ಪ್ರಬಂಧ ಸ್ಪರ್ದೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿಧ್ಯಾರ್ಥಿಗಳು

ಕೊಪ್ಪಳ: ಪ್ರವಾದಿ ಮಹಮ್ಮದ್ (ಸ)ರು ಎಲ್ಲಾ ಮಾನವ ಕುಲಕ್ಕೆ ಬಂದಂತಹ ಶ್ರೇಷ್ಠ ಮಾರ್ಗದರ್ಶಕರಾಗಿದ್ದರು. ಅವರು ಸಂಪೂರ್ಣ ವ್ಯಕ್ತಿತ್ವ ಎಲ್ಲಾ ಕಾಲಗಳಲ್ಲಿ ಎಲ್ಲಾ ಜನಾಂಗದವರಿಗೆ ಅತ್ತ್ಯುತ್ತಮ ಮಾದರಿಯಾಗಿದೆ. ಪ್ರವಾದಿ ಮಹಮ್ಮದ್ (ಸ) ಎಲ್ಲಾರಿಗಾಗಿ ಎಂಬ ವಿಷಯದಡಿ ಜಮಾಅತೆ ಇಸ್ಲಾಮಿ ಹಿಂದ್, ಕೊಪ್ಪಳ ಘಟಕದಿಂದ ಬಾಲಕರ ಜೂನಿಯರ್ ಕಾಲೇಜಿನಲ್ಲಿ ನಡೆಸಲಾದ ಪ್ರಬಂಧ ಸ್ಪರ್ದೆಯಲ್ಲಿ ವಿಧ್ಯಾರ್ಥಿಗಳು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು ಎಂದು ಈ ಕಾರ್ಯಕ್ರಮದ ಸಂಚಾಲಕ ಕಲಿಮುಲ್ಲ ಖಾನ್ ತಿಳಿಸಿದರು.
ಈ ಸ್ಪರ್ದೆಯಲ್ಲಿ ಬಾಲಕರ ಜೂನಿಯರ್ ಕಾಲೇಜ್, ಶ್ರೀಗವಿಸಿದ್ದೇಶ್ವರ ಕಾಲೇಜ್, ನವಚೇತನ ಪಿಯು ಕಾಲೇಜ್ ಭಾಗ್ಯನಗರ, ಬಾಲಕರ ಜೂನಿಯರ್ ಕಾಲೇಜ್ ಭಾಗ್ಯನಗರ, ಐಟಿಐ ಕಾಲೇಜ್ ಕೊಪ್ಪಳ, ಮೊರಾರ್ಜಿದೇಸಾಯಿ ಕಾಲೇಜ್, ಸರ್ಕಾರಿ ಪಿಜಿ ಕಾಲೇಜ್ ಇನ್ನು ಅನೇಕ ಕಾಲೇಜ್‌ಗಳಿಂದ ವಿಧ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರು ಬಹಳ ಉತ್ಸಾಹದಿಂದ ಪಾಲ್ಗೊಂಡು ಪ್ರವಾದಿ ಮಹಮ್ಮದ್ (ಸ)ರ ಜೀವನದ ಮತ್ತು ಅವರು ಸಾರಿದ ಶಾಂತಿಯ ಸಂದೇಶದ ಬಗ್ಗೆ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಬರೆದರು.
ಪರೀಕ್ಷೆಯಲ್ಲಿ ೨೦೩ ಜನರು ವಿಧ್ಯಾರ್ಥಿನಿಯರು ಹಾಗೂ ೧೦೪ ವಿಧ್ಯಾರ್ಥಿಗಳು ಒಟ್ಟು ೩೦೭ ಜನ ಪಾಲ್ಗೊಂಡು ಪರೀಕ್ಷೆ ಬರೆದರು. ಪ್ರಬಂಧವು ಕನ್ನಡ, ಇಂಗ್ಲೀಷ್, ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಬರೆಯಬಹುದಾಗಿತ್ತು, ಪರಿಕ್ಷೆಯಲ್ಲಿ ಉತೀರ್ಣರಾದ ವಿಧ್ಯಾರ್ಥಿಗಳಿಗೆ ಪ್ರಥಮ ಬಹುಮಾನವಾಗಿ ರೂ. ೫೦೦೦ ಸಾವಿರಗಳು, ದ್ವಿತೀಯ ಬಹುಮಾನ ರೂ. ೩೦೦೦ ಸಾವಿರಗಳು, ತೃತೀಯ ಬಹುಮಾನ ರೂ. ೨೦೦೦ ಸಾವಿರಗಳು. ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್, ಕೊಪ್ಪಳ ಘಟಕದ ಅಧ್ಯಕ್ಷರಾದ ಅಬ್ದುರ್ ಶುಕುರ್ ಸಾಬ್ ಹೇಳಿದರು ಈ ಸಂದರ್ಭದಲ್ಲಿ ಸೈಯದ್ ಹಿಯತ್ ಅಲಿ, ಮೆಹಮೋದ್ ಸಾಬ್ ಗಿರಣಿ,  ಮಹಮ್ಮದ್ ಅಮಿನುದ್ದಿನ್, ಮಹಮ್ಮದ್ ಫಹಿಮುದ್ದಿನ್, ತಾಜುದ್ದಿನ್, ಇಸ್ಹಾಕ್ ಫಜೀಲ್, ಶ್ರೀ ಮತಿ ಸಬಿಯ ಪಟೇಲ್ ಇನ್ನು ಅನೇಕರು ಉಪಸ್ಥಿತರಿದ್ದರು.

Please follow and like us:
error