸರಸ್ವತಿ ಮಾತನಾಡಿ, ಗೌರಿ ಕೆಂಪು, ನೀಲಿ ಹಾಗೂ ಹಸಿರು ಹೊಂದು ಮಾಡುವ ಜತೆಗೆ ಬಲಿಷ್ಟ ಚಳವಳಿ ಕಟ್ಟುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಳು. ಸಾವಿನ ಕೊನೆಯ ಕ್ಷಣದಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ಹಿಂಸೆ, ಅಸಮಧಾನದ ವಿರುದ್ಧ ವ್ಯತ್ಯೆ ಪಟ್ಟವಳು ಎಂದರು.
ಇದಕ್ಕೂ ಮುನ್ನ ಅಶೋಕ ವೃತ್ತದ ಬೀದಿಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕೆ.ಶರೀಫಾ, ರಮೇಶ್ ಗಬ್ಬೂರು, ವಿಠ್ಠಪ್ಪ ಗೋರಂಟ್ಲಿ, ಹುಲಿಕುಂಟೆ ಮೂರ್ತಿ, ವಿಜಯಲಕ್ಷ್ಮೀ ಕೊಟಗಿ, ಶಾಂತಾದೇವಿ ಹಿರೇಮಠ, ಸರೋಜಾ ಬಾಕಳೆ, ವೀಮಲಾ ಇನಾಮ್‌ದಾರ್, ಪುಷ್ಪಲತಾ ಏಳುಭಾವಿ, ಶ್ರೀನಿವಾಸ ಚಿತ್ರಗಾರ, ಅಮರದೀಪ್, ಸಿರಾಜ್ ಬಿಸರಳ್ಳಿ, ಅಚಿಜನಾದೇವಿ ಕವಿತೆ ವಾಚಿಸಿದರು. ನಂತರ ಮಾನವ ಸರಪಳಿ ನಿರ್ಮಿಸಿ “ಗೌರಿ ಲಂಕೇಶ್ ಅಮರ್ ರಹೇ”, “ದೇಶಭಕ್ತ ವೇಷತೊಟ್ಟ ಹಂತಕರನ್ನು ಬಂಧಿಸಬೇಕು” “ನಾನೂ ಗೌರಿ-ನಾವೆಲ್ಲ ಗೌರಿ”, ಗೌರಿ ಹಂಕರನ್ನು ಬಂಧಿಸುವಂತೆ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಗಂಗಾವತಿಯ ಜನಕವಿ ರಮೇಶ ಗಬ್ಬೂರು ನೇತೃತ್ವದ ಶರಣ ಕಲಾ ಬಳಗ ತಂಡ ಜೀವಪರ ಗೀತೆಗಳನ್ನು ಹಾಡಿತು.
ಹಿರಿಯ ಲೇಖಕಿಯರಾದ ಕೆ.ಶರೀಫಾ, ಎಚ್.ಎಸ್.ಅನುಪಮಾ, ಲೇಖಕ ಹುಲಿಕುಂಟೆ ಮೂರ್ತಿ ಇದ್ದರು.

Please follow and like us:
error