ಪೌರಸೇವಾ ಸಂಘದ ವಿಭಾಗದ ಕಾರ್ಯದರ್ಶಿಯಾಗಿ ಲಾಲಸಾಬ್ ಮನಿಯಾರ್ ಅವಿರೋಧ ಆಯ್ಕೆ


ಕೊಪ್ಪಳ.ನ.30. ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಕಲಬುರ್ಗಿ ವಿಭಾಗದ ಕಾರ್ಯದರ್ಶಿಯಾಗಿ ಲಾಲಸಾಬ್ ಮನಿಯಾರ್ ಅವರನ್ನು ಅವಿರೋಧ ಆಯ್ಕೆ ಘೋಷಣೆ ಮಾಡಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ದಿ.28.ರಂದು ಶನಿವಾರ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ರಾಜ್ಯ ಪರಿಷತ್ ಸಭೆಯಲ್ಲಿ ರಾಜ್ಯ ಅಧ್ಯಕ್ಷ ಟಿ.ಆರ್. ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆದು ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಸಂಘಟನೆ. ಹೋರಾಟ. ಪೌರಸೇವಾ ನೌಕರರ ಸಂಘದ ಸದಸ್ಯರಿಗೆ ಸ್ಪಂದಿಸುವ ಕಾಳಜಿಯನ್ನು ಗುರುತಿಸಿ ಸಭೆಯಲ್ಲಿ ಸರ್ವಾನುಮತದಿಂದ ಕಲಬುರ್ಗಿ ವಿಭಾಗದ ಕಾರ್ಯದರ್ಶಿಯಾಗಿ ಲಾಲಸಾಬ್ ಮನಿಯಾರ್ ಅವರನ್ನು ಅವಿರೋಧ ಆಯ್ಕೆಗೊಂಡ ದ್ದನ್ನು ಘೋಷಣೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕ್ರಿಯಾ ಶೀಲವಾಗಿ ಸಂಘದ ಕೆಲಸ ಮಾಡುತ್ತ. ಆಯಾ ಸಂದರ್ಭದಲ್ಲಿ ಪೌರಕಾರ್ಮಿಕರ ಬಗ್ಗೆ ಹೋರಾಟ ಮಾಡುವುದನ್ನು ಗುರುತಿಸಿ ಕಲಬುರ್ಗಿ ವಿಭಾಗದ ಕಾರ್ಯದರ್ಶಿಯಾಗಿ ಲಾಲಸಾಬ್ ಮನಿಯಾರ್ ಅವರನ್ನು ಅವಿರೋಧ ಆಯ್ಕೆ ಮಾಡಿದನ್ನು ಕೊಪ್ಪಳ ನಗರಸಭೆ ಶಾಖೆಯ ಅಧ್ಯಕ್ಷ ಶಿವಪ್ಪ ಗಿಣಿಗೇರಿ. ಕಾರ್ಯದರ್ಶಿ ಗವಿಸಿದ್ದಪ್ಪ ಅಳ್ಳಳ್ಳಿ. ಕಛೇರಿ ವ್ಯವಸ್ಥಾಪಕ ಎಸ್.ಆರ್.ಫಣಿರಾಜ್. ಕಂದಾಯ ಅಧಿಕಾರಿ ಶ್ರೀ ಧರ ಅಂಗಡಿ. ಕಛೇರಿ ಸಂಘಟನಾಧಿಕಾರಿಗಳಾದ ಮಂಜುನಾಥ ಬೆಲ್ಲದ್. ಎಲೆಕ್ಟ್ರಿಷಿಯನ್ ಗ್ರೇಡ್ 1 ಸೋಮಲಿಂಗಪ್ಪ. ಲೆಕ್ಕಾಧೀಕ್ಷಕ ಶರಣಬಸವ ರಾಜ್. ಆರೋಗ್ಯ ನಿರೀಕ್ಷಕ ರಾಘವೇಂದ್ರ ಚವ್ಹಾಣ್. ಮತ್ತು ವಿಶ್ವನಾಥ ಯಾದವ್. ಮೈಲಪ್ಪ ಕಾರಟಗಿ. ಅಖ್ತರ್ ಅಲಿ. ವಸಂತ ಬೆಲ್ಲದ್. ಗವಿಸಿದ್ದಪ್ಪ ಕಟ್ಟಿಮನಿ. ವಿಶ್ವನಾಥ.ವಿ.ಹೆಚ್.ರಾಜ್ ಮಹ್ಮದ್. ರಾಮಚಂದ್ರ. ದುರುಗಪ್ಪ ಕಂದಾರಿ. ಬಸವರಾಜ ಜಾಲಣ್ಣವರ್ ಹಾಗೂ ಅಧಿಕಾರಿಗಳು. ಸಿಬ್ಬಂದಿವರ್ಗ. ಸಂಘದ ಸದಸ್ಯರು ಪ್ರಕರಣಯಲ್ಲಿ ಅಭಿನಂದನೆ ತಿಳಿಸಿದ್ದಾರೆ.

Please follow and like us:
error