ಪ್ಲಾಸ್ಟಿಕ್‌ನ ಅತಿ ಬಳಕೆ ಮನುಕುಲಕ್ಕೆ ತಂದಿಟ್ಟಅಪಾಯ

ಬೇವಿನಹಳ್ಳಿ ಗ್ರಾಮದಲ್ಲಿ ಸ್ವಚ್ಚ ಭಾರತಆಂದೋಲನಕ್ಕೆ ಚಾಲನೆ

Koppal ಕಿರ್ಲೋಸ್ಕರ್‌ಫೆರಸ್‌ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕೊಪ್ಪಳದ ಸರ್ವೋದಯ ಸಮಗ್ರಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್, ಬೇವಿನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಬೇವಿನಹಳ್ಳಿ ಗ್ರಾಮದಲ್ಲಿಸ್ವಚ್ಛಭಾರತಅಭಿಯಾನವನ್ನುಆಯೋಜಿಸಲಾಗಿದ್ದು, ಕಿರ್ಲೋಸ್ಕರ್‌ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯಉಪಾಧ್ಯಕ್ಷರಾದ  ಪಿ.ನಾರಾಯಣಇವರು ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದ`ದಲ್ಲಿ ಮಾತನಾಡಿದಅವರು ಪ್ಲ್ಯಾಸ್ಟಿಕ್ ಮುಕ್ತ ಭಾರತವನ್ನು ಮಾಡಲು ನಮ್ಮ ಪ್ರದಾನಮಂತ್ರಿಯವರು ಕರೆ ಕೊಟ್ಟಿದ್ದಾರೆ. ಪ್ಲಾಸ್ಟಿಕ್‌ನ ಅತಿ ಬಳಕೆ ಮನುಕುಲಕ್ಕೆ ತಂದಿಟ್ಟಅಪಾಯ, ಪ್ಲಾಸ್ಟಿಕ್ ಕೇವಲ ಪರಿಸರಕ್ಕಷ್ಟೇ ಹಾನಿಕಾರಕವಾಗಿಲ್ಲ. ಕ್ಯಾನ್ಸರ್, ನರ ಸಂಬಂಧಿ ಸಮಸ್ಯೆಗಳು ಇತ್ಯಾದಿ ರೋಗಗಳಿಗೆ ಈ ಪ್ಲಾಸ್ಟಿಕ್ ಮೂಲ ಕಾರಣವಾಗಿದೆ. ಸರ್ಕಾರವು ಪ್ಲಾಸ್ಟಿಕ್ ಕವರ್‌ಗಳ ಬಳಕೆಯನ್ನು ನಿಷೇಧ ಮಾಡಿದ್ದರೂ ಬಳಕೆಗೆ ಇನ್ನೂ ಸಂಪೂರ್ಣಕಡಿವಾಣ ಬಿದ್ದಿಲ್ಲ, ಜನರೇ ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ತ್ಯಜಿಸದ ಹೊರತು ಬಳಕೆ ನಿಲ್ಲಿಸಲು ಸಾಧ್ಯವಿಲ್ಲ. ಪ್ಲಾಸ್ಟಿಕ್‌ಗೆ ಬದಲಾಗಿ ಪರ್ಯಾಯ ಮಾರ್ಗ ಅನುಸರಿಸಿದರೆ, ಪರಿಸರ ಸಂರಕ್ಷಣೆ ಮತ್ತುಉತ್ತಮಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯಎಂದುಅಭಿಪ್ರಾಯಪಟ್ಟರು. ನಮ್ಮ ನಮ್ಮ ಗ್ರಾಮಗಳನ್ನು ಸ್ವಚ್ಶವಾಗಿಟ್ಟುಕೊಳ್ಳಬೇಕು, ಇದಕ್ಕೆ ಪ್ರತಿಯೊಬ್ಬರೂಕೈಜೋಡಿಸಬೇಕು ನಮ್ಮ ಹಿಂದಿನ ಪೀಳಿಗೆ ನೀಡಿದ ಪರಿಸರವನ್ನುಕಾಪಾಡಿಕೊಂಡು ಹೋಗಬೇಕು ಮತ್ತುಅದನ್ನು ಮುಂದಿನ ಪೀಳಿಗೆಗೆ ನೀಡುವಜವಾಬ್ದಾರಿ ನಮ್ಮೆಲ್ಲರ ಮೇಲಿದೆಎಂದು ತಿಳಿಸಿದರು.

ಕಿರ್ಲೋಸ್ಕರ್‌ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ – ಈ ಕಾರ್ಖಾನೆಯು ಪರಿಸರ ಸಂರಕ್ಷಿಸುವಕುರಿತುಕಿಂಚಿತ್ತಾದರೂ ಸೇವೆಯನ್ನು ಸಲ್ಲಿಸುವದೃಷ್ಠಿಯಿಂದ, ಪುಣೆಯಲ್ಲಿ ಸ್ಥಾಪನೆಗೊಂಡ ವಸುಂಧರಾಕ್ಲಬ್‌ಜೊತೆಗೂಡಿಕಿರ್ಲೋಸ್ಕರ್ -ವಸುಂ`ರಾ ಎಂಬ ವೇದಿಕೆಯಡಿಯಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕಳೆದ ಹತ್ತು ವರ್ಷಗಳಿಂದ ಕೊಪ್ಪಳ ಮತ್ತು ಹೊಸಪೇಟೆಯಲ್ಲಿಆಯೋಜಿಸಲಾಗುತ್ತಿದ್ದು, ಈ ವರ್ಷವೂ ಸಹ ಈ ಚಲನಚಿತ್ರೋತ್ಸವವನ್ನು ನವೆಂಬರ್ ದಿನಾಂಕ ೧೮-೧೧-೨೦೧೯ರಿಂದ೨೧-೧೧-೨೦೧೯ರವರೆಗೆ ಹೊಸಪೇಟೆ- ಕೊಪ್ಪಳ ಭಗದಲ್ಲಿಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಮುಖ್ಯ ಸಂದೇಶ- ಪೃಥ್ವಿಯನ್ನು ರಕ್ಷಿಸಿ, ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗಾಗಿ ! ಪ್ಲ್ಯಾಸ್ಟಿಕ್ ತ್ಯಜಿಸೋಣ, ಫೃಥ್ವಿಯನ್ನು ಸಂರಕ್ಷಿಸೋಣ !!(“NO to Plastic, YES TO EARTH”ಎಂಬದು ಈ ವರ್ಷದ ಮುಖ್ಯವಿಷಯವಾಗಿರುತ್ತದೆ.ಈ ಚಿತ್ರೋತ್ಸದ ಅಂಗವಾಗಿ ವಿವಿಧರೀತಿಯಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಈ ಸ್ವಚ್ಚಭಾರತ್‌ಅಭಿಯಾನವೂಒಂದಾಗಿದೆ.

ಈ ಹಿನ್ನಲೆಯಲ್ಲಿ, ಬೇವಿನಹಳ್ಳಿ ಗ್ರಾಮದಲ್ಲಿ ಸ್ವಚ್ಚತಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಟ್ರಾಕ್ಟರ್‍ಸ್, ಜೆಸಿಬಿಗಳ ಮುಖಾಂತರಗ್ರಾಮದ ವಿವಿಧ ಸ್ಥಳಗಳಲ್ಲಿದ್ದ ಕಸವನ್ನು ಟ್ರಾಕ್ಟರ್‌ಗಳಲ್ಲಿ ತುಂಬಿ ಹೊಸಳ್ಳಿ ಗ್ರಾಮದ ಹತ್ತಿರವಿರುವ ಹೊನ್ನೂರುಮಟ್ಟಿಯ ಬಹು ಗ್ರಾಮ ಪಂಚಾಯತ್‌ಘನತ್ಯಾಜ್ಯ ವಿಲೇವಾರಿಘಟಕಕ್ಕೆರವಾನಿಸಲಾಯಿತು ಹಾಗೂ ಗ್ರಾಮಸ್ಥರಿಗೆ ನಿರಂತರವಾಗಿ ಈ ಸ್ವಚ್ಚತಾಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ತಿಳುವಳಿಕೆ ನೀಡಲಾಯಿತು. ವಿವಿಧ ಸ್ಥಳಗಳಲ್ಲಿ ಕಸವನ್ನು ಸಂಗ್ರಹಿಸಲು ಕಂಪನಿವತಿಯಿಂದ ಕಸ ಸಂಗ್ರಹಿಸುವ ತೊಟ್ಟಿಗಳನ್ನು ನೀಡಲಾಯಿತು. ಸ್ವಚ್ಚತಾ ಕೆಲಸ ಮುಗಿದ ನಂತರ, ರಸ್ತೆಯಎರಡೂ ಬದಿಗಳಲ್ಲಿ ಹಾಗೂ ಮನೆಗಳ ಮುಂದೆ ಸಸಿಗಳನ್ನು ನೆಡಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ, ಬೇವಿನಹಳ್ಳಿ, ಲಿಂಗದಹಳ್ಳಿ ಮತ್ತು ಶಹಾಪುರ ಗ್ರಾಮಗಳ ಮಹಿಳೆಯರಿಗಾಗಿ ಕಸ ಸಂಸ್ಕರಣೆ ಮತ್ತು ವಿಲೇವಾರಿಕುರಿತುಕಾರ್ಯಾಗಾರವನ್ನುಆಯೋಜಿಸಲಾಗಿದ್ದು, ಕೊಪ್ಪಳದ ನಗರಸ`ಯ ಅಧಿಕಾರಿಗಳಾದ   ಬಿ.ಎನ್.ಸವದತ್ತಿಇವರು ನೆರವೇರಿಸಿದರು.

ಈ ಸ್ವಚ್ಚತಾಅಭಿಯಾನದಲ್ಲಿಗ್ರಾಮ ಪಂಚಾಯತಿ ಸದಸ್ಯರುಗಳಾದ   ಬಸವರಾಜ ಮಡ್ಡಿ,  ಮೈಲಾರಪ್ಪ,   ಮುರಳಿ ಬಸಿರಾಳ್, ಮಾಜಿಗ್ರಾಮ ಪಂಚಾಯತ್‌ಅಧ್ಯಕ್ಷರಾದ   ಭೀಮಣ್ಣ ಮೂಲಿಮನಿ,   ಎಮ್.ಬಿ.ಬಸವರಾಜ,   ಮಾರ್ಕಂಡೆಪ್ಪಅಜ್‌ಗರ್,   ಅಮರೇಗೌಡ ಪಾಟೀಲ್, ಪಂಚಾಯತ್‌ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ Uತಾ, ಹೊನ್ನೂರು ಮಟ್ಟಿಯ   ವಾಸು, ಶಿಕ್ಷಕರಾದ ಶ್ರೀ ಮುದ್ದಪ್ಪ , ರೈತ ಸಂಘದ ಅಧ್ಯಕ್ಷರಾz  ಹನುಮಂತಪ್ಪ ಬಾದರಬಂಡಿ, ಸುತ್ತ-ಮುತ್ತಲಿನ ಗ್ರಾಮಗಳ ಅಶಾ ಕಾರ್ಯಕರ್ತರು,  ಸಂಘದ ಸದಸ್ಯೆರುಗಳು, ವಿದ್ಯಾರ್ಥಿಗಳು, ಕಿರ್ಲೋಸ್ಕರ್‌ಕಾರ್ಖಾನೆಯ ಉದ್ಯೋಗಿಗಳು ಸಕ್ರಿಯವಾಗಿಭಾಗವಹಿಸಿದ್ದರು.

Please follow and like us:
error