ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ : ನ. 20 ರಿಂದ ದಾಖಲಾತಿ ಪರಿಶೀಲನೆ

ಕೊಪ್ಪಳ ನ.  ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2018-19 ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಿ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹರಾಗಿರುವ ಅಭ್ಯರ್ಥಿಗಳಿಗೆ 1:2 ಅನುಪಾತದಲ್ಲಿ  ನ. 20 ರಿಂದ ದಾಖಲಾತಿ ಪರಿಶೀಲನೆ ನಡೆಯಲಿದೆ.
ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ, ಎರಡು ಝರಾಕ್ಸ ಪ್ರತಿಗಳು ಮತ್ತು 4 ಭಾವಚಿತ್ರ ಮತ್ತು ಒಂದಕ್ಕಿAತ ಹೆಚ್ಚು ಜಿಲ್ಲೆಗಳಲ್ಲಿ ಆಯ್ಕೆಯಾಗಿದ್ದಲ್ಲಿ ಮತ್ತು ಒಂದಕ್ಕಿAತ ಹೆಚ್ಚು ವಿಷಯಗಳಲ್ಲಿ ಆಯ್ಕೆಯಾಗಿದ್ದಲ್ಲಿ ರೂ.50/- ಗಳ ಮುಖ ಬೆಲೆಯ ಛಾಪಾ ಕಾಗದದಲ್ಲಿ ಒಪ್ಪಿಗೆ ಪತ್ರದೊಂದಿಗೆ ಹಾಜರಾಗುವಂತೆ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖಾ ವೆಬ್ ಸೈಟ್ www.schooleducation.kar.nic.in ನ್ನು ನೋಡಬಹುದು.
ದಾಖಲಾತಿ ಪರಿಶೀಲನೆಗೆ ಸಂಬAಧಿಸಿದAತೆ ನ.20 ರಂದು ಸಮಾಜ ಪಾಠಗಳು (ಕನ್ನಡ ಮತ್ತು ಉರ್ದು ಮಾಧ್ಯಮ), ವೃಂದ ಸ್ಥಳೀಯ ವೃಂದ ಮತ್ತು ಇತರೆ ಮೂಲ ವೃಂದಗಳಲ್ಲಿ 1 ರಿಂದ 12 (ಕನ್ನಡ ಮಾಧ್ಯಮ), 01 (ಉರ್ದು ಮಾಧ್ಯಮ), ನ. 21 ರಂದು ಗಣಿತ ಮತ್ತು ವಿಜ್ಞಾನ (ಕನ್ನಡ ಮಾಧ್ಯಮ), ಸ್ಥಳೀಯ ವೃಂದದಲ್ಲಿ 01 ರಿಂದ 03 (ಕನ್ನಡ ಮಾಧ್ಯಮ), ನ. 22 ರಂದು ಆಂಗ್ಲ ಭಾಷೆ, ಸ್ಥಳೀಯ ವೃಂದದಲ್ಲಿ 01 ರಿಂದ 50 ರವರೆಗೆ, ನ. 25 ರಂದು ಆಂಗ್ಲ ಭಾಷೆ, ಸ್ಥಳೀಯ ವೃಂದ ಮತ್ತು ಇತರೆ ಉಳಿದ ಮೂಲ ವೃಂದದಲ್ಲಿ 01 ರಿಂದ 13 ರವರೆಗೆ ದಾಖಲೆಗಳ ಪರಿಶೀಲನೆ ನಡೆಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಆಡಳಿತ) ಬಸವರಾಜಯ್ಯಸ್ವಾಮಿ ಎಸ್.ಎಂ ರವರು ತಿಳಿಸಿದ್ದಾರೆ.

Please follow and like us:
error