ಪ್ರವಾದಿ ಮಹಮ್ಮದ್(ಸ) ಎಲ್ಲಾರಿಗಾಗಿ ಪ್ರಬಂಧ ಸ್ಪರ್ಧೆ

ಕೊಪ್ಪಳ : ಪ್ರವಾದಿ ಮಹಮ್ಮದ್ (ಸ) ಎಲ್ಲಾರಿಗಾಗಿ ಎನ್ನುವ ಪ್ರಬಂಧ ಸ್ಪರ್ಧೆಯನ್ನು ಜಮಾಅತೆ ಇಸ್ಲಾಮಿ ಹಿಂದ್, ಕೊಪ್ಪಳ ಘಟಕದಿಂದ ಏರ್ಪಡಿಸಲಾಗಿದೆ.
ಇದರಲ್ಲಿ ಭಾಗವಹಿಸವವರು ಕೊಪ್ಪಳ ಮತ್ತು ಭಾಗ್ಯನಗರದ ಪಿಯುಸಿ ಮತ್ತು ಪಿಜಿ ವಿಧ್ಯಾರ್ಥಿಗಳಿಗೆ ಮಾತ್ರ ಆಯೋಜಿಸಲಾಗಿದೆ. ಇದರಲ್ಲಿ ಯಾವುದೇ ಜಾತಿ, ಧರ್ಮ ಇರುವುದಿಲ್ಲ ಹಾಗೂ ವಿಧ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರು ಭಾಗವಹಿಸಬಹುದು.
ಪ್ರಬಂಧವು ಕನ್ನಡ, ಇಂಗ್ಲೀಷ್, ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಬರೆಯಬಹುದು. ಭಾಗವಹಿಸುವವರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂ ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು. ದಾಖಲಾತಿಯ ಕೊನೆಯ ದಿನಾಂಕ ೧೨-೧೧-೨೦೧೯ ಆಗಿರುತ್ತದೆ. ಪ್ರಬಂಧ ಸ್ಪರ್ಧೆಯ ಪರೀಕ್ಷೆ ೧೬-೧೧-೨೦೧೯ ರಂದು ಮಧ್ಯಾಹ್ನ ೧೨:೦೦ರಿಂದ ೧:೩೦ರ ವರೆಗೆ ನಡೆಸಲಾಗುವುದು. ಸ್ಥಳ: ಕೊಪ್ಪಳದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜ್‌ನ ಹೊಸ ಕಟ್ಟಡದಲ್ಲಿ ನಡೆಸಲಾಗುವುದು. ಪರಿಕ್ಷೆಯಲ್ಲಿ ಉತೀರ್ಣರಾದ ವಿಧ್ಯಾರ್ಥಿಗಳಿಗೆ ಪ್ರಥಮ ಬಹುಮಾನವಾಗಿ ರೂ. ೫೦೦೦ ಸಾವಿರಗಳು, ದ್ವಿತೀಯ ಬಹುಮಾನ ರೂ. ೩೦೦೦ ಸಾವಿರಗಳು, ತೃತೀಯ ಬಹುಮಾನ ರೂ. ೨೦೦೦ ಸಾವಿರಗಳು. ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಇದರ ಸಂಬಂಧ ಪಟ್ಟ ಪುಸ್ತಕಗಳು ಮತ್ತು ಹೆಚ್ಚಿನ ಮಾಹಿತಿಗಾಗಿ. ೯೮೪೫೫೭೯೬೦೧, ೯೦೦೮೮೪೮೮೯೩ ಈ ಸಂಖ್ಯೆಗೆ ಸಂಪರ್ಕಿಸಬಹುದು.

Please follow and like us:
error