ಫೆ. ೦೮ ರಿಂದ ಕೊಪ್ಪಳದಲ್ಲಿ ೫೪ನೇ ದಿಂಡಿ ಮಹೋತ್ಸವ

ಕೊಪ್ಪಳ ಫೆ. ೦೫ : ಭಾವಸಾರ ಕ್ಷತ್ರಿಯ ಸಮಾಜದ ಗುರು ಬಾಬಾಸಾಹೇಬ ಅಜರೇಕರ ಹಾಗೂ ಗುರುವರ್ಯ ಗೊವಿಂದಪ್ಪನವರು ನವಲೆ ಇವರ ಕೃಪಾ ಪೋಷಿತ ವಿಠ್ಠಲ ರುಖುಮಾಯಿ ೫೪ನೇ ದಿಂಡಿ ಮಹೋತ್ಸವ ಹಾಗೂ ಗುರುವರ್ಯ ಜ್ಞಾನೋಬರಾವ ಭುರೆ (ಉರ್ಫ) ಮಾವುಲಿ ಸಾಹೇಬ ಅಜರೇಕರ ಇವರ ೪೯ನೇ ಪುಣ್ಯತಿಥಿ ಕಾರ್ಯಕ್ರಮ ಫೆ. ೦೮ ರಿಂದ ೧೨ ರವರೆಗೆ ಕೊಪ್ಪಳದ ಜಿ.ಜಿ.ಎಂ.ಎಸ್. ಶಾಲೆ ಎದುರುಗಡೆಯ ಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಫೆ. ೦೮ ರಂದು ಬೆಳಿಗ್ಗೆ ೪ ರಿಂದ ೬ ಗಂಟೆಯವರೆಗೆ ಕಾಕಡಾರತಿ ಭಜನೆ, ೮ ರಿಂದ ೧೦ ರವರೆಗೆ ಪೋಥಿಸ್ಥಾಪನೆ, ೧೧ ರಿಂದ ೧೨ ರವರೆಗೆ ನಗರ ಪ್ರದಕ್ಷಣೆ, ೧೨ ರಿಂದ ೧-೩೦ ರವರೆಗೆ ಗುರು ಜ್ಞಾನೋಬರಾವ್ ಭುರೆಯಿವರ ಪುಣ್ಯತಿಥಿ ನಿಮಿತ್ಯ ಕೀರ್ತನೆ, ಗುಲಾಲ ಪುಷ್ಪವೃಷ್ಠಿ ಕಾರ್ಯಕ್ರಮ. ಸಂಜೆ ೬ ರಿಂದ ೭ ರವರೆಗೆ ಪ್ರವಚನೆ ಹಾಗೂ ೭ ರಿಂದ ೯ ರವರೆಗೆ ನಾಮ ಸಂಕಿರ್ತನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಫೆ. ೦೯ ರಂದು ಕಾಕಡಾರತಿ ಭಜನೆ, ಪ್ರವಚನ, ಕೀರ್ತನೆ, ಫೆ. ೧೦ ರಂದು ಕಾಕಡಾರತಿ, ಭಾವಸಾರ ಕ್ಷತ್ರೀಯ ಮಹಿಳಾ ಮಂಡಳಿ ತೃತೀಯ ವಾರ್ಷಿಕೋತ್ಸವ. ಫೆ. ೧೧ ರಂದು ಏಕಾದಶಿ ನಿಮಿತ್ಯ ಸಂಜೆ ೦೪ ರಿಂದ ೦೬ ಗಂಟೆಯವರೆಗೆ ದಿಂಡಿ ಸೊಹಳಾ ಭವ್ಯ ಭಜನೆಯೊಂದಿಗೆ ನಗರ ಪ್ರದಕ್ಷಿಣೆ. ಫೆ. ೧೨ ರಂದು ವೇದಮಂತ್ರ ಘೋಷಣೆಯೊಂದಿಗೆ ಮೂರ್ತಿಗಳಿಗೆ ಅಭಿಷೇಕ, ಗೋಪುರ ಕಳಸಗಳ ಪ್ರತಿಷಾಪನೆ, ನಂತರ ಅನ್ನಸಂತರ್ಪಣೆ ಜರುಗಲಿದೆ ಎಂದು ಕೊಪ್ಪಳ ಭಾವಸಾರ ಕ್ಷತ್ರೀಯ ಸಮಾಜದ ಪ್ರಕಟಣೆ ತಿಳಿಸಿದೆ.

Please follow and like us:
error