ಬಣಜಿಗ ಸಮಾಜದಿಂದ ರುದ್ರಭೂಮಿ ಸ್ವಚ್ಛತೆ

ಕೊಪ್ಪಳ: ಕೊಪ್ಪಳದ ಬಣಜಿಗ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ನಗರದ ಹೊರವಲಯದಲ್ಲಿರುವ ವೀರಶೈವ-ಲಿಂಗಾಯತ ರುದ್ರಭೂಮಿಯ ಸ್ವಚ್ಛತೆಗೆ ಶನಿವಾರ ಚಾಲನೆ ನೀಡಲಾಯಿತು.
ಸ್ಮಶಾನದಲ್ಲಿ ಬೆಳೆದಿರುವ ಕಂಟಿ, ಕಸಕಡ್ಡಿಯನ್ನು ಯಂತ್ರದ ಮೂಲಕ ಸ್ವಚ್ಛಗೊಳಿಸುವ ಕೆಲಸ ಪ್ರಾರಂಭವಾಗಿದೆ. ಮಳೆಗಾಲ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರುದ್ರಭೂಮಿಯನ್ನು ಸ್ವಚ್ಛಗೊಳಿಸಿ, ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ.
‘ಅಗಲಿದ ಆತ್ಮೀಯರಿಗೆ ನಾವು ಗೌರವ, ಪ್ರೀತಿ ತೋರಬೇಕೆಂದರೆ ಅವರನ್ನು ಸಮಾಧಿ ಮಾಡಿರುವ ಸ್ಥಳವನ್ನು ಸ್ವಚ್ಛವಾಗಿ, ಹಸಿರಾಗಿ ಇಟ್ಟುಕೊಂಡಿರಬೇಕು’ ಎಂದು ಕೊಪ್ಪಳ ವೇದಿಕೆ ನಿರ್ಧರಿಸಿ ಈ ಕೆಲಸ ಕೈಗೊಂಡಿದೆ.
ರುದ್ರಭೂಮಿಯಲ್ಲಿ ಗಿಡಗಳನ್ನು ನೆಡುವ ಜೊತೆಗೆ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲೂ ಕ್ರಮ ಕೈಗೊಳ್ಳಲಾಗುವುದು. ನಮ್ಮ ಆತ್ಮೀಯರು ಇರುವ ಈ ಭೂಮಿಯಲ್ಲಿ ಭಯಪಟ್ಟುಕೊಂಡು ಓಡಾಡುವ ವಾತಾವರಣ ಇರಬಾರದು. ಹೀಗಾಗಿ, ಸ್ವಚ್ಛತೆ ಜೊತೆಗೆ ಹಸಿರೀಕರಣಕ್ಕೂ ಆದ್ಯತೆ ನೀಡಲಾಗುವುದು ಎಂದು ಸ್ವಯಂಸೇವಕರು ಹೇಳಿದ್ದಾರೆ.
ಸ್ವಚ್ಛತಾ ಅಭಿಯಾನದಲ್ಲಿ ವೇದಿಕೆಯ ಕಾರ್ಯಕರ್ತರಾದ ಸುನೀಲ ಹೆಸರೂರು, ಬಸವರಾಜ ಸಿರಗುಂಪಿ ಶೆಟ್ಟರ್, ರಾಜು ಶೆಟ್ಟರ್, ರಾಜಶೇಖರ ಅಂಗಡಿ, ರಾಜೇಶ ವಾಲಿ, ಜಗದೀಶ ಗುತ್ತಿ, ರಾಜೇಶ ಬೆಳವಣಿಕಿ, ಬಸವರಾಜ ಏಳರೊಟ್ಟಿ, ಚನ್ನಬಸವರಾಜ ಸುಂಕದ, ಸಿದ್ದಣ್ಣ ವಾರದ, ಶಿವುಕುಮಾರ ಪಾವಲಿಶೆಟ್ಟರ್, ದೊಡ್ಡೇಶ ಯಲಿಗಾರ, ವೀರೇಶ ಬಾವಿಕಟ್ಟಿ ಸೇರಿದಂತೆ ಹಲವಾರು ಯುವಕರಿದ್ದರು.
ಜೂನ್ ೫ರಂದು ಗಿಡಗಳನ್ನು ನೆಡುವ ಕಾರ್ಯಕ್ರಮವಿದ್ದು, ಅಂದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬಣಜಿಗ ಸಮಾಜದ ಸಮಾನ ಮನಸ್ಕರ ವೇದಿಕೆ ವಿನಂತಿಸಿದೆ.

Please follow and like us:
error