ಬಳ್ಳಾರಿ ವಿ ವಿ ವ್ಯಾಪ್ತಿಯ ಪದವಿ & ಸ್ನಾತಕೋತ್ತರ ಪರೀಕ್ಷೆ ಗಳನ್ನು ಮುಂದೂಡಲು  ಎಸ್ ಎಫ್ ಐ ಪ್ರತಿಭಟನೆ ಮನವಿ

ಗಂಗಾವತಿ :  ಬಳ್ಳಾರಿ ವಿವಿ ವ್ಯಾಪ್ತಿಯ ಎಲ್ಲಾ ಪರೀಕ್ಷೆ ಗಳನ್ನು  ಮುಂದೂಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೆಷನ್ ಎಸ್ ಎಫ್ .ಐ ಒತ್ತಾಯಿಸಿದೆ.

ಈ ಕುರಿತು ಗಂಗಾವತಿಯ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಇದೇ ತಿಂಗಳು ಏಪ್ರಿಲ್ 19 ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷೆ ದಿನಾಂಕ ನಿಗದಿ ಮಾಡಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ ಒಂದೆಡೆ ಸಾರಿಗೆ ಮುಷ್ಕರ ಇನ್ನೊಂದೆಡೆ ಕರೋನಾ ಎರಡನೆಯದೇ ಸಾಂಕ್ರಾಮಿಕಾಯಿಲೆಯಿಂದ ಅನೇಕ ಹಾಸ್ಟೆಲ್ ಗಳು ಮುಚ್ಚಿವೆ ಹಾಗೂ ಮತ್ತೊಂದೆಡೆ ಕೆ ಎಸ್ ಆರ್ ಟಿ ಸಿ ಮುಷ್ಕರದಿಂದ ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯವಿಲ್ಲ .ಹಾಗಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡಲು ಬರ್ತಿದ್ದಾರೆ  ಹಾಗಾಗಿ ಸಾವಿರಾರು ವಿದ್ಯಾರ್ಥಿಗಳು ಏಪ್ರಿಲ್ ಹತ್ತೊಂಬತ್ತು ರಿಂದ ಪರೀಕ್ಷೆಗಳು ನಡೆದರೆ ಪರೀಕ್ಷೆಯಿಂದ ವಂಚಿತ ರಾಗುತ್ತಾರೆ ಮತ್ತು ಅನೇಕ ವಿಶ್ವವಿದ್ಯಾಲಯಗಳು ವೃಕ್ಷಗಳನ್ನು ಈಗಾಗ್ಲೇ ಮುಂದೂಡಿವೆ ಮತ್ತು ಇಪ್ಪತ್ತೈದರಂದು ಕೆ ಸೆಟ್ ಪರೀಕ್ಷೆ ನಡೆಸಲು ಮುಂದಾಗಿದ್ದು ಅದೇ ದಿನಾಂಕದಂದು ಸ್ನಾತಕೋತ್ತರ ಕೋರ್ಸ್ ಗಳಿವೆ ಎರಡರಲ್ಲಿ ಯಾವ ಪರೀಕ್ಷೆ ಬರೆಯಬೇಕು ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಇದ್ದಾರೆ ಹಾಗಾಗಿ ಬಳ್ಳಾರಿ ವಿವಿ ವ್ಯಾಪ್ತಿಯ ಎಲ್ಲಾ ಪರೀಕ್ಷೆ ಗಳನ್ನು  ಮುಂದೂಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೆಷನ್ ಎಸ್ ಎಫ್ .ಐ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷರು ಗ್ಯಾನೇಶ ಕಡಗದ,ಹನುಮೇಶ ಸಹ ಕಾರ್ಯದರ್ಶಿ ,ಶಿವುಕುಮಾರ  ಸದಸ್ಯರು  ಶರೀಪ್.ಟಿಪ್ಪು.ದೇವರಾಜ.ಬಸವರಾಜ.ಗರ್ಜನಾಳ.ಬೀಮೇಶ.ಯಮನೂರ. ಅನೇಕ ವಿದ್ಯಾರ್ಥಿಗಳು  ಇದ್ದರು

Please follow and like us:
error