ಬಾಲ್ಯ ವಿವಾಹಕ್ಕೆ ಒಳಪಡುತ್ತಿದ್ದ ಇಬ್ಬರು ಬಾಲಕಿಯರ ರಕ್ಷಣೆ : ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು

ಕೊಪ್ಪಳ ಏ. 15 :  ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕೊಪ್ಪಳ ಜಿಲ್ಲೆಯ  ಕನಕಗಿರಿ ತಾಲೂಕಿನ ವೆಂಕಟಗಿರಿ ಗ್ರಾಮದ ಹಾಗೂ ಕೊಪ್ಪಳ ತಾಲೂಕಿನ ಗೊಂಡಾಬಾಳ ಗ್ರಮದ ಅಪ್ರಾಪ್ತ ಬಾಲಕಿಯರ ಬಾಲ್ಯ ವಿವಾಹವನ್ನು ತಡೆದು, ಬಾಲಕಿಯರನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದೆ.
ಕನಕಗಿರಿ ತಾಲೂಕಿನ ವೆಂಕಟಗಿರಿ ಗ್ರಾಮದ ಬಾಲಕಿಯೊಂದಿಗೆ ಚಿಕ್ಕಮಾದಿನಾಳ ಗ್ರಾಮದ ವ್ಯಕ್ತಿಯೊಂದಿಗೆ ಬಾಲ್ಯವಿವಾಹ ಮಾಡುವುದಾಗಿ  ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೊÃಬೇಷನ ಆಫೀಸರ್ ಶಿವಲೀಲಾ ವನ್ನೂರು, ಸಮಾಜಕಾರ್ಯಕರ್ತೆ ಯಮುನಮ್ಮ, ಔಟರೀಚ್ ವರ್ಕರ್ ದೇವರಾಜ, ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವೆಂಕಟ ರೆಡ್ಡಿ ಮತ್ತು ಸಿಬ್ಬಂದಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಪ್ಪರವರ ನೇತೃತ್ವದಲ್ಲಿ ಬಾಲಕಿ ಮನೆಗೆ ಬೇಟಿ ನೀಡಿದಾಗ ಮದುವೆ ನಿಶ್ಚಯಿಸಿರುವುದು ಖಚಿತಗೊಂಡಿರುವುದಿಂದ ಬಾಲಕಿಯ ಶಾಲಾ ದಾಖಲಾತಿಯನ್ನು ಪರಿಶೀಲಿಸಿದಾಗ ಶಾಲಾ ದಾಖಲಾತಿಯ ಪ್ರಕಾರ ಬಾಲಕಿಗೆ 14 ವರ್ಷ 09 ತಿಂಗಳು ಇದ್ದು, ಈ ಸದರಿ ವಿವಾಹವು ಬಾಲ್ಯ ವಿವಾಹವೆಂದು ಕಂಡು ಬಂದಿದೆ.
 ಹಾಗೂ ಗೊಂಡಾಬಾಳ ಗ್ರಾಮದ ಅಪ್ರಾಪ್ತ ಬಾಲಕಿಯೊಂದಿಗೆ ಚುಕ್ಕನಕಲ್ಲ ಗ್ರಾಮದ ವ್ಯಕ್ತಿಯೊಂದಿಗೆ  ಬಾಲ್ಯವಿವಾಹ ಮಾಡುವುದಾಗಿ  ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೊÃಬೇಷನ ಆಫೀಸರ್ ಶಿವಲೀಲಾ ವನ್ನೂರು, ಅಂಗನವಾಡಿ ಮೇಲ್ವಿಚಾರಕಿ ಜಯಶ್ರಿÃ, ಕೊಪ್ಪಳ ಗ್ರಾಮಾಂತರ ಠಾಣೆಯ ಹನುಮಂತಪ್ಪ, ಮಕ್ಕಳ ಸಹಾಯವಾಣಿಯ ಶರಣಪ್ಪ ಅವರು ಬಾಲಕಿ ಮನೆಗೆ ಬೇಟಿ ನೀಡಿದಾಗ ಮದುವೆ ನಿಶ್ಚಯಿಸಿರುವುದು ಖಚಿತಗೊಂಡಿರುವುದಿಂದ ಬಾಲಕಿಯ ಶಾಲಾ ದಾಖಲಾತಿಯನ್ನು ಪರಿಶೀಲಿಸಿದಾಗ ಶಾಲಾ ದಾಖಲಾತಿಯ ಪ್ರಕಾರ ಬಾಲಕಿಗೆ 17 ವರ್ಷ ಇದ್ದು, ಈ ಸದರಿ ವಿವಾಹವು ಬಾಲ್ಯ ವಿವಾಹವೆಂದು ಕಂಡು ಬಂದಿದೆ.
ಆದ್ದರಿಂದ ಬಾಲಕಿಯರ ಪೋಷಕರಿಗೆ ತಿಳುವಳಿಕೆ ನೀಡಿ ಬಾಲಕಿಯರನ್ನು ವಶಕ್ಕೆ ಪಡೆದು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ. ಬಾಲ್ಯ ವಿವಾಹ ಮಾಡುವುದು, ವಿವಾಹದಲ್ಲಿ ಪಾಲ್ಗೊಳ್ಳುವುದು ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ  .
Please follow and like us:
error